ಕಾರ್ಮಿಕರ ಮಕ್ಕಳಿಗೆ ಸನ್ಮಾನ

ಹುಬ್ಬಳ್ಳಿ, ಆ28: ಧಾರವಾಡ ನಗರದ ಉತ್ತರ ಕರ್ನಾಟಕ ದಿವಂಗತ ಎ ಜೆ ಮುಧೋಳ ಅಭಿಮಾನಿಗಳ ಕಟ್ಟಡ ಮತ್ತು ಇತರೇ ನಿರ್ಮಾಣ ಸಂಘದ ವತಿಯಿಂದ ಧಾರವಾಡ ಸಂಘದ ಕಚೇರಿ ಆವರಣದಲ್ಲಿ ಕಟ್ಟಡ ಕರ್ಮಿಕರ 10 ಮಕ್ಕಳಿಗೆ ಎಸ್ ಎಸ್ ಎಲ್ ಸಿ 2024-2025 ಪರೀಕ್ಷೆಯಲ್ಲಿ 75 ಮತ್ತು 80% ಗಿಂತ ಹೆಚ್ಚು ಅಂಕ ಪಡೆದವರಿಗೆ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ಬಾಬಾಜಾನ್ ಮುಧೋಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಬಡ ಕಟ್ಟಡ ಕಾರ್ಮಿಕರ ಕುಟುಂಬದವರು ಮುಖ್ಯ ವಾಹಿನಿಗೆ ಬರಬೇಕು ಅಂದರೆ ಶಿಕ್ಷಣ ಕಲಿಯ ಬೇಕು, ಸಮಾಜದ ಗಣ್ಯರು ಇಂಥ ಮಕ್ಕಳನ್ನು ಗುರುತಿಸಿ ಇವರ ಏಳ್ಗೆಗಾಗಿ ಸಹಾಯ ಮಾಡಬೇಕೆಂದು ಹೇಳಿದರು.