
ಚನ್ನಮ್ಮನ ಕಿತ್ತೂರು, ಜೂ10: ಅಬ್ದುಲ್ ನಜೀರಸಾಬ ಗ್ರಾಮೀಣಾಭಿವೃದ್ಧಿ ಕೇಂದ್ರ ಬೆಂಗಳೂರು ಹಾಗೂ ತಾಪಂ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಗ್ರಂಥಾಲಯ ಅರಿವು' ಕೇಂದ್ರದ ನೂತನ ಸಲಹಾ ಸಮಿತಿ ಸದಸ್ಯರಿಗಾಗಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾಲೂಕಿನ ಬೈಲೂರು, ದಾಸ್ತಿಕೊಪ್ಪ, ಅವರಾದಿ ಹಾಗೂ ತಿಗಡೊಳ್ಳಿ ಗ್ರಾಮಗಳ
ಅರಿವು’ ಕೇಂದ್ರಗಳಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾತನಾಡಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉನ್ನತ ಸ್ಥಾನ ಗಳಿಸಲು ಗ್ರಾಮೀಣ ಗ್ರಂಥಾಲಯಗಳಿಂದ ಪಡೆದ ಮಾಹಿತಿಯಿಂದ ತಮಗೆ ಉಪಯುಕ್ತವಾಗಿದೆ ಎಂದÀರು.
ಸರ್ಕಾರವು ಈ ನಿಟ್ಟಿನಲ್ಲಿ ಅರಿವು' ಮಾಹಿತಿ ಕೇಂದ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. 2023ರಿಂದ ಗ್ರಾಮೀಣ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಮರುನಾಮಕರಣ ಮಾಡಿ
ಅರಿವು’ ಕೇಂದ್ರಗಳೆಂದು ಕರೆಯಲಾಗುತ್ತಿದ್ದು, ಇವು ಗ್ರಂಥಪಾಲಕರ ಹಾಗೂ ಗ್ರಂಥಾಲಯಗಳ ಅಭಿವೃದ್ಧಿಗೆ ಪೂರಕವಾಗಿವೆ. ಗ್ರಾಪಂ ಅಧ್ಯಕ್ಷ, ಪಿಡಿಓಗಳು, ವಿದ್ಯಾರ್ಥಿ , ನಾಯಕರು, ಸ್ಥಳೀಯ ಸಾಹಿತಿಗಳು ಮತ್ತು ಹಿರಿಯ ನಾಗರಿಕರನ್ನು ಒಳಗೊಂಡಂತೆ ಒಟ್ಟು 13 ಜನರ ಸಲಹಾ ಸಮಿತಿಯನ್ನು ನೇಮಿಸಲು ಸರ್ಕಾರ ಆದೇಶಿಸಿತ್ತು. ಈ ಸಲಹಾ ಸಮಿತಿಯನ್ನು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅರ್ಹ ಸದಸ್ಯರನ್ನು ನಿಯೋಜಿಸಿ ಅನುಮೋದನೆ ಪಡೆಯುವ ಮೂಲಕ ಕಾರ್ಯರೂಪಕ್ಕೆ ತರಲಾಗಿದೆ. ಸದಸ್ಯರ ಕಾರ್ಯವೈಖರಿ, ಜವಾಬ್ದಾರಿಗಳು ಮತ್ತು ಗ್ರಾಪಂ ಪಾತ್ರ ಕುರಿತು ತರಬೇತಿ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ನರೇಗಾ ಸಹಾಯಕ ನಿರ್ದೇಶಕ ಮಹಮ್ಮದಗೌಸ್ ರಿಷಲ್ದಾರ, ಪಿಡಿಓಗಳು ಹಾಗೂ ಗ್ರಾಪಂ ಅಧ್ಯಕ್ಷರು ಚಾಲನೆ ನೀಡಿದರು.
`ಈ ಸಂದರ್ಭದಲ್ಲಿ ಬೈಲೂರು ಗ್ರಂಥಪಾಲಕ ಜಗದೀಶ್ ಅಂಗಡಿ, ದಾಸ್ತಿಕೊಪ್ಪ ಗ್ರಾಮ ಪಂಚಾಯತ್ ಗ್ರಂಥಾಲಯದ ಬಗ್ಗೆ ಸಾಹಿತಿ ಸಿದ್ದರಾಮ ತಳವಾರ ಸೇರಿದಂತೆ ಇತರರು ಗ್ರಾಮೀಣ ಗ್ರಂಥಾಲಯಗಳ ಡಿಜಿಟಲ್ ರೂಪಾಂತರ ಮತ್ತು ಅವುಗಳ ಉಪಯುಕ್ತತೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ವೇಳೆ ಪಂಚಾಯತ ರಾಜ್ ಸಹಾಯಕ ನಿರ್ದೇಶಕ ಸುರೇಶ ನಾಗೂಜಿ, ನರೇಗಾ ಸಹಾಯಕ ನಿರ್ದೇಶಕ ಮಹಮ್ಮದ ಗೌಸ್ ರಿಸಲ್ದಾರ, ಡಿಟಿಸಿ ಆರತಿ ನವಲೂರ, ಗ್ರಂಥಪಾಲಕ ಸಲಹಾ ಸಮೀತಿ ಸದಸ್ಯ ಲಕ್ಷ್ಮೀ ಗಣಾಚಾರಿ ವಿವಿಧ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.