
ಸಂಜೆವಾಣಿ ವಾರ್ತೆ
ವಿಜಯಪುರ, ಡಿ. ೧೬: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರ ಶಿವಶಂಕರಪ್ಪನವರಿಗೆ
ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಶ್ರದ್ಧಾಂಜಲಿ ಸಲ್ಲಿಸಿದೆ.
ಶಿವಶಂಕರ್ ಅವರು ಅಜಾತಶತ್ರುಗಳು. ಮುತ್ಸದ್ದಿಗಳು, ಶೈಕ್ಷಣಿಕ ಸಂಸ್ಥೆಯ ಹರಿಕಾರರು, ಸಾಮಾಜಿಕ ಕಾರ್ಯಕರ್ತರು, ಬಡವರ ಬಂಧುಗಳು, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಆಗಿದ್ದರು. ಅವರು ನಮ್ಮನ್ನು ಅಗಲಿದ್ದರಿಂದ ತುಂಬಲಾರದ ಹಾನಿಯಾಗಿದೆ.
ಇದೇ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ. ಸಂಗಮೇಶ ಬಿರಾದಾರ ಸಂಸ್ಥೆಯಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರು. ಪ.ಪೂ.ಶ್ರೀ ಸಿದ್ಧೇಶ್ವರ ಸ್ವಾಮಿಗಳೊಂದಿಗೆ ಒಡನಾಟ ಹೊಂದಿದವರು. ಸಂಶೋಧನ ಮಾರ್ಗದರ್ಶಕರಾಗಿ ಕರ‍್ಯ ಪ್ರವೃತ್ತರಾಗಿದ್ದವರು. ಅವರ ಅಗಲಿಕೆ ಸಂಶೋಧನೆ ಕೇಂದ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಶೋಕಿಸಿದ್ದಾರೆ.
ಇವರೀರ್ವರ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಡಾ. ನಿರ್ದೇಶಕ ಕೃಷ್ಣ ಕೊಲ್ಹಾರ ಕುಲಕರ್ಣಿ, ಕರ‍್ಯದರ್ಶಿ ಡಾ. ಎಂ.ಎಸ್. ಮದಭಾವಿ, ಸಂಯೋಜನಾಧಿಕಾರಿ ಡಾ. ವಿ.ಡಿ.ಐಹೊಳ್ಳಿ, ಕಾನೂನು ಸಲಹೆಗಾರ ಸೂರ್ಯಕಾಂತ ಬಿರಾದಾರ, ಪ್ರಾಧ್ಯಾಪಕ ಡಾ. ಸುಭಾಸಚಂದ್ರ ಕನ್ನೂರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

























