ನಾಳೆ ಸಂಭಾಜಿ ಬ್ರಿಗೇಡ್ ೧೦ನೇ ರಾಷ್ಟ್ರೀಯ ವರ್ಧಾಪನಾ ದಿನಾಚರಣೆ

ಬೀದರ್,ನ.೧೫ : ನಗರದ ಡಾ ಚನ್ನಬಸವ ಪಟ್ಟದೇವರ ರಂಗಮAದಿರದಲ್ಲಿ ನಾಳೆ ( ನ. ೧೬) ಬೆಳಿಗ್ಗೆ ೧೦.೩೦ ಗಂಟೆಗೆಸAಭಾಜಿ ಬ್ರಿಗೆಡ್ ಸಂಘಟನೆಯ ೧೦ನೇ ರಾಷ್ಟ್ರೀಯ ವರ್ಧಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ ವಾಸರೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಇಲ್ಲಿಯ ವರೆಗೆ ೯ ವರ್ಧಾಪನಾ ದಿನಾಚರಣೆಗಳು ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಆಯೋಜಿಸಲಾಗಿದ್ದು, ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲನೇ ಬಾರಿಗೆ ೧೦ನೇ ರಾಷ್ಟ್ರೀಯ ವರ್ಧಾಪನಾ ದಿನಾಚರಣೆ ಆಯೋಜಿಸಲಾಗುತ್ತಿದೆ ಎಂದರು.
ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ಜಾಗೃತಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಸಂಭಾಜಿ ಬ್ರಿಗೇಡ್ ಸಂಘಟನೆಯು ಛತ್ರಪತಿ ಶಿವಾಜಿ ಮಹಾರಾಜ, ಶಾಹು ಮಹಾರಾಜ, ಡಾ.ಬಾಬಾ ಸಾಬೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಮಹಾತ್ಮಾ ಬಸವೇಶ್ವರ ಅವರ ವಿಚಾರ ಧಾರೆಯನ್ನು ಇರಿಸಿಕೊಂಡು ಮುನ್ನಡೆಯುತ್ತಿದೆ. ದೇಶ ಸ್ವತಂತ್ರಗೊAಡು ೭೫ ವರ್ಷಗಳು ಗತಿಸಿದರೂ ಜನ ಸಾಮಾನ್ಯರಿಗೆ ಸಂಪೂರ್ಣ ಪ್ರಜಾಪ್ರಭುತ್ವ ದೊರೆತಿರುವುದಿಲ್ಲ. ಸಾಮಾಜಿಕ, ಕೃಷಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಇನ್ನೂ ಸಹ ಏಕ ಚಕ್ರಾಧಿಪತ್ಯ ಹಾಗೂ ವಂಶಪರೆAಪರೆ ಅಡಳಿತ ಮುಂದುವರೆದಿದೆ. ಇದನ್ನು ಹತ್ತಿಕ್ಕಲು ಹಾಗೂ ಜನ ಸಾಮಾನ್ಯನ ಕೈಗೆ ಪ್ರಜಾತಂತ್ರ ದೊರೆಯುವಂತಾಗಲು ಸಂಬಾಜಿ ಬ್ರಿಗೆಡ್ ಹತ್ತು ಹಲವು ಮಹತ್ತರ ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ವಿವರಣೆ ನೀಡಿದ ಅವರು, ಬೆಳಿಗ್ಗೆ ೧೦.೩೦ ಗಂಟೆಗೆ ವಗಟು ಕಲಾವಿದ ರಾಜೇಂದ್ರ ಕಾಂಬಳೆ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವರು. ನಂತರ ಮಧ್ಯಾಹ್ನ ೧೨. ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಸಂಘಟನೆಯ ರಾಷ್ಟಿçÃಯ ಅಧ್ಯಕ್ಷ ನ್ಯಾಂiÀiವಾದಿ ಮನೋಜ ಆಖರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಘಟನೆಯ ಮಹಾ ಪ್ರಧಾನ ಕಾರ್ಯದರ್ಶಿ ಸೌರವ ಖೇಡೆಕರ್, ವಕ್ತಾರರಾದ ಪ್ರೊ.ಗಂಗಧರ ಬನಬರೆ, ವಿಧಾನ ಪರಿಷತ್ ಸದಸ್ಯರಾದ ಎಮ್.ಜಿ ಮುಳೆ ಹಾಗೂ ಕರ್ನಾಟಕ ಮರಾಠಾ ನಿಗಮ ಮಂಡಳದ ಅಧ್ಯಕ್ಷ ಜಿ.ಹೆಚ್.ಮರಿಯೊಜಿರಾವ, ಏಕತಾ ಫೌಂಡೇಷನ್ ಅಧ್ಯಕ್ಷ ರವಿಂದ್ರ ಸ್ವಾಮಿ, ಸಮಾಜ ಸೇವಕ ಅಬ್ದುಲ್ ಮನ್ನಾನ್ ಸೇಠ್, ಕಿಶಾನ ಶಿಕ್ಷಣ ಪ್ರಸಾರ ಮಂಡಳಿ ಅಧ್ಯಕ್ಷ ಅನಿಲ ಶಿಂಧೆ, ಉಸ್ಮಾನಾಬಾದ್ ಜನತಾ ಬ್ಯಾಂಕ್ ಅಧ್ಯಕ್ಷ ವಸಂತರಾವ ನಾಗದೆ, ಅರುಣ ಪಾಟೀಲ ಎಕಂಬೇಕರ್, ಡಾ.ದಿನಕರ್ ಮೋರೆ, ಕೆ.ಕೆ.ಎಮ್.ಪಿ ಅಧ್ಯಕ್ಷ ಡಿಗಂಬರ್ ರಾವ ಮಾನಕಾರಿ, ನಂದಕುಮಾರ ಸಾಳುಂಕೆ, ಡಿಸಿಸಿ ಬ್ಯಾಂಕ್ ನಿದೇಶಕ ಅಶೋಕ ಸೋಂಜೆ, ಮಾಜಿ ಗ್ರಾ.ಪಂ ಅಧ್ಯಕ್ಷ ದೀಪಕ ಪಾಟೀಲ ಚಾಂದೋರಿ, ನ್ಯಾಯವಾದಿ ನಾರಾಯಣ ಗಣೇಶ, ಜನಾರ್ಧನ ಬಿರಾದಾರ, ಸತೀಶ ಮುಳೆ, ಅನಿಲ ಭುಸಾರೆ, ಜಿಜಾವು ಬ್ರಿಗೇಡ್ ಅಧ್ಯಕ್ಷೆ ಡಾ.ಕೃತಿಕಾ ಕನಸೆ, ಪ್ರಕಾಶ ಪಾಟೀಲ, ಡಾ.ಜ್ಞಾನೋಬಾ ಮುಂಗಳೆ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದೇ ವೇಳೆ ಸಯ್ಯದ್ ಅಹಮ್ಮದ್ ಖಾನ್ ರಾಷ್ಟಿçÃಯ ಪ್ರಶಸ್ತಿ ಪುರಸ್ಕೃತರು ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷÀ ಡಾ.ಅಬ್ದುಲ್ ಖದೀರ್ ಅವರಿಗೆ ಇದೇ ವೇಳೆ ಸನ್ಮಾನಿಸಲಾಗುವುದು ಎಂದು ವಾಸರೆ ಹೇಳಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ದತ್ತಾ ಪಾಟೀಲ, ಕಾರ್ಯದರ್ಶಿ ರಾಮರಾವ ರಾವಣಗಾವೆ, ಸಂಘಟನೆಯ ಪ್ರಮುಖರಾದ ಪ್ರಶಾಂತ ಪಾಟೀಲ, ಗೋವಿಂದ ಪಾಟೀಲ, ಸಂತೋಷ ಪಾಟೀಲ, ರತಿಕಾಂತ ಬಿರಾದಾರ, ಅಂಕುಶ ಪಾಟೀಲ, ದತ್ತಾ ಡಾವರಗಾವೆ, ದತ್ತಾ ಪಾಟೀಲ ಆಲೂರ್, ನಿಲೇಶ ಜಗತಾಪ, ಜ್ಞಾನೋಬಾ ನಿಟ್ಟುರೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.