ಯಳವಂತಗಿ (ಕೆ) ಶಾಲೆಯಲ್ಲಿ ಪಟ್ಟಣ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಕಲಬುರಗಿ,ಡಿ.31-ಕಲಬುರಗಿ ದಕ್ಷಿಣ ವಲಯದ ಯಳವಂತಗಿ (ಕೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಟ್ಟಣ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಣಾಧಿಕಾರಿ ವಿಜಯಕುಮಾರ ಜಮಖಂಡಿ ಅವರು ಉದ್ಘಾಟಿಸಿ ಮಾತನಾಡಿ, ನಿಗದಿತ ಗುರಿಯಂತೆ ಎಲ್ಲ ಮಕ್ಕಳು ಎಫ್‍ಎಲ್‍ಎನ್ ಸಾಧಿಸುವಂತೆ ಕರೆ ನೀಡಿದರು. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಯತ್ನಿಸಬೇಕು ಎಂದರು. ಇಂತಹ ಕಾರ್ಯಕ್ರಮಗಳು ಮಕ್ಕಳ ಭಾವಹಿಸುವಿಕೆ ಉತ್ತೇಜನ ನೀಡುವುದರ ಮೂಲಕ ಮಕ್ಕಳ ಕಲಿಕಾ ಸಾಮಥ್ರ್ಯ ಮೂಡಿಸಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷೆತೆಯಲ್ಲಿ ಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ಓಗೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಗಳು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪರಮೇಶ್ವರ ಬಿ.ದೇಸಾಯಿ, ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಸಂತೋಷ ಗಂಗು, ಇಸಿಓ ಸುಧಾಕರ ಪಾಟೀಲ, ಬಿಆರ್‍ಪಿ ದಯಾನಂದ ಹಿರೇಮಠ, ಸಿಆರ್‍ಪಿ ರಾಹುಲ್ ಚವ್ಹಾಣ್, ಎಸ್‍ಡಿಎಂಸಿ ಅಧ್ಯಕ್ಷರಾದ ಐಯ್ಯಣ್ಣ ಸುತಾರ, ಉಪಾಧ್ಯಕ್ಷರಾದ ಶಿವಲಿಂಗಮ್ಮ, ಸದಸ್ಯರಾದ ನಾಗಯ್ಯ ಸ್ವಾಮಿ, ಮಾನಂದ, ಮುಖ್ಯಗುರುಗಳಾದ ಮಹಾದೇವಿ, ಸತ್ಯವತಿ, ಗುರುನಾಥ ಮಾಡ್ಯಾಳಕರ್, ಮಹಾಂತಯ್ಯ ಸ್ವಾಮಿ, ಸವಿತಾ, ಪುಷ್ಪಾ, ಗ್ರಾಮಸ್ಥರಾದ ಪರಮೇಶ್ವರ ಮಾನೆ, ಯಳವಂತಗಿ ಶಾಲೆಯ ಶಿಕ್ಷಕರಾದ ಚಂದ್ರಶೇಖರ ಏಕಲೂರೆ, ಸೂರ್ಯಕಾಂತ ನಿಂಬರ್ಗಿ, ಈರಮ್ಮ ತಾವರಗೇರಾ, ಸಿದ್ದಮ್ಮ, ಮಹೇಶ, ಹೂವಪ್ಪ, ದೋಂಡಿರಾಮ, ಸಿರಿನಾ, ಶ್ರೀಕಾಂತ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.