
ಕೋಲಾರ,ಫೆ,೧೨- ಯೋಜನೆಯ ಬೆಂಗಳೂರು ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ವತಿಯಿಂದ ತಾಲ್ಲೂಕಿನ ಹೊಲೇರಹಳ್ಳಿ ಗ್ರಾಮದ ಮುನಿವೆಂಕಟಮ್ಮ, ಧನಮಟ್ನಹಳ್ಳಿಯ ವೆಂಕಟರಮಣಯ್ಯ ಅವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಹಸ್ತಂತರಿಸಲಾಯಿತು.
ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ, ವಾತ್ಸಲ್ಯ ನಾಮಫಲಕ ಅನಾವರಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನಡೆಯುತ್ತಿರುವಂತಹ ವಾತ್ಸಲ್ಯ ಮನೆಗಳು ರಾಜ್ಯ ಆದಂತ ೯೦೦ ಮನೆಗಳು ನಿರ್ಮಾಣ ಮಾಡಿ ನೀಡಲಾಗಿದೆ ಎಂದು ತಿಳಿಸಿದರು.
ಯೋಜನೆಯಿಂದ ೨೦ ಸಾವಿರ ಮಂದಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಿರುತ್ತಾರೆ ಒಬ್ಬ ಫಲಾನುಭವಿಗೆ ಪ್ರತಿ ತಿಂಗಳು ೧೦೦೦ ರಿಂದ ೧೫೦೦ ರೂ ವರಗೆ ಪೂಜ್ಯ ವೀರೇಂದ್ರ ಹೆಗ್ಗಡೆಇ, ಮಾತೃಶ್ರೀ ಅಮ್ಮನವರು ನೀಡುತ್ತಿದ್ದಾರೆ ಎಂದು ತಿಳಿಸಿ, ಜೊತೆಯಲ್ಲಿ ವಾತ್ಸಲ್ಯ ಕಿಟ್, ವಾತ್ಸಲ್ಯ ಫುಡ್ ಮಿಕ್ಸ್, ಜನಮಂಗಳ ಪರಿಕರ ವದಗಣೆ ಇತ್ಯಾದಿ ೧೦ ಹಲವಾರು ಕಾರ್ಯಕ್ರಮಗಳನ ಬಗ್ಗೆ ಮಾಹಿತಿ ನೀಡಿದರು.
ಧರ್ಮಸ್ಥಳ ಯೋಜನೆಯಿಂದ ದೇವಾಲಯಗಳ ಅಭಿವೃದ್ದಿಗೆ ನೆರವು, ಸಂಕಷ್ಟದಲ್ಲಿರುವ ಅನಾಥರಿಗೆ, ವಿಕಲಚೇತನರಿಗೆ ಮಾಸಿಕ ವೇತನ ನೀಡಿಕೆ, ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ ಗೌರವಧನ ನೀಡಿಕೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೆರವು, ಶಾಲೆಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನೆರವು, ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಜಿಲ್ಲೆ ಜೀವನಾಡಿಗಳಾದ ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಿ ಪುನಶ್ಚೇತನದ ಕೆಲಸ ಮಡಲಾಗುತ್ತಿದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಕಾರ್ಯಗಳಲ್ಲಿ ಸಿಂಹ ಪಾಲು ಕೋಲಾರ ಜಿಲ್ಲೆಗೆ ಸಿಕ್ಕಿದ್ದು, ಇಂತಹ ಕಾರ್ಯಕ್ಕೆ ನೆರವಾಗಿರುವ ಪೂಜ್ಯ ಹೆಗಡೆಯವರು ಗ್ರಾಮೀಣ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ಯೋಜನಾಧಿಕಾರಿ ರಘು, ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶಮೂರ್ತಿ, ಸೀತಿ ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನ, ಸಮನ್ವಯ ಅಧಿಕಾರಿ ಶಿಲ್ಪ, ಮೇಲ್ವಿಚಾರಕರು ಮಮತಾ,ಸೇವಾ ಪ್ರತಿನಿಧಿ ಜ್ಯೋತಿ, ಗಾಯತ್ರಿದೇವಿ, ಕೋಮಲ, ಕಾಂತಮ್ಮ, ಗಾರೆ ಮೇಸ್ತ್ರಿ ಮುನಿರಾಜು, ಮನೋಜ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




























