
ಕಲಬುರಗಿ,ನ.9: ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯಾಜ್ಞವಲ್ಯ ಭವನದಲ್ಲಿ ಶ್ರೀ ಶಿವಚಿದಂಬರ ಸೇವಾಸಮಿತಿ ಹಾಗೂ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾಸಮಿತಿಯ ಸಂಯುಕ್ತಾಶ್ರಯದಲ್ಲಿ ನಾಳೆ ( ನ. 10) ಶಿವಚಿದಂಬರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ ಕಾಕಡಾರತಿಯೊಂದಿಗೆ ಪ್ರಾರಂಭವಾಗಿ, ಬೆಳಿಗ್ಗೆ 10.55 ಕ್ಕೆ ತೊಟ್ಟಿಲೋತ್ಸವ, ಮಹಿಳೆಯರಿಂದ ಸಾಂಪ್ರದಾಯಿಕ ಭಜನೆ, ಅಭಂಗ, ಸತ್ಯ ಚಿದಂಬರ ವೃತಕಥಾ,ಪೂಜೆ,ಮಹಾನೈವೇದ್ಯ, ಮಹಾಮಂಗಳಾರತಿ,ಮಹಾಪ್ರಸಾದದೊಂದಿಗೆ ಸಂಪನ್ನವಾಗುವ ಮಹಾಸ್ವಾಮಿಯ ಉತ್ಸವದಲ್ಲಿ ಸಕಲ ಭಕ್ತರು ಉಪಸ್ಥಿತರಿದ್ದು ಸ್ವಾಮಿಯ ಅನುಗ್ರಹ ಕೃಪೆಗೆ ಪಾತ್ರರಾಗುವಂತೆ ಶ್ರೀ ಶಿವಚಿದಂಬರ ಸೇವಾಸಮಿತಿ ಅಧ್ಯಕ್ಷ ದಯಾಘನ ಧಾರವಾಡಕರ್ ಮತ್ತು ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾಸಮಿತಿ ಅಧ್ಯಕ್ಷ ಮಲ್ಹಾರರಾವ ಗಾರಂಪಳ್ಳಿ ಅವರು ತಿಳಿಸಿದ್ದಾರೆ.

























