ಅಹಮದಾಬಾದ ವಿಮಾನ ದುರಂತದಲ್ಲಿ ಅಗಲಿದ ನಾಗರಿಕರಿಗೆ ಶ್ರದ್ಧಾಂಜಲಿ

ಕಲಬುರಗಿ,ಜೂ.16- ಅಹಮದಾಬಾದ್ ವಿಮಾನ ದುರಂತದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಸೇಡಂ ರಸ್ತೆಯ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಅಗಲಿದ ವಿಮಾನ ಪ್ರಯಾಣಿಕರಿಗೆ ಮತ್ತು ಇತರ ನಾಗರಿಕರಿಗೆ ಶ್ರದ್ಧಾಂಜಲಿ ಸರ್ಮಪಿಸಲಾಯಿತು.
ಶ್ರದ್ಧಾಂಜಲಿಯಲ್ಲಿ ರಾಧಾಕೃಷ್ಣ ದೊಡ್ಡಮನಿ (ಸಂಸದರು, ಕಲಬುರಗಿ ಲೋಕಸಭೆ), ಮಂಜುನಾಥ ಎಚ್ ಎಸ್ ಜಿ (ಅಧ್ಯಕ್ಷರು, ಭಾರತೀಯ ಯುವ ಕಾಂಗ್ರೆಸ್ ಕರ್ನಾಟಕ) ನಿಗಮ ಭಂಡಾರಿ ಜಿ (ಉಸ್ತುವಾರಿ, ಯುವ ಕಾಂಗ್ರೆಸ್ ಕರ್ನಾಟಕ) ಅಬ್ದುಲ್ ದೇಸಾಯಿ ಜಿ (ಯುತ್ ಕಾಂಗ್ರೆಸ್ ಕಲಬುರಗಿ ಉಸ್ತುವಾರಿ) ಜನಾಬ್ ಮಝರ್ ಖಾನ್ (ಅಧ್ಯಕ್ಷರು, ಕೆಯುಡಿಎ) ಡಾ.ಕಿರಣ ದೇಶಮುಖ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ, ಈರಣ್ಣ ಪಾಟೀಲ್ ಝಲ್ಕಿ, ಶಿವಾನಂದ ಹೊಂಗುಂಟಿ. ಚೇತನ್ ಗೋನಾಯ್ಕ್
ಶರ್ನು ವಾರದ್. ಪಕ್ಷದ ಪದಾಧಿಕಾರಿಗಳಾದ ಕಾರ್ತಿಕ್ ನಾಟಿಕರ್, ರಾಖೀಬ್ ಉಮರ್ ಜುನೈದಿ ತಂಝಿಲ್ ಫರಾಜ್
ಏಜಾಜ್ ನಿಂಬಾಳ್ಕರ್ ರಾಜು ಮಾಡಗಿ ಆಸ್ವಾನ್ ಗಣೇಶ ನಾಗನಹಳ್ಳಿ ಸಂಗಪಾಲ್ ರಾಮಪ್ರಸಾದ್ ಶರ್ಫುದ್ದೀನ್ ಅಸ್ಲಂ ಸಿಂದಗಿ ಸೇರಿದಂತೆ ಪಕ್ಷದ ಇತರ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.