Home ಜಿಲ್ಲೆ ಬೆಂಗಳೂರು ಯುದ್ಧ ಪರಿಣಾಮ ಟೊಮೊಟೊ ಬೆಲೆಯಲ್ಲಿ ತುಸು ಏರಿಕೆ

ಯುದ್ಧ ಪರಿಣಾಮ ಟೊಮೊಟೊ ಬೆಲೆಯಲ್ಲಿ ತುಸು ಏರಿಕೆ

ಕೋಲಾರ,ಮಾ,೨೩- ಪ್ರಾಚ್ಯ ದೇಶಗಳ ಯುದ್ದದ ಪರಿಣಾಮ ಕೋಲಾರದ ಎ.ಪಿ.ಎಂ.ಸಿ. ಮೇಲೆ ಯಾವೂದೇ ಪರಿಣಾಮ ಬೀರಿದೆ. ಈಗಾ ಟಮೊಟೋ ಸೀಸನ್ ಅಲ್ಲದ ಕಾರಣಕ್ಕೆ ಟೊಮೆಟೊ ಮಾರುಕಟ್ಟೆಗೆ ಜೂತೆಗೆ ಸರಬರಾಜು ಕಡಿಮೆಯಾಗಿದ್ದು. ಖರೀದಿದಾರರು ಮಾರುಕಟ್ಟೆ ರುತ್ತಿಲ್ಲ.


ಟೊಮೆಟೊ ಬೆಲೆ ದೀಡಿರ್ ಏರಿಕೆ ಇಳಿಕೆ ಸಹಜವಾಗಿದ್ದರು ಪ್ರಸ್ತು ಟಮ್ಯಟೋ ಬೆಲೆಯಲ್ಲಿ ತುಸು ಏರಿಕೆ ಕಂಡಿದೆ. ೧೫ ಕೆ.ಜಿ.ಯ ಬಾಕ್ಸ್ ೧೫೦ ರಿಂದ ೧೮೦ ರೂಗಳಿತ್ತು ಈಗಾ ೨೫೦ ರಿಂದ ೩೦೦ ರೂಗಳಿಗೆ ಏರಿಕೆಯಾಗಿದೆ. ಬಾಕ್ಸ್ ಮೇಲೆ ೧೦೦ ರೂ ಏರಿಕೆ ಕಂಡಿರುವುದು ರೈತರ ಮೊಗದಲ್ಲಿ ಮಂದಹಾಸ ಮಿಂಚಲಿದೆ.


ಇಷ್ಟು ದಿನಗಳಿಂದ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಭಾರಿ ವ್ಯತ್ಯಾಸ ಉಂಟಾಗಿ ಸಿಲಿಂಡರ್ ಅಭಾವ ಉಂಟಾಗಿದ್ದ ಕಾರಣ ಬಹುತೇಕ್ ಹೊಟೇಲ್‌ಗಳು ಬಂದ್ ಅಗಿದ್ದು ಟೊಮೆಟೊ ಬೇಡಿಕೆ ಇಲ್ಲದೆ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿತ್ತು.


ಟೊಮೆಟೊ ಹೊರದೇಶಗಳಿಗೆ ಸರಬರಾಜು ಮಾಡಲು ಯುದ್ಧದ ಕಾರಣದಿಂದ ಅಡಚಣೆ ಉಂಟಾಗಿತ್ತು ಹಾಗಾಗಿ ೧೫ ಕೆ.ಜಿ.ಯ ಟಮೋಟೋ ಬಾಕ್ಸ್ ಬೆಲೆ ೧೫೦ ರೂಗಳಿಗೆ ಇಳಿಕೆಯಾಗಿ ರೈತರಿಗೆ ಟಮೊಟೋ ಬೆಳೆಗೆ ಹಾಕಿದ ಬಂಡವಾಳ ಇರಲಿ, ಟೊಮೆಟೊ ಕೀಳುವ ಕೊಲಿ, ಮಾರುಕಟ್ಟೆಗೆ ಸರಬರಾಜು ಮಾಡುವ ವೆಚ್ಚವು ಸಿಗದಂತಾಗಿತ್ತು. ಹಾಗಾಗಿ ಬಹುತೇಕ ರೈತರು ಟಮೋಟೋ ಬೆಳೆಯನ್ನು ಕೀಳದೆ ತೋಟಗಳಲ್ಲಿಯೇ ಜಾನುವಾರುಗಳು ಮೇಯಲು ಬಿಟ್ಟಿದ್ದರು.


ಇಂದಿನಿಂದ ಹೋಟೇಲ್‌ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆಯ ಭರವಸೆಯನ್ನು ಸರ್ಕಾರ ನೀಡಿದ ನಂತರ ಬಹುತೇಕ ಹೋಟೆಲ್‌ಗಳು ಎಂದಿನಂತೆ ಪ್ರಾರಂಭವಾಗಲಿದ್ದು ಟೊಮೆಟೊ ಬೇಡಿಕೆಯಲ್ಲಿ ಸುಧಾರಣೆ ಕಾಣುವ ನಿರೀಕ್ಷೆಯಿದೆ. ಇನ್ನೆರಡು ತಿಂಗಳಲ್ಲಿ ಟಮೂಟೋ ಸೀಸನ್ ಪ್ರಾರಂಭವಾಗಲಿದ್ದು ಆಗಾ ಟೊಮೇಟೊ ಖರೀದಿದಾರರು ಬರಲಿದ್ದು ಬೆಲೆ ಇನ್ನಷ್ಟು ಏರಿಕೆಯಾಗುವ ಸಂಭವ ಇರುವುದಾಗಿ ಟೊಮೆಟೊ ಮಂಡಿ ಮಾಲೀಕರ ನಿರೀಕ್ಷೆಯಾಗಿದೆ.