
ಧಾರವಾಡ, ಜೂ7: ಆಪರೇಷನ್ ಸಿಂದೂರ ಮೂಲಕ ಉಗ್ರರನ್ನ ಪೆÇೀಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಪರಾಕ್ರಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನಾ ಸಲ್ಲಿಕೆ ಹಾಗೂ ವಿಜಯೋತ್ಸವದ ಅಂಗವಾಗಿ ಧಾರವಾಡದಲ್ಲಿ ಬೃಹತ ತಿರಂಗಾಯಾತ್ರೆ ನಡೆಸಲಾಯಿತು.
ಧಾರವಾಡದ ಬೇಲೂರನಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರು ಹಾಗು ಬೃಹತ ದೇಶಾಭಿನಗಳೊಂದಿಗೆ ಧಾರವಾಡ ಬೇಲೂರನಿಂದ ಬೈಕ ರಾಲಿ ಮುಖಾಂತರ ಧಾರವಾಡ ಪ್ರವೇಶಿಸಿ ಕಲಾಭವನದಲ್ಲಿ ವಿಜಯೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಮಾಜಿ ಸೈನಿಕರನ್ನ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ ಧನ್ಯವಾದಗಳನ್ನ ಸಲ್ಲಿಸಲಾಯಿತು.
ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಮಂಡಳ ಅಧ್ಯಕ್ಷರು ಶಂಕರ ಕೊಮಾರದೇಸಾಯಿ, ಶಂಕರ ಶೆಳಕೆ, ಶಶಿಮೌಳಿ ಕುಲಕರ್ಣಿ, ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ, ಬಸವರಾಜ ಗುಂಡಗೊವಿ, ಬಸವರಾಜ ಬಾಳಗಿ, ಮಂಜು ನಡಟ್ಟಿ, ಹರೀಶ ಬಿಜಾಪುರ, ಪಕ್ಷದ ಮುಖಂಡರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.