
ಕಲಬುರಗಿ :ನ.25: ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ತಂಬಾಕು ಮುಕ್ತ ಅಭಿಯಾನ’ ಜರುಗಿತು.
ವೈದ್ಯಾಧಿಕಾರಿ ಡಾ. ಅನುಪಮಾ ಎಸ್.ಕೇಶ್ವಾರ ಮಾತನಾಡಿ, ತಂಬಾಕು ಮುಕ್ತ ಅಭಿಯಾನವು ತಂಬಾಕಿನ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ, ತಂಬಾಕು ಸೇವನೆಯನ್ನು ಕಡಿಮೆ ಮಾಡುವ ಮತ್ತು ಯುವಜನರನ್ನು ತಂಬಾಕು ಮುಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಕೈಗೊಳ್ಳಲಾದ ಒಂದು ರಾಷ್ಟ್ರೀಯ ಮತ್ತು ಜಿಲ್ಲಾ ಮಟ್ಟದ ಉಪಕ್ರಮವಾಗಿದೆ ಎಂದರು. ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಈ ಅಭಿಯಾನವು ತಂಬಾಕು ಉತ್ಪನ್ನಗಳ ನಿಯಂತ್ರಣ, ಕಾನೂನುಗಳ ಜಾರಿ ಮತ್ತು ವ್ಯಸನವನ್ನು ತೊರೆಯಲು ಸಹಾಯ ಮಾಡುವ ಸೇವೆಗಳನ್ನು ಒದಗಿಸುವ ಮೂಲಕ ಆರೋಗ್ಯಕರ ಸಮುದಾಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ತಂಬಾಕು ಸೇವನೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗಂಗಾಜ್ಯೋತಿ ಗಂಜಿ, ಜಗನಾಥ ಗುತ್ತೇದಾರ, ಮಂಗಲಾ ಚಂದಾಪುರೆ, ಲಕ್ಷ್ಮೀ ಮೈಲಾರಿ, ಸಂಗಮ್ಮ ಅತನೂರ, ರೇಷ್ಮಾ ನಕ್ಕುಂದಿ, ಶ್ರೀದೇವಿ, ಚಂದಮ್ಮಾ, ಅರ್ಚನಾ, ಅನಿತಾ ಸೇರಿದಂತೆ ಇನ್ನಿತರರಿದ್ದರು.

























