ಕೋಲಾರ,ಸೆ.೬- ಬಂಗಾರಪೇಟೆ ತಾಲ್ಲೂಕಿನ ಹಂಚಾಳಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ವಿದ್ಯಾಸಂಸ್ಥೆಗಳ ಸಂಕೀರ್ಣದಲ್ಲಿರುವ ಚೈತನ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ೨೦೨೪-೨೫ ನೇ ಸಾಲಿನಲ್ಲಿ ೧೧೯ ತರಬೇತಿದಾರರು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗು ವುದರೊಂದಿಗೆ ಸಂಸ್ಥೆ ಶೇ.೧೦೦ ರಷ್ಟು ಫಲಿತಾಂಶವನ್ನು ಪಡೆದಿದೆ. ೪ ತರಬೇತಿದಾರರು ಡಿಸ್ಟಿಂಕ್ಷನ್, ೧೧೫ ತರಬೇತಿದಾರರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದರಿಂದ ಸಂತಸವನ್ನು ವ್ಯಕ್ತಪಡಿಸಿ, ಪ್ರಾಂಶುಪಾಲ ರಾದ ಕುಮಾರಿ ಯಶಸ್ವಿನಿ ಮತ್ತು ಸಿಬ್ಬಂದಿಯವರನ್ನು ಅಭಿನಂದಿಸಿದರು.
ಎಲ್ಲಾ ತರಬೇತಿದಾರರು ರೂಪಿಸಿ ಕೊಳ್ಳಲು ಈ ಸಂಸ್ಥೆ ನಿಮಗೆ ದಾರಿ ದೀಪವಾಗಿದೆ. ನೀವುಗಳೆಲ್ಲರೂ ಗುರುಹಿರಿಯರಿಗೆ, ನಿಮ್ಮ ತಂದೆ ಉತ್ತಮ ಜೀವನವನ್ನು ತಾಯಿಗೆ, ಸಂಸ್ಥೆಗೆ ಚಿರ ಋಣಿಯಾಗಿರಬೇಕೆಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಚಂದ್ರಶೇಖರ್ ಮನದಾಳದ ನುಡಿಗಳನ್ನು ಹಂಚಿಕೊಂಡರು.
ಗ್ರಾಮೀಣ ಪ್ರದೇಶದ ಹಿಂದುಳಿದ, ಅಲ್ಪಸಂಖ್ಯಾತರು, ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರ ವಾಗಲು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆಗಳಾದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಶ್ರೀ ಸಿದ್ದಾರ್ಥ ಪಾಲಿಟೆಕ್ನಿಕ್, ಶ್ರೀ ಈಶ್ವರಮ್ಮಾಜಿ ಸ್ಕೂಲ್ ಅಂಡ್ ಕಾಲೇಜ್ ಆಫ್ ನರ್ಸಿಂಗ್ (ಉಓಒ, ಃsಛಿ, ಒsಛಿ) ೩ ಪ್ಯಾರಾಮೆಡಿಕಲ್ ಕಾಲೇಜ್, ಬಿ ಫಾರ್ಮಸಿ, ಡಿ ಫಾರ್ಮಸಿ, ಮತ್ತು ಅಲೈಡ್ ಹೆಲ್ತ್ ಸೈನ್ಸ್ ಮುಂತಾದ ಶೈಕ್ಷಣಿಕ ವಿಭಾಗಗಳನ್ನು ಪ್ರಾರಂಭಿಸಿ ಉತ್ತಮ ಮತ್ತು ನುರಿತ ಉಪನ್ಯಾಸಕರಿಂದ ಶಿಕ್ಷಣವನ್ನು ನೀಡುತ್ತಿದೆ. ಆದುದರಿಂದ ವಿದ್ಯಾರ್ಥಿಗಳಾದ ನೀವುಗಳು ಈ ಎಲ್ಲ ವಿಭಾಗಗಳ ಸೌಲಭ್ಯಗಳನ್ನು ಪಡೆದುಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಅಭಿನಂಧನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತಾಧಿಕಾರಿ ಡಾ.ಎಂ. ವಿ. ವಿಜಯಕುಮಾರ್, ಪಿಹೆಚ್ ಡಿ (ಲಂಡನ್) ಪ್ರಾಂಶುಪಾಳೇ ಕುಮಾರಿ ಯಶಸ್ವಿನಿ, ಎಲ್ಲಾ ವಿಭಾಗಗಳ ಪ್ರಾಂಶುಪಾಲರುಗಳು. ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ, ಭಾಗವಹಿಸಿದ್ದರು,
































