
ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ವಿನೋದ್ ಅಪ್ಪೆ ಅವರನ್ನು ಡಾ. ಬಿ.ಆರ್. ಅಂಬೇಡ್ಕರ್ ಯುತ್ ಬ್ರಿಗೇಡ್ ವತಿಯಿಂದ ನಗರದಲ್ಲಿ ಬುಧವಾರ ಸನ್ಮಾನಿಸಲಾಯಿತು.
ಬ್ರಿಗೇಡ್ ಅಧ್ಯಕ್ಷ ಉದಯ ನಾಯಕ್ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು.
ಅಪ್ಪೆ ಅವರ ನೇಮಕ ಸೂಕ್ತವಾಗಿದೆ. ಅವರು ಬೀದರ್ ನಗರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಲಿದ್ದಾರೆ ಎಂದು ನಾಯಕ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖರಾದ ಸತೀಶ್ ಲಕ್ಕಿ, ಸಚಿನ್ ಬಂದಿಗೆ, ರವೀಂದ್ರ, ರಾಕೇಶ್, ಅಲೋಕ್ ಫುಲೆಕರ್, ಪ್ರಕಾಶ್ ನಾಯಕ್ ಮತ್ತಿತರರು ಇದ್ದರು.























