
ಕಲಬುರಗಿ,ಜ.16-ಸ್ವಾಮಿ ವಿವೇಕಾನಂದ ಅವರು ನಮ್ಮ ದೇಶದ ಯುವಕರ ಶಕ್ತಿ ಆಗಿದ್ದರು. ಅವರ ತತ್ವ ಆದರ್ಶಗಳು ಪ್ರತಿ ಯುವಕರು ಪಾಲಿಸಿದರೆ ಉತ್ತಮ ಭವಿಷ್ಯ ನಿರ್ಮಾಣ ಮಾಡಬಹುದು ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಬಸವರಾಜ ಸಿ ತೋಟದ ನುಡಿದರು.
ಮರತೂರಿನ ಆಟದ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಆಳಂದನ ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಅವರ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಯುವಕ ಯುವತಿಯರು ಅವರ ಅವರ ಪ್ರತಿಭೆಯನ್ನು ದೇಶಕ್ಕೆ ಪರಿಚಸುವುದು ಬಹಳ ಇದೆ ಆದರೆ ಅವರಿಗೆ ಕಾರ್ಯಕ್ರಮ ಗಳ ಕೊರತೆ ಇದೆ ಸರ್ಕಾರದಿಂದ ಯುವಕರಿಗೊಸ್ಕರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರತಿ ವರ್ಷ ಯುವಜನ ಮೇಳ ಮತ್ತು ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಯುವಕರ ಪ್ರತಿಭೆಯನ್ನು ಇಡಿ ದೇಶಕ್ಕೆ ತೋರಿಸಬಹುದು ಎಂದರು.
ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತಿ ಸದಸ್ಯ ಅಜಿತಕುಮಾರ ಪೆÇೀಲಿಸ್ ಪಾಟೀಲ, ಸಂಜುಕುಮಾರ ಕೆ ಘರ.ಶರಣಕುಮಾರ ನಂದೂರ, ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ ಎಸ್ ಮಡ್ಡೆ ಅದ್ಯಕ್ಷತೆ ವಹಿಸಿದರು ಹಾಗೂ ಸಂಸ್ಥೆಯ ಕಾರ್ಯದರ್ಶಿ ಸಿದ್ದಾರಾಮ ಕೊಚಡೆ ಪ್ರಾಸ್ತಾವಿಕ ಮಾತನಾಡಿದರು.
























