
ತಾಳಿಕೋಟೆ:ಜ.೨೯: ತಾಲೂಕಿನ ಶಳ್ಳಗಿ ಗ್ರಾಮದ ಸಮಾಜ ಸೇವಕರಾದ ಸುರೇಶಗೌಡ ಕಲ್ಯಾಣಪ್ಪಗೌಡ ನಾಡಗೌಡ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಸುಮಿತ್ರಿ ನಾಡಗೌಡ ದಂಪತಿಗಳಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಧಾರ್ಮಿಕ, ಶೈಕ್ಷಣಿ, ಅಲ್ಲದೇ ಸಾಮಾಜಿ ಕ್ಷೇತ್ರಗಳ ಕಾರ್ಯಗಳಿಗೆ ಸದಾ ಸಹಾಯ ಹಸ್ತ ಕಲ್ಪಿಸುತ್ತಾ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಇವರು ಶಳ್ಳಗಿ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು ೧ ಲಕ್ಷ ೩೦ ಸಾವಿರ ರೂ. ವೆಚ್ಚದಲ್ಲಿ ಭವ್ಯ ವೇದಿಕೆ ನಿರ್ಮಿಸುವದರೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲು ಅನುವು ಮಾಡಿಕೊಟ್ಟಿದ್ದಾರೆ.
ಸದಾ ಸಮಾಜಮುಖಿ ಕಾರ್ಯಗಳಿಗೆ ಸಹಕಾರ ನೀಡುವದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಹಾಯವನ್ನು ನೀಡಿದ್ದಕ್ಕೆ ಶಾಲೆಯ ವತಿಯಿಂದ ಗಣರಾಜ್ಯೋತ್ಸವ ಸಂದರ್ಬದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಮುಖಂಡರುಗಳಾದ ಕಾಶಿರಾಯಗೌಡ ದೇಸಾಯಿ, ಪ್ರಭುಗೌಡ ಚಿಂಚೋಳಿ, ಗ್ರಾಂಪA ಸದಸ್ಯ ಜೈಪಾಲರೆಡ್ಡಿ, ಬಸವಂತ್ರಾಯ ಚೌದ್ರಿ, ನಿಂಗಣ್ಣ ಹೊಸಮನಿ, ಬಂಡೆಪ್ಪ ಕೋರಿ, ಬಸವರಾಜ ನಾಯ್ಕಲ್, ಆದಪ್ಪ ಸಜ್ಜನ, ಹಾರೂನ ಖಾಜಿ, ಮುಖ್ಯಗುರುಗಳಾದ ಬಿ.ಸಿ.ಗೋಗಿ, ಶಿಕ್ಷಕರಾದ ಕೆ.ಕೆ.ಅಸ್ಕಿ, ಆರ್.ಎಂ.ಚೌದ್ರಿ, ಬಿ.ವೈ.ಜಟ್ಟಗಿ, ಸಿ.ಬಿ.ಗುಡ್ಡದ, ಕುರಣಕುಮಾರ ಎನ್.ಕೆ., ಅಂಗನವಾಡಿ ಕಾರ್ಯಕರ್ತೆ ಗುರುಬಸಮ್ಮ ಚೌದ್ರಿ ಮೊದಲಾದವರು ಉಪಸ್ಥಿತರಿದ್ದರು.






















