ವಿಜಯಪುರ, ಸೆ. 30:ಬೆಂಗಳೂರಿನ ಮಲ್ಲಸಂದ್ರ ಸ್ಕೆಟಿಂಗ್ ಅಕಾಡೆಮಿ ವತಿಯಿಂದ ಸೆ. 28ರಂದು ನಡೆದ 6 ನೇ ದಕ್ಷಿಣ ವಲಯ ರೋಲ್ ಬಾಲ ಕ್ರೀಡಾಕೂಟ ಪಡೆಯಿತು.
ಈ ಕ್ರೀಡಾಕೂಟದಲ್ಲಿ 7 ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಥಿತಿಗಳಾಗಿ ದಕ್ಷಿಣ ವಲಯದ ರೊಲ್ ಬಾಲ ಕ್ರೀಡೆಯ ಉಸ್ತುವಾರಿ ಎಂ.ಪಿ. ಸುಬ್ರಮಣಿಯಂ, ಕೇರಳದಿಂದ ಸಾಜಿ, ತಮಿಳುನಾಡಿನಿಂದ ಗೋವಿಂದರಾಜು, ಪಾಂಡಿಚೇರಿಯಿಂದ ಮೋಹನ ಕೃಷ್ಣ್, ಆಂಧ್ರಪ್ರದೇಶದಿಂದ ಅನಿಲಕುಮಾರ ರೆಡ್ಡಿ, ಕರ್ನಾಟಕದಿಂದ ಮಹೇಂದ್ರ ಕುಮಾರ್ ಅವರ ಸಮ್ಮುಖದಲ್ಲಿ ವಿಜಯಪುರ ಜಿಲ್ಲಾ ರೋಲ್ ಬಾಲ ಸಂಸ್ಥೆಯ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ ಉತ್ನಾಳ ಅವರನ್ನು ಸನ್ಮಾನಿಸಲಾಯಿತು.





















