
ಜಮಖಂಡಿ:ಫೆ.2ನಗರದಲ್ಲಿ ಟ್ರ್ಯಾಕ್ಟರ ಎಂಜಿನ್ ಪಲ್ಟಿಯಾದ ಪರಿಣಾಮವಾಗಿ ಟ್ರ್ಯಾಕ್ಟರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿರುವ ಘಟನೆ ಜರುಗಿದೆ
ಗಾಯಾಳು ಚಾಲಕನನ್ನು ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ನಾಗರಾಳ ತಾಂಡದ ನಿವಾಸಿ ಸುನಿಲ್ ರಾಟೋಡ್(30) ಎಂದು ಮಾಹಿತಿ ತಿಳಿದು ಬಂದಿದೆ.
ನಗರದ ರಮಾ ನಿವಾಸ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಏರಿಕೆ ಇರುವ ರಸ್ತೆಯಲ್ಲಿ ಪುಟ ಪಾತ್ ನಿರ್ಮಿಸಲು ಬಳಸುವಂತಹ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಏಕಾಏಕಿ ಎಂಜಿನ್ ಪಲ್ಟಿಯಾದ ಪರಿಣಾಮವಾಗಿ ಎಂಜಿನ್ ಹಾಗೂ ಟ್ರ್ಯಾಲಿ ಒಳಗಡೆ ಚಾಲಕ ಸಿಲುಕಿಕೊಂಡಿದ್ದು ನಂತರ ಸ್ಥಳಿಯರು ಜೆಸಿಪಿ ಮೂಲಕ ಆತನನ್ನು ಹೊರ ತೆಗೆಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಚಾಲಕನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಜಮಖಂಡಿ ಶಹರ ಠಾಣೆ ಪಿಎಸ್‍ಐ ಅನಿಲ್ ಕುಂಬಾರ್ ನೇತೃತ್ವದ ಪೆÇೀಲಿಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
























