Home ಜಿಲ್ಲೆ ಕಲಬುರಗಿ ರಸ್ತೆ ಗುಂಡಿಯಿಂದ ತೊಂದರೆ:ದುರಸ್ತಿಗೆ ಆಗ್ರಹ

ರಸ್ತೆ ಗುಂಡಿಯಿಂದ ತೊಂದರೆ:ದುರಸ್ತಿಗೆ ಆಗ್ರಹ

ಕಾಳಗಿ : ಕಾಳಗಿ – ಭರತನೂರ ಮುಖ್ಯ ರಸ್ತೆ ಸೇರಿದಂತೆ ಹಲವು ರಸ್ತೆಗಳು ಗುಂಡಿಬಿದ್ದು, ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿರುವುದರಿಂದ ಕೂಡಲೇ ದುರಸ್ತಿಗೊಳಿಸಲು ಮುಂದಾಗಬೇಕು ಎಂದು ಬಿಜೆಪಿ ಯುವ ಮುಖಂಡ ಚಂದ್ರಶೇಖರ ಮಾನಶೆಟ್ಟಿ ಆಗ್ರಹಿಸಿದರು.

ರಸ್ತೆಯಲ್ಲಿ ಅಸುರಕ್ಷಿತವಾಗಿ ಬಿಟ್ಟಿರುವ ಕಬ್ಬಿಣದ ರಾಡ್‍ಗಳು ಬೈಕ್ ಸವಾರರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸುತ್ತಿವೆ. ಮುನ್ನೆಚ್ಚರಿಕೆ ಇಲ್ಲದೆ ಕಾಣಿಸಿಕೊಳ್ಳುವ ಈ ರಾಡ್‍ಗಳು ಭೀಕರ ಅಪಘಾತಗಳಿಗೆ ಕಾರಣವಾಗುತ್ತಿವೆ.

ರಸ್ತೆ ದುರಸ್ತಿಯ ಬಗ್ಗೆ ಅಧಿಕಾರಿಗಳಿಗೆ ಎರಡು– ಮೂರು ಬಾರಿ ಹೇಳಿದರು. ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕು ಮತ್ತು ಜಿಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮಳೆಗಾಲ ಆರಂಭವಾಗುತ್ತಿದ್ದು, ರಸ್ತೆ ತುಂಬ ನೀರು ನಿಂತು ಸಂಚಾರವೇ ಅಸ್ತವ್ಯಸ್ತಗೊಳ್ಳುತ್ತದೆ. ಆದ್ದರಿಂದ ಕೂಡಲೇ ರಸ್ತೆಗೆ ಡಾಂಬರೀಕರಣ ಹಾಕಬೇಕು.

ರಸ್ತೆಯಲ್ಲಿ ಗುಂಡಿ, ತಗ್ಗುಗಳು ಬಿದ್ದಿರುವದರಿಂದ ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಅದಲ್ಲದೇ, ದಿನಾಲು ಒಂದಲ್ಲ ಒಂದು ಅಪಘಾತಗಳು ನಡೆಯುತ್ತಿರುವುದರಿಂದ ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.