
ನವಲಗುಂದ,ಮೇ21 : ಕೃಷಿಯನ್ನು ರೈತ ಲಾಭದಾಯಕ ಗೊಳಿಸಲು ಕೃಷಿಯ ಜೊತೆಗೆ ಉಪ ಕಸಬಾಗಿ ಕುರಿ, ಕೋಳಿ, ಹೈನುಗಾರಿಕೆ ಹಾಗೂ ಮೀನು ಸಾಕಾಣಿಕೆ ಮಾಡುವದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ಮೊರಬ ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿ ಹಾಗೂ ದಾನೇಶ್ವರಿ ಫಾರ್ಮ್ ಹೌಸ್ ನ ಮಾಲಿಕ ಮಂಜುನಾಥ್ ಕಾಲವಾಡ ಹೇಳಿದರು.
ಅವರು ಮಂಗಳವಾರ ಮೊರಬ ಗ್ರಾಮದಲ್ಲಿ ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ್, ದಾನೇಶ್ವರಿ ಫಾರ್ಮ್ ಹೌಸ್ ಮೊರಬ ಹಾಗೂ ರೂಡ್ಸೆಟ್ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ನಂತರ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಕೆನರಾ ಬ್ಯಾಂಕ್ ನ 68 ಜನ ಸಹಾಯಕ ಪ್ರಭಂದಕರು, ಪ್ರಶಿಕ್ಷಣಾರ್ಥಿಗಳೊಂದಿಗೆ ಫಾರ್ಮಗಳಿಗೆ ತರಳಿ ಎಫ್ ಪಿ ಒ ರಚನೆ, ಅವುಗಳ ಕಾರ್ಯನಿರ್ವಹನೆ, ಮತ್ತು ಕುರಿ ಮತ್ತು ಆಡು ಸಾಕಣೆ ಮಾಹಿತಿ ನೀಡಿರು.
ಕಂಪನಿ ಸಿಇಓ ಯೋಗಪ್ಪ ಧಾರವಾಡ, ಕಾನೂನು ಸಲಹೆಗಾರ ಚಿದಾನಂದ ಪಿ ಮನ್ಸೂರ್, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ನಿರ್ದೇಶಕರ ಬಸವರಾಜ ಕುಂದಗೋಳಮಠ, ರುಡ್ ಸೆಟ್ ಸಂಸ್ಥೆಯ ಡೈರೆಕ್ಟರ್ ಪ್ರುಥ್ವಿರಾಜ್ ಜಿ. ಪಿ ಕೆನರಾ ಬ್ಯಾಂಕ್, ಪುಣೆ ವ್ರುತ್ತದ ಹಿರಿಯ ಪ್ರಬಂಧಕರಾದ ಮಂಜೀತ್ ಸಿಂಗ್ ಯಾದವ್, ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಜಗದೀಶ ಪೂಜಾರ. ಡೈರೆಕ್ಟರ್ ರೂಡ್ಸೆಟ್, ಹಾಗೂ ಕಂಪನಿ ನಿರ್ದೇಶಕರು ಗ್ರಾಮಸ್ಥರು ಉಪಸ್ಥಿತರಿದ್ದರು.
























