
ತಾಳಿಕೋಟೆ:ಜೂ.೧೧:ಯಾವುದೇ ಕಾರ್ಯದಲ್ಲಿ ಯಶಸ್ವಿ ಕಾಣಬೇಕಾದರೇ ಗುರು ಅನ್ನುವಂತಹ ಶಕ್ತಿಯನ್ನು ನಂಬಿ ನಡೆಯಬೇಕು ಆ ಶಕ್ತಿಯೇ ಅಪೇಕ್ಷಿಸಿದ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದು ವೀರಶೈವ ಲಿಂಗಾಯತ ಪಂಚಮಶಾಲಿ ಬಬಲೇಶ್ವರ ಬ್ರಹನ್‌ಮಠ ಪೀಠದ ಜಗದ್ಗುರುಗಳಾದ ಪ.ಪೂ.ಶ್ರೀ ಶ್ರೀ ಶ್ರೀ೨೦೨೨ ಜಗದ್ಗುರು ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಮಂಗಳವಾರರAದು ಸ್ಥಳೀಯ ಹಂಚಾಟೆ ಕಾಂಪ್ಲೆಕ್ಸಿನಲ್ಲಿ ವಿಜಯಪುರದ ಕೆ ಡೈಮಂಡ್ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಕ್ರೇಡಿಟ್ ಸೊಸಾಯಿಟಿ ಲಿ.ನ ತಾಳಿಕೋಟೆಯ ನೂತನ ಶಾಖೆಯನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಜಗದ್ಗುರುಗಳು ಗುರು ಅನ್ನುವಂತಹ ಶಕ್ತಿಯನ್ನು ನಂಬಿದ ವಿಜಯಪುರದ ಕೆ ಡೈಮಂಡ್ ಸಂಸ್ಥೆಯ ಅಧ್ಯಕ್ಷರಾದ ಕಾಶಿನಾಥ.ಕೆ.ಕಾಮಗಳ ಅವರು ಈ ಸಂಸ್ಥೆಯನ್ನು ಬೆಳೆಸುತ್ತಾ ಗ್ರಾಹಕರ ಆಡಳಿತ ಮಂಡಳಿಯವರ ಪ್ರೀತಿಗೆ ಪಾತ್ರರಾಗಿದ್ದಾರೆಂದರು. ದೇವ ಭಕ್ತಿ ಗುರುಭಕ್ತಿಯಲ್ಲಿ ಕಾಶೀನಾಥ ಅವರು ನಂಬಿಕೆಯಿಟ್ಟು ಮುನ್ನಡೆದಿದ್ದಾರೆ ದೈವ ಹೆಚ್ಚೊ ಪ್ರಯತ್ನ ಹೆಚ್ಚೊ ಎಂಬ ಈ ಚರ್ಚೆಯನ್ನು ಲಕ್ಷಿಸಿಕೊಂಡು ಗುರು ಭಕ್ತಿ ದೈವ ಭಕ್ತಿಯಲ್ಲಿ ಯಶಸ್ವಿ ಕಾಣುತ್ತಾ ಸಾಗಿದ್ದಾರೆಂದ ಅವರು ಮಾತಾ ಪೀತರನ್ನು ಮಕ್ಕಳಾದವರು ಪಾಲನೆ ಪೋಷಣೆಗೆ ಮುಂದಾಗಬೇಕು ಅಂದರೇ ಭಗವಂತ ಒಲಿಯುತ್ತಾನಲ್ಲದೇ ಜೀವನದಲ್ಲಿ ಸನ್ಮಾರ್ಗ ದೊರೆಯಲಿದೆ ಎಂದರು.
ಇನ್ನೋರ್ವ ಸಾನಿಧ್ಯ ವಹಿಸಿದ ಮನಗೂಳಿಯ ಸಂಸ್ಥಾನ ಹಿರೇಮಠದ ಶ್ರೀ ಪ.ಪೂಸಂಗನಬಸವ ಮಹಾಸ್ವಾಮಿಗಳು ಮಾತನಾಡಿ ಇಂದು ಉದ್ಘಾಟನೆಗೊಂಡ ಕೆ ಡೈಮಂಡ ಸೋಸಾಯಿಟಿಯು ನನಗೆ ದೀಕ್ಷೆ ನೀಡಿದಂತಹ ಜಗದ್ಗುರುಗಳಿಂದ ಉದ್ಘಾಟನೆಗೊಂಡಿದೆ ಈ ಕಾರ್ಯ ಯಶಸ್ವಿ ಕಾಣಲಿದೆ ಎಂದರು. ಭೂಮಿಯಮೇಲೆ ಯಾವುದು ಶಾಸ್ವತವಲ್ಲ ಕಾರಣ ಭೂಮಿಯ ಮೇಲೆ ಇರುವ ತನಕ ದಾನ-ಧರ್ಮ ಎನ್ನುವುದನ್ನು ಮಾಡಬೇಕು ನೀರ್ಗತಿಕರಿಗೆ ಒಳ್ಳೆಯ ಮಾರ್ಗವನ್ನು ತೋರುವ ಕಾರ್ಯ ಮಾಡಬೇಕು ಅಂತಹ ಕಾರ್ಯ ಕೆ ಡೈಮಂಡ ಸೋಸಾಯಿಟಿಯ ಜಿಲ್ಲಾಧ್ಯಕ್ಷರಾದ ಕಾಶೀನಾಥ ಅವರು ನಡೆಸಿದ್ದಾರೆಂದರು. ವಯೋಮಿತಿ ಎನ್ನುವುದು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತದೆ ಆ ಅವದಿಯಲ್ಲಿ ಏನು ಮಾಡುತ್ತಾ ಸಾಗಬೇಕೆಂದು ಅರ್ಥೈಸಿಕೋಡು ನಡೆಯಬೇಕು ಅಂತಹ ಕಾರ್ಯಕ್ಕೆ ಮುಂದಾಗಿರುವ ಅಧ್ಯಕ್ಷ ಕಾಶಿನಾಥ ಅವರು ಕೆ ಡೈಮಂಡಿನ ನೂರಾರು ಶಾಖೆಗಳನ್ನು ಪ್ರಾರಂಬಿಸಿ ಸುಮಾರು ಹತ್ತು ಸಾವಿರ ಜನೆತೆಗೆ ಉದ್ಯೋಗ ದೊರಕಿಸಿಕೊಡುವಂತಹ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದ ಶ್ರೀಗಳು ತಾಳಿಕೋಟೆಯಲ್ಲಿ ಇಂದು ಉದ್ಘಾಟನೆಗೊಂಡ ಕೆ ಡೈಮಂಡ ೫ನೇ ಶಾಖೆಯಾಗಿ ಪರಿಣಮಿಸಿದೆ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕೆ ಡೈಮಂಡ್ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಅವರು ತಮ್ಮ ನೂತನ ಶಾಖೆಯನ್ನು ಇಂದು ಪ್ರಾರಂಬಿಸಿ ನಿರೂದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಅಪೇಕ್ಷೆ ಹೊಂದುವದರೊAದಿಗೆ ನೂರಾರು ಶಾಖೆಗಳನ್ನು ಪ್ರಾರಂಬಿಸುವ ಗುರಿ ಹೊಂದಿದ್ದಾರೆ ಅವರಲ್ಲಿರತಕ್ಕಂತಹ ನಿಷ್ಠೆ ಪ್ರಾಮಾಣಿಕತನ ಹಾಗೂ ಗುರು ಭಕ್ತಿ ಎಂಬುದು ಆ ಸ್ಥಾನಕ್ಕೆ ತಲುಪಿಸಲಿದೆ ಸಮಾಜ ನನಗೆನೂ ಕೊಟ್ಟಿತ್ತೆಂಬ ಭಾವನೆ ಹೊಂದದೆ ಸಮಾಜಕ್ಕೆ ನಾನೇನೂ ಕೊಡಬೇಕೆಂಬ ಭಾವನೆಯನ್ನಿಟ್ಟುಕೊಂಡು ಮುನ್ನಡೆದ ಕೆ.ಡೈಮಂಡಿನ ಅಧ್ಯಕ್ಷ ಕಾಶಿನಾಥ ಅವರ ಸೇವಾ ಕಾರ್ಯ ಮುಂದುವರೆದು ಅವರ ಅಪೇಕ್ಷೆ ಇಡೇರಲಿ ಎಂದು ಶ್ರೀಗಳು ಅಪೇಕ್ಷೀಸಿದರು.
ಇನ್ನೋರ್ವ ಅಧ್ಯಕ್ಷತೆ ವಹಿಸಿದ ಕೆ.ಡೈಮಂಡ ಮಲ್ಟಿ ಸ್ಟೆಟ್ ಕೋ-ಆಪ್ ರೇಟಿವ್ಹ್ ಕ್ರೇಡಿಟ್ ಸೋಸಾಯಿ ವಿಜಯಪುರದ ಅಧ್ಯಕ್ಷರಾದ ಕಾಶಿನಾಥ ಕೆ ಕಾಮಗಳ ಅವರು ಮಾತನಾಡಿ ವಿಜಯಪುರ ಜಿಲ್ಲೆಯಲ್ಲಿಯೇ ತಾಳಿಕೋಟೆ ಪಟ್ಟಣವು ವ್ಯಾಪಾರ ಪಡಮೂಲ ಸ್ಥಳದಿಂದ ಭರದಿಂದ ಬೆಳೆಯುತ್ತಾ ಸಾಗಿದೆ ಶ್ರೀ ಖಾಸ್ಗತರ ಪುಣ್ಯ ಭೂಮಿ ಇದಾಗಿದ್ದು ಈ ಪುಣ್ಯಭೂಮಿಯಲ್ಲಿ ಇಂದು ಕೆ ಡೈಮಂಡ ಸಂಸ್ಥೆಯ ನೂತನ ೫ನೇ ಶಾಖೆಯನ್ನು ಪ್ರಾರಂಬಿಸಲಾಗಿದೆ ಇನ್ನೂ ೭ರಿಂದ ೮, ೧೦ ವರ್ಷಗಳಲ್ಲಿ ದೇಶದಲ್ಲಿ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂಬ ಉದ್ದೇಶ ನನ್ನದಾಗಿದೆ ಅಲ್ಲದೇ ಸುಮಾರು ಸಾವಿರಾರು ಶಾಖೆ ಹೊಂದುವದರೊAದಿಗೆ ೧೦ ಸಾವಿರಕ್ಕೂ ಮೇಲ್ಪಟ್ಟು ಯುವ ಜನತೆಗೆ ಉದ್ಯೋಗ ಅವಕಾಶ ಮಾಡಿಕೊಡಬೇಕೆಂಬ ಆಸೆ ತಮ್ಮದಾಗಿದೆ ಎಂದರು. ಬಬಲೇಶ್ವರ ಜಗದ್ಗುರುಗಳಿಂದ ಹಾಗೂ ಮನಗೂಳಿಶ್ರೀಗಳಿಂದ ಬಬಲೇಶ್ವರದಲ್ಲಿ ೨ನೇ ಶಾಖೆಯನ್ನು ಉದ್ಘಾಟಿಸಲಾಗಿತ್ತು ಈಗ ೫ನೇ ಶಾಖೆ ಉದ್ಘಾಟನೆಗೂ ಅದೇ ಶ್ರೀಗಳು ಇಂದು ಉಪಸ್ಥಿತರಿದ್ದಾರಲ್ಲದೇ ಗುಂಡಕನಾಳಶ್ರೀಗಳು ಕೂಡಾ ಪಾಲ್ಗೊಂಡಿರುವದು ಸಂತಸ ತಂದಿದೆ ಎಂದು ಹೇಳಿದ ಅಧ್ಯಕ್ಷ ಕಾಶಿನಾಥ ಅವರು ನನ್ನಲ್ಲಿ ಕನಸನ್ನು ನನಸ್ಸು ಮಾಡುವಂತಹ ಭಾವನೆಯೊಂದು ಅಡಗಿದೆ ಆ ಕನಸ್ಸು ಯಶಸ್ವಿಗೆ ರಕ್ತವನ್ನು ನೀರು ಮಾಡಬೇಕಾಗುತ್ತದೆ ಆದರೆ ಏಷ್ಟೋ ಸಂಸ್ಥೆಗಳು ಬಂದು ಹೋಗಿದ್ದರೂ ಉದ್ದೇಶಗಳು ಬೇರೆ ಬೇರೆ ಇರುತ್ತವೆ ಒಳ್ಳೆಯ ಉದ್ದೇಶವಿದ್ದರೆ ಅದು ಅಜರಾಮರವಾಗಿ ಉಳಿಯಲು ಸಾದ್ಯವೆಂದು ನಾನು ನಂಬಿದ್ದೇನೆAದು ಹೇಳಿದ ಅವರು ಸ್ವಾತಂತ್ರö್ಯ ನಂತರ ೩೦ ಸಾವಿರ ಪಕ್ಷಗಳು ರಜಿಸ್ಟೆçÃಶನ್ ಆಗಿವೆ ಅವುಗಳಲ್ಲಿ ೫ ರಿಂದ ೧೦ ಮಾತ್ರ ದೇಶದಲ್ಲಿ ಸೇವಾ ಕಾರ್ಯದಲ್ಲಿ ಉಳಿದಿವೆ ಎಂದು ಉದಾರಿಸಿದ ಅವರು ನಮ್ಮ ಸಂಸ್ಥೆಯು ಪಕ್ಷಾತೀತ ಸಂಸ್ಥೆಯಾಗಿದ್ದು ಇಲ್ಲಿ ಜಾತಿ ಬೇದವಿಲ್ಲಾ ಇಲ್ಲಿ ನಮ್ಮವರೇ ಎಂದು ಭಾವಿಸಿ ನಡೆಯುವಂತಹ ಸಂಸ್ಥೆ ಇದಾಗಿದೆ ಎಂದು ಅಲ್ಲಿ ಸಿಗತಕ್ಕಂತಹ ಸಾಲ ಸೌಲಭ್ಯಗಳ ಕುರಿತು ವಿವರಿಸಿದರು.
ಸಂಸ್ಥೆಯ ಗೌರವ ಅಧ್ಯಕ್ಷ ನ್ಯಾಯವಾದಿ ಲಚ್ಚಪ್ಪ ಎಂ ಭೂಸನೂರ ಉದ್ಘಾಟನಾ ಪರ ಮಾತನಾಡಿದರು.
ಪುರಸಭಾ ಸದಸ್ಯ ವಾಸುದೇವ ಹೆಬಸೂರ, ಜಿಲ್ಲಾ ಉಪಾಧ್ಯಕ್ಷರಾದ ಶಶಿಧರ ರೂಡಗಿ ಅವರು ಮಾತನಾಡಿದರು.
ಇದೇ ಸಮಯದಲ್ಲಿ ಶ್ರೀಗಳಿಗೆ ಅಥಿತಿ ಹಾಗೂ ಗಣ್ಯ ಮಾನ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಶರಣ ಬಸವೇಶ್ವರ ಸಂಘದ ಅಧ್ಯಕ್ಷ ಮಹಾದೇವಪ್ಪ ಕುಂಭಾರ, ಲಕ್ಷಿö್ಮÃ ಕ್ಲಾಥ್‌ಸ್ಟೊರ‍್ರ್ಸ್ ಮಾಲಿಕ ರಾಜು ಹಂಚಾಟೆ, ರೋಟರಿಯನ್ ಅಶೋಕ ಬಳಗಾನೂರ, ಸುರೇಶಗೌಡ ಪಾಟೀಲ, ಸಿಇಓ ದೀಲಿಪ ಜಾಧವ, ಮುದ್ದೇಬಿಹಾಳ ಶಾಖಾ ಅಧ್ಯಕ್ಷ ಬಾಬು ಬಿರಾದಾರ, ಶಿವಕುಮಾರ ಬಿರಾದಾರ, ನಿರ್ದೇಶಕರಾದ ಜಿ.ಜಿ.ಮದರಕಲ್ಲ, ಶಾಮ ಹಂಚಾಟೆ, ಸುರೇಶ ಬಬಲೇಶ್ವರ, ಎಸ್.ಜಿ.ಯಳಮೇಲಿ, ಎಸ್.ಟಿ.ನಿಡಗುಂದಿ, ಪಿ.ಎಂ.ಸಜ್ಜನ, ಎಂ.ಆಯ್.ಬಬಲೇಶ್ವರ, ಎಸ್.ಬಿ.ಪಾಟೀಲ, ಎಸ್.ಎ.ಮದರಕಲ್ಲ, ಶ್ರೀಮತಿ ಮಹಾದೇವಿ ಪಾಲ್ಕಿ, ಗುರುಬಸವ ಕೆಂಪವಾಡ, ನೂತನ ಶಾಖಾ ಅಧ್ಯಕ್ಷ ಸುರೇಶಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
ಶ್ರೀಮತಿ ನೇತ್ರಾ ಕಡಿ ಪ್ರಾರ್ಥಿಸಿದರು. ಸಂಗಮೇಶ ಪಾಲ್ಕಿ ನಿರೂಪಿಸಿದರು. ಎಸ್.ಬಿ.ಪಾಟೀಲ ಸ್ವಾಗತಿಸಿ ವಂದಿಸಿದರು.