
ಹುಬ್ಬಳ್ಳಿ, ಜೂ8: ಮುಂಬೈನಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರನ್ನು ವಿಎಕೆ ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಾಟವೆ ಅವರು ಭೇಟಿ ಮಾಡಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮ ಬಗ್ಗೆ ಚರ್ಚಿಸಿದರು.
ಇದೇ ವೇಳೆ ಟೈಗರ್ ಶ್ರಾಫ್ ಮಾತನಾಡಿ, ವಿಎಕೆ ಫೌಂಡೇಶನ್ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದರು. ಹಾಗೂ ನಿಮ್ಮ ಕಾರ್ಯಗಳು ಸದಾಕಾಲ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಚಂದನ ಬಂಕಾಪುರ, ಸುನಿಲ ಕಾಟವೆ, ಸಚಿನ ಪೂಜಾರಿ, ಆನಂದ್ ಬಾಕಳೆ, ಗಜು ಜರ್ತಾರ್ಘರ, ಆಕಾಶ್ ರಂಗ್ರೇಸ್, ಶ್ರೀಧರ ಕಲ್ಬುರ್ಗಿ, ಸಾಯಿ ಕಠಾರೆ, ಅರುಣ್ ಮೆಹೆರವಾಡೆ, ದಾನೇಶ ಕಟರೆ, ರೋಹನ ಇರ್ಕಲ್ ಮತ್ತಿತರರಿದ್ದರು.