ಪ್ರವಾಸೋದ್ಯಮದಿಂದ ಆರ್ಥಿಕತೆಗೆ ಗಣನೀಯ ಕೊಡುಗೆ: ಬಟ್ಟು ಸತ್ಯನಾರಾಯಣ

ಕಲಬುರಗಿ,ಸೆ.27: ಸಿಯುಕೆಯ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾವಿಭಾಗ ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಪ್ರವಾಸೋದ್ಯಮ ಮತ್ತು ಸಸ್ಟೇನೆಬಲ್ ಟ್ರಾಸ್ನ್‍ಫಾರ್ಮೇಶನ್ ಕುರಿತುಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ, ಮಾತನಾಡಿ ಪ್ರವಾಸೋದ್ಯಮವು ದೇಶದಒಟ್ಟಾರೆ ಪ್ರಗತಿಗೆಕೊಡುಗೆ ನೀಡುತ್ತದೆ. ಪ್ರವಾಸೋದ್ಯಮವುಉದ್ಯೋಗ, ಸಾರಿಗೆ, ಹೋಟೆಲ್ ನಿರ್ವಹಣೆ, ಮಾನವ ಸಂಪನ್ಮೂಲ ಮತ್ತುಇತರ ವಲಯಗಳನ್ನು ಅದರಅಭಿವೃದ್ಧಿಯೊಂದಿಗೆ ಸಬಲಗೊಳಿಸುತ್ತದೆಪ್ರವಾಸೋದ್ಯಮವುಉದಯೋನ್ಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು,ಇದನ್ನುಎನ್.ಇ.ಪಿ.-2020 ರಲ್ಲಿಯೂ ಬೆಂಬಲಿಸಲಾಗಿದೆ.ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮವು ಹೆಚ್ಚು ಪ್ರಯೋಜನಕಾರಿಯಾಗಿದೆ.ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನಆದಾಯದಅಗತ್ಯವಿದೆ.ಇತ್ತೀಚಿನ ದಿನಗಳಲ್ಲಿ ಜನರು ಮಾನಸಿಕ ವಿಶ್ರಾಂತಿ ಪಡೆಯಲುಅರಣ್ಯ ಸ್ನಾನಕ್ಕೆ ಹೋಗುತ್ತಿದ್ದಾರೆ.ಇದು ಪ್ರವಾಸೋದ್ಯಮದ ಅನುಕೂಲಗಳಲ್ಲಿ ಒಂದಾಗಿದೆ.ಎಂದುಐಎಫ್‍ಎಸ್ (ನಿವೃತ್ತ) ಬಿ.ಶ್ರೀನಿವಾಸ್ ಹೇಳಿದರು.ಸಂಸ್ಕøತಿಅಧ್ಯಯನಕೇಂದ್ರದ ನಿರ್ದೇಶಕ ಡಾ.ಉದಯ್ ಮಾಧವ್‍ಚೌಧರಿ ಮಾತನಾಡಿದರು.
ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥರಾದಡಾ.ಮಹೇಂದ್ರರೆಡ್ಡಿಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉದ್ಘಾಟನೆಯಲ್ಲಿಸಂಗೀತ ವಿಭಾಗದಡಾ.ಜಯದೇವಿ ಜಂಗಮಶೆಟ್ಟಿಡಾ. ಸ್ವಪ್ನಿಲ್‍ಮತ್ತುಡಾ.ನಾಕೊಡಅವರು ವಂದೇ ಮಾತರಂ ಮತ್ತುರಾಷ್ಟ್ರಗೀತೆಯನ್ನು ಹಾಡಿದರು.ಡಾ. ಗೌತಮ್ ಸ್ವಾಗತಿಸಿದರು.ಎ. ಹರ್ಷಿತಾ ನಿರೂಪಣೆ ಮಾಡಿದರು.ಡಾ. ಶಿವ ಧನ್ಯವಾದ ಅರ್ಪಿಸಿದರು.
ಸಭೆಯಲ್ಲಿ ಪೆÇ್ರ.ಪಾಂಡುರಂಗ ಪಟ್ಟಿ, ಡೀನ್, ಡಾ.ಪಟ್ಟೆದ, ಡಾ.ನವೀನ, ವಿವಿದ ವಿಭಾಗದಮುಖ್ಯಸ್ಥರು, ಡೀನ್‍ಗಳು, ಸಂಯೋಜಕರು, ಸಂಶೋಧನಾವಿಧ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.