
ಕಲಬುರಗಿ,ನ.2: ಕರ್ನಾಟಕ ರಾಜ್ಯ ಸರ್ಕಾರದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ನಂದಕುಮಾರ್ ಮಾಲಿ ಪಾಟೀಲ್ ಅವರನ್ನು ಕಲಬುರಗಿಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕøತರನ್ನು ಗೌರವಿಸಿ, ಅವರ ಸಾಧನೆಗೆ ಅಭಿನಂದನೆ ಸಲ್ಲಿಸಲಾಯಿತು.ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವ ನಂದಕುಮಾರ್ ಮಾಲಿ ಪಾಟೀಲ್ ಅವರಿಗೆ ಸನ್ಮಾನ ಸಲ್ಲಿಸುವ ಮೂಲಕ ನಿಗಮವು ಗೌರವ ವ್ಯಕ್ತಪಡಿಸಿತು
ಈ ಸಂದರ್ಭದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮಲ್ಲಿನಾಥ್ ಹಾಗೂ ತಾಲೂಕ ಅಭಿವೃದ್ಧಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು


















