
ನವಲಗುಂದ,ಮೇ.೨೩: ದೇಶದ ರಕ್ಷಣೆಗಾಗಿ ನಮ್ಮೆಲ್ಲರ ನಡೆ' ಎಂಬ ಧ್ಯೇಯ ಹಾಗೂ ದೇಶದ ಸೈನಿಕರ ಆತ್ಮಸ್ಥೆöÊರ್ಯ ಹೆಚ್ಚಿಸುವ ನಿಟ್ಟಿನಲ್ಲಿ ನವಲಗುಂದ ಪಟ್ಟಣದಲ್ಲಿ ಬಿಜೆಪಿಯಿಂದ ಪಕ್ಷಾತೀತವಾಗಿ ಆಯೋಜಿಸಲಾಗಿದ್ದ ಆಪರೇಷನ್ ಸಿಂಧೂರ್ ಬೃಹತ್ ತಿರಂಗಾ ಯಾತ್ರೆಯನ್ನು ನವಲಗುಂದ ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮೊದಲು ಮಾತನಾಡಿದ ಅವರು
ಭಾರತ ಶಾಂತಿಪ್ರಿಯ ದೇಶವಾದರೂ ನಮ್ಮನ್ನು ತುಳಿಯಲು ಬಂದವರನ್ನು ಸುಮ್ಮನೇ ಬಿಡುವ ದೇಶ ಅಲ್ಲ ಎನ್ನುವ ಎಚ್ಚರಿಕೆಯನ್ನು ಆಪ್‌ರೇಷನ್ ಸಿಂಧೂರ' ನೀಡಿದೆ. ಸೈನಿಕರಿಂದಾಗಿ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಅಂತಹ ಸೈನಿಕರಿಗೆ ಶಕ್ತಿ ತುಂಬುವ
ತಿರಂಗಾ ಯಾತ್ರೆ’ ಮಾಡಿದ್ದು ಶ್ಲಾಘನೀಯ’ ಎಂದರು.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಮಾತನಾಡಿ ಅಮಾಯಕ ಪ್ರವಾಸಿಗರನ್ನು ಕೊಂದ ಉಗ್ರರಿಗೆ ನಮ್ಮ ದೇಶದ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಈ ಮೂಲಕಪ್ರಧಾನಿ ನರೇಂದ್ರ ಮೋದಿಯವರು ಪ್ರಪಂಚಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರಾಷ್ಟçದ ರಕ್ಷಣೆಗೆ ನಿಂತವರು ಸೈನಿಕರಿಗೆ ಗೌರವ ಸಲ್ಲಿಸುವ ಈ ಹಿನ್ನೆಲೆಯಲ್ಲಿ ತಿರಂಗಾಯಾತ್ರೆಯನ್ನು ಮಾಡಿ ಅವರಿಗೆ ಅಭಿನಂದಿಸುತ್ತಿದ್ದೇವೆ ಎಂದರು.
ಬಿಜೆಪಿ ನವಲಗುಂದ ಮಂಡಲ ಅಧ್ಯಕ್ಷ ಗಂಗಪ್ಪ ಮನವಿ ಮಾತನಾಡಿ, ಪಾಕಿಸ್ತಾನದಲ್ಲಿ ಉಗ್ರಗಾಮಿಗಳನ್ನು ತಯಾರು ಮಾಡುವ ನೆಲೆಗಳನ್ನು ಕೇವಲ ೨೭ ಸೆಕೆಂಡ್‌ಗಳಲ್ಲಿ ನಮ್ಮ ಯೋಧರು ಧ್ವಂಸಗೊಳಿದ್ದಾರೆ. ದೇಶದ ವ್ಯವಸ್ಥೆ ಬುಡಮೇಲು ಮಾಡುವವರಿಗೆ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ' ಎಂದರು. ಜೆಡಿಎಸ್ ಮುಖಂಡ ಶ್ರೀಶೈಲ ಮೂಲಿಮನಿ ಮಾತನಾಡಿ,
ಜನರನ್ನು ಗುರಿಯಾಗಿಸದೇ ಉಗ್ರರನ್ನು ಹಾಗೂ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿರುವುದನ್ನು ಜಗತ್ತೇ ಮೆಚ್ಚಿಕೊಂಡಿದೆ. ಭಾರತದ ಶಕ್ತಿ ಜಗತ್ತಿಗೆ ಗೊತ್ತಾಗಿದೆ. ಇಂದಿನ ಯುವಶಕ್ತಿಗೆ ದೇಶಭಕ್ತಿಯ ಅರಿವು ಮೂಡಿಸುವ ಕೆಲಸ ಆಗಬೇಕು’ ಎಂದು ಅಭಿಪ್ರಾಯಪಟ್ಟರು.
ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಜರುಗಿದ ತಿರಂಗಾ ಯಾತ್ರೆಯಲ್ಲಿ ಸೈನಿಕರು, ಮಾಜಿ ಸೈನಿಕರು, ಪಾಲ್ಗೊಂಡಿದ್ದರು. ಬೃಹತ್ ರಾಷ್ಟ ಧ್ವಜವನ್ನು ಹಿಡಿದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿದರು. ಪಟ್ಟಣದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.
ನಿAಗಪ್ಪ ಸುತಗಟ್ಟಿ, ಷಣ್ಮುಖ ಗುರಿಕಾರ, ದೇವರಾಜ ದಾಡಿಭಾಯಿ, ಸುರೇಶ ಗಾಣಿಗೇರ, ಶಂಕ್ರು ತೋಟದ, ಶ್ರೀಧರ ಪಟ್ಟಣಶೆಟ್ಟಿ, ಶ್ರೀಶೈಲ ಮೂಲಿಮನಿ, ಪ್ರಕಾಶ ಅಂಗಡಿ, ಸಿದ್ಧನಗೌಡ ಪಾಟೀಲ, ಸಾಯಿಬಾಬಾ ಆನೇಗುಂದಿ, ಮಲ್ಲಿಕಾರ್ಜುನ ಸಂಗನಗೌಡ್ರ, ಮುತ್ತು ಕೊಳ್ಳಿ, ರೋಹಿತ ಮತ್ತಿಹಳ್ಳಿ, ಸೋಮು ಪಟ್ಟಣಶೆಟ್ಟಿ,, ಮಲ್ಲೇಶ ಉಪ್ಪಾರ, ಶರಣಪ್ಪ ಹಕ್ಕರಕಿ, ದೇವರಾಜ ಕರಿಯಪ್ಪನವರ, ಸುಭಾಸಚಂದ್ರಗೌಡ ಪಾಟೀಲ, ಶಂಭು ಮೆಣಸಿನಕಾಯಿ, ಮಲ್ಲಿಕಾರ್ಜುನ ಸಂಗನಗೌಡ್ರ, ಶಿವು ಹೊಸಳ್ಳಿ, ಮಂಜುನಾಥ ಗಡಿಯಣ್ಣನವರ, ಸೇರಿದಂತೆ ದೇಶಭಕ್ತರು ಭಾ