ಮಳೆಯಿಂದ ಸಂಚಾರ ಅಸ್ತವ್ಯಸ್ತ: ಪರಿಶೀಲನೆ


ನವಲಗುಂದ,ಜೂ.೧೦: ಪಟ್ಟಣದಲ್ಲಿ ಮೂರು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ರಸ್ತೆ ಸಂಚಾರವನ್ನೇ ಅಸ್ತವ್ಯಸ್ತಗೋಳಿಸಿದ್ದು ಈ ಪ್ರದೇಶಗಳಿಗೆ ಶಾಸಕ ಎನ್ ಎಚ್ ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಎಸ್ ಪಿ ಡಾ. ಗೋಪಾಲ ಬ್ಯಾಕೋಡಿ ಭೇಟಿ ನೀಡಿ ಪರಿಶೀಲಿಸಿದರು.
ಇಬ್ರಾಹಿಂಪುರ ರಸ್ತೆ ಹಳ್ಳದ ಹತ್ತಿರವಿರುವ ಎಸ್ ಎಸ್ ಬಾಗಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಮಳೆಗೆ ಸಿಲುಕಿ ತೊಂದರೆ ಅನುಭವಿಸಿದ ಮಕ್ಕಳನ್ನು ಭೇಟಿ ಮಾಡಿ ದೈರ್ಯ ತುಂಬಿದರು. ನಂತರ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಣೆ ಮಾಡಿದರು.


ಸೋಮವಾರ ಸಂಜೆ ಸುರಿದ ಮಳೆಗೆ ಇಬ್ರಾಹಿಂಪುರ್ ನವಲಗುಂದ ಮಧ್ಯದ ಎರಡು ಹಳ್ಳಗಳು ತುಂಬಿ ಹರಿಯುತ್ತಿದ್ದರೆ ತಿರ್ಲಾಪುರ ಯಮನೂರ, ಹಾಳಕುಸುಗಲ, ಇಬ್ರಾಹಿಂಪೂರ ಹಾಗೂ ಪಟ್ಟಣದ ಕೆಲವು ಭಾಗಗಳಲ್ಲಿ ಗಟಾರ್ ತುಂಬಿ ನೀರು ರಸ್ತೆ ಮೇಲೆ ಹರಿದು ರಸ್ತೆ ಸಂಚಾರವನ್ನೇ ಮಳೆ ಸ್ಥಗಿತಗೊಳಿಸಿತ್ತು.


ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದ ಗಟಾರು ತುಂಬಿ ರಸ್ತೆ ಮೇಲೆ ನೀರು ಹರಿದು ಪಕ್ಕದ ನೀರಾವರಿ ಕಾಲೋನಿ, ಮನೆಗಳಿಗೆ ನೀರು ನುಗ್ಗಿದರೆ ರಾಷ್ಟಿçÃಯ ಹೆದ್ದಾರಿ ಹುಬ್ಬಳ್ಳಿ ಸೊಲ್ಲಾಪುರ ಶೆಟ್ಟರ ಕೆರಿ ಹತ್ತಿರ ಮಳೆ ನೀರು ಗಟಾರ್ ತುಂಬಿ ರಸ್ತೆಯ ಮೇಲೆ ಹರಿದಿತ್ತು. ಇನ್ನು ವಸತಿ ಶಾಲೆಗಳಾದ ರಾಣಿ ಚೆನ್ನಮ್ಮ, ಬಿಸಿಎಂ ಹಾಸ್ಟೆಲ್, ದಿ. ದೇವರಾಜ ಅರಸು ಹಿಂದುಳಿದ ವರ್ಗದ ವಸತಿ, ಶಾಲೆ ಎಲ್‌ಐಸಿ ಆಫೀಸ್, ಅಂಬೇಡ್ಕರ್ ನಗರ, ಮಾಡೆಲ್ ಹೈಸ್ಕೂಲ್ ಹತ್ತಿರದ ಕುರಹಟ್ಟಿ ಪ್ಲಾಟ್, ಅಂಬೇಡ್ಕರ್ ನಗರ್, ಬಸವೇಶ್ವರನಗರದ ಸರಕಾರಿ ಶಾಲೆಗಳು, ಹಾಗೂ ಹಾದಿ ಬಸವೇಶ್ವರ ದೇವಸ್ಥಾನದ ರಸ್ತೆಯು ನೀರಿನಿಂದ ಜಲಾವೃತಗೊಂಡಿದ್ದವು ಮಳೆಯಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.


ಪ್ರತಿ ಬಾರಿ ಮಳೆ ಬಂದಾಗ ಈ ಶಾಲೆ ಮಕ್ಕಳು, ಇಬ್ರಾಹಿಂಪುರ್ ಗ್ರಾಮಸ್ಥರು ಹಾಗೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ರೈತರು ಹಾಗೂ ಸಾರ್ವಜನಿಕರು ಈ ಎರಡು ಹಳ್ಳಗಳಿಗೆ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಮೌಖಿಕವಾಗಿ ಹಾಗೂ ಮನವಿ ಮುಖಾಂತರ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹೇಳಿದರೂ ಕೂಡ ಪ್ರಯೋಜನವಾಗುತ್ತಿಲ್ಲ. ಆದಷ್ಟು ಬೇಗನೆ ಶಾಸಕರು ಮುತುವರ್ಜಿ ವಹಿಸಿ ಈ ಎರಡು ಹಳ್ಳಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.


ಅತಿ ಹೆಚ್ಚು ನೀರು ನುಗ್ಗಿದ ಪ್ರದೇಶಗಳಿಗೆ ತಹಶೀಲ್ದಾರ್ ಸುಧೀರ್ ಸಾಹುಕಾರ, ಪುರಸಭೆ ಮುಖ್ಯಧಿಕಾರಿ ಶರಣು ಪೂಜಾರ , ಸಿಪಿಐ ರವಿಕುಮಾರ ಕಪ್ಪತನ್ನವರ, ಪುರಸಭೆ ಅಧ್ಯಕ್ಷ ಶಿವಾನಂದ ತಡಿಸಿ ಹಾಗೂ ಪುರಸಭೆ ಸದಸ್ಯರು ಭೇಟಿ ನೀಡಿದ