
ಕಲಬುರಗಿ,ನ.20: ಇಂದಿನ ಯುವಜನಾಂಗಯಾವುದೇ ದುಷ್ಚಟಗಳಿಗೆ ದಾಸರಾಗಬಾರದುತಂಬಾಕಿನಲ್ಲಿನಿಕೋಟಿನ್‍ಅಂಶವಿದ್ದು, ಆರೋಗ್ಯದ ಮೇಲೆ ವ್ಯತ್ತಿರಿಕ್ತದುಷ್ಪರಿಣಾಮವನ್ನು ಬೀರುವಕಾರಣದಿಂದಯಾರುತಂಬಾಕು ಸೇವನೆಯನ್ನುಮಾಡಬಾರದುಜಿಲ್ಲಾಧಿಕಾರಿ ಬಿ.ಫೌಜಿಯಾತರನ್ನುಮ್ ಹೇಳಿದರು.
ಬುಧುವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾತಂಬಾಕು ನಿಯಂತ್ರಣ ಕೋಶ, ರಾಷ್ಟ್ರೀಯ ಬಾಯಿ ಆರೋಗ್ಯಕಾರ್ಯಕ್ರಮ ಮತ್ತು ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯಎನ್.ಎಸ್.ಎಸ್. ಘಟಕ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ತಂಬಾಕು ಮುಕ್ತ ಯುವ ಪೀಳಿಗೆ ಅಭಿಯಾನ 3.0” ಕಾರ್ಯಕ್ರಮವನ್ನುಜ್ಯೋತಿ ಬೆÉಳಗಿಸಿವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿತಂಬಾಕು ಸೇವನೆಯುತಡೆಗಟ್ಟಬಹುದಾದ ರೋಗಗಳು ಮತ್ತು ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ವರ್ಷಕ್ಕೆ13.5 ಲಕ್ಷ ಸಾವುಗಳು ಸಂಭವಿಸುತ್ತಿದ್ದು, ತಂಬಾಕಿನ ಸೇವನೆಯಿಂದಕ್ಯಾನ್ಸರ್, ಹೃದಯ ಸಂಬಂಧಿಗಳ ಕಾಯಿಲೆಗಳು, ಉಸಿರಾಟದ ತೊಂದರೆಯಿಂದ ಮತ್ತು ಅಕಾಲಿಕ ಮರಣಗಳಿಗೆ ತುತ್ತಾಗುತ್ತಿದ್ದಾರೆಎಂದು ಹೇಳಿದರು.
ಭಾರತ ಸರ್ಕಾರದಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯವುರಾಷ್ಟ್ರೀಯತಂಬಾಕು ನಿಯಂತ್ರಣಕಾರ್ಯಕ್ರಮ (ಓಖಿಅP) ಮೂಲಕ ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಮತ್ತುತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲುಇಂತಹಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ಕಾರದಆದೇಶದಂತೆ ಶಾಲಾ ಕಾಲೇಜುಗಳ 100 ಮೀ ಅಂತರದಲ್ಲಿತಂಬಾಕು ಮತ್ತುಅದರ ಉಪ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ್ದರು ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡುವುದು ಕಾನೂನು ಪ್ರಕಾರಅಪರಾಧವಾಗುತ್ತದೆ.ಅಂತಹಅಂಗಡಿ ಮುಗ್ಗಟ್ಟುಗಳ ಮೇಲೆ ತಂಬಾಕು ನಿಯಂತ್ರಣಕೋಶದ ಅಧಿಕಾರಿಗಳು ದಾಳಿಯನ್ನು ಮಾಡಿಕ್ರಮ ಕೈಗೊಳ್ಳಬೇಕೆಂದರು.
ವೈಜ್ಞಾನಿಕ ಸಂಶೋದನೆಗಳ ಪ್ರಕಾರತಂಬಾಕು ಸೇವನೆ ಮತ್ತುಧೂಮಪಾನ ಚಟಗಳಿಗೆ ದಾಸರಾದರೆ ಮಾರಕ ರೋಗಗಳಾದ ಕ್ಯಾನರ್ ಮತ್ತುಕಿಡ್ನಿಪೇಲ್, ಹೆಣ್ಣುಮಕ್ಕಳಿಗೆ ಸಂತಾನೊತ್ಪತಿಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಆದ್ದುದರಿಂದ ವಿದ್ಯಾವಂತರಾದ ತಾವುಗಳು ಆದಷ್ಟುಜಾಗೃತಿಯನ್ನು ವಹಿಸಬೇಕು ಬೇರೆಯವರಿಗೂತಂಬಾಕಿನ ಸೇವನೆಯಿಂದ ಆಗುವ ಪರಿಣಾಮಗಳ ಕುರಿತು ತಿಳಿಸಬೇಕು ಎಂದು ಹೇಳಿÀದರು.
ತಂಬಾಕು ಮುಕ್ತ ಯುವಅಭಿಯಾನ 3.0 (ಖಿಈಙಅ 3.0)ಎಂಬುದು ಭಾರತ ಸರ್ಕಾರವು 60 ದಿನಗಳ ರಾಷ್ಟ್ರವ್ಯಾಪ್ತಿಕಾರ್ಯಕ್ರಮವಾಗಿದ್ದು, ಯುವಜನರುತಂಬಾಕು ಬಳಸುವುದನ್ನು ತಡೆಗಟ್ಟಲು ಮತ್ತುತ್ಯಜಿಸಲು ಬಯಸುವವರನ್ನು ಬೆಂಬಲಿಸಲು ಇದನ್ನು ಪ್ರಾರಂಭಿಸಲಾಗಿದೆ.ಅಕ್ಟೋಬರ್ 9, 2025 ರಂದುಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯವು ಪ್ರಾರಂಭಿಸಿತು, ಇದು ಶಿಕ್ಷಣ ಸಂಸ್ಥೆಗಳು ಮತ್ತು ಸಮುದಾಯಗಳಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆಎಂದರು.
ಕಲಬುರಗಿ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದ ಪ್ರಭಾರ ಪ್ರಾದೇಶಕ ನಿರ್ದೇಶಕಡಾ. ಶುಭಾಂಗಿ ದಿಗಂಬರ್‍ಚಿಕಟೆಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯವೇ ಭಾಗ್ಯಎನ್ನುವಂತೆಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ತಮ್ಮಆರೋಗವನ್ನು ಕಾಪಾಡಿಕೊಳ್ಳಬೇಕು ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಘಟಕಗಳು ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೊತೆಗೆ ಸಮಾಜಿಕ ಸೇವೆಯನ್ನು ಮಾಡುವ ನಾಯಕಕತ್ವದ ಗುಣಗಳನ್ನು ಬೆಳಸುತ್ತಿದೆ ಎಂದು ಹೇಳಿದರು.
ಜಿಲ್ಲಾತಂಬಾಕು ನಿಯಂತ್ರಣಾಧಿಕಾರಿಡಾ.ರಾಕೇಶ ಕಾಂಬಳೆ ಅವರುಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.
ಕಲಬುರಗಿಕ್ಲಿನಿಕಲ್ ಸೇವೆಗಳು ಮತ್ತು ಹಿರಿಯ ಸಲಹೆಗಾರರುಅಂಕೊಲಾಜಿಸ್ಟ್ ಹೆಚ್.ಸಿ.ಜಿ.ಕ್ಯಾನ್ಸರ್‍ಆಸ್ಪತ್ರೆಯ ಮುಖ್ಯಸ್ಥರಾದಡಾ.ಶಾಂತಲಿಂಗ ನಿಗ್ಗುಡಗಿಅವರುಅತಿಥಿಉಪನ್ಯಾಸಕರಾಗಿ ಮಾತನಾಡಿ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಲಬುರಗಿ ಜಿಲ್ಲಾಧಿಕಾರಿಗಳಾದ ಬಿ.ಪೌಜಿಯಾತರುನ್ನುಮ್‍ಅವರುಇದೇಸಂದರ್ಭದಲ್ಲಿತಂಬಾಕಿನಆರೋಗ್ಯಕ್ಕೆ ಹಾನಿಕಾರಕಎಂಬುದರ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಅಧಿಕಾರಿಡಾ. ಶರಣಬಸಪ್ಪ ಖ್ಯಾತನಾಳ ಜಿಲ್ಲಾ ಕಾಲು ಬಾಯಿ ಆರೋಗ್ಯಕಾರ್ಯಕ್ರಮಅಧಿಕಾರಿ ಸಂಧ್ಯಾಕಾನೇಕರ್,ವಿಟಿಯುಕಾಲೇಜಿನಎನ್,ಎಸ್.ಎಸ್ ಅಧಿಕಾರಿಗಳಾದ ಸಂಜಯ ಪಟ್ಟಣಶೆಟ್ಟಿ, ತಂಬಾಕು ನಿಯಂತ್ರಣಕೋಶದಜಿಲ್ಲಾ ಸಲಹೆಗಾರ್ತಿ ಸುಜಾತ ಪಾಟೀಲ್, ಸೇರಿದಂತೆ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಪ್ರಾದೇಶಿಕ ಕೇಂದ್ರ ಕಲಬುರಗಿಯ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿಟಿಯುಎಲೆಕ್ಟ್ರಾನಿಕ್ಸ್ ಮತ್ತುಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಪೂಜಾ ಮರೆಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.























