ಶಾಮನೂರ ಶಿವಶಂಕರಪ್ಪನವರಿಗೆ ಶೃದ್ದಾಂಜಲಿ

ಔರಾದ್ :ಡಿ.೧೭: ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಯುವ ಮುಖಂಡ ಬಸವರಾಜ ಹಳ್ಳೆ ಅವರು ಮಾತನಾಡಿ ಶಾಮನೂರು ಶಿವಶಂಕರಪ್ಪ ಕೊಡಗೈ ದಾನಿಗಳಾಗಿದ್ದರು. ರಾಜ್ಯದ ಅನೇಕ ಜಿಲ್ಲೆಗಳ ವಿದ್ಯಾರ್ಥಿ ವಸತಿ ನಿಲಯಗಳಿಗೆ ತಮ್ಮ ಸ್ವಂತ ಹಣದಿಂದ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದರು, ‘ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಧಾರ್ಮಿಕ ಪರಂಪರೆಯ ಗುರುವಿರಕ್ತರನ್ನು ಒಂದುಗೂಡಿಸಲು ನಿರಂತರವಾಗಿ ಶ್ರಮಿಸಿದ್ದಾರೆ’ ಅವರ ಅಗಲಿಕೆಯಿಂದ ಸಮಾಜಕ್ಕೆ ಹಾನಿಯಾಗಿದೆ ಎಂದರು.
ಈ ಸಂಧರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ಪಿ.ದ್ಯಾಡೆ, ಹಿರಿಯರಾದ ಶಿವರಾಜ ಅಲ್ಮಾಜೆ, ಸಿದ್ರಾಮ ಖೂಬಾ,
ಶ್ರೀನಿವಾಸ ಖೂಬಾ, ಮಲ್ಲಿಕಾರ್ಜುನ ಟಂಕಸಾಲೆ, ಜೈಪಾಲ ರಾಠೋಡ, ಸಂದೀಪ ಪಾಟೀಲ, ಶ್ರೀಕಾಂತ ಚಿದ್ರೆ, ಮಲ್ಲಿಕಾರ್ಜುನ ಟಂಕಸಾಲೆ, ತಾನಾಜಿ ತೋರಣಾ, ಜಗನ್ನಾಥ ಚಿಟಮೇ, ರಮೇಶ ಗೌಡ, ಅಂಬಾದಾಸ ನಳಗೆ, ಅನಿಲ ಬಿರಾದರ ಸೇರದಂತೆ ಅನೇಕರು ಪಾಲ್ಗೊಂಡಿದ್ದರು.