
ತಾಳಿಕೋಟೆ: ದಾರವಾಡದಲ್ಲಿ ಜರುಗಿದ ರಾಷ್ಟç ಸೇವಾ ಸಮಿತಿಯ ೯೦ ನೇ ವರ್ಷದ ಸಂಭ್ರಮದ ಅಂಗವಾಗಿ ವಿಜಯದಶಮಿ ಪ್ರಯುಕ್ತ ಕರ್ನಾಟಕ ಉತ್ತರ ಪ್ರಾಂತ ಮಟ್ಟದ ಎರಡು ದಿನಗಳ ಸಮ್ಮೇಳನವು ಸಪ್ಟೆಂಬರ್ ೧ ಮತ್ತು ೨ರಂದು ಧಾರವಾಡದಲ್ಲಿ ಅದ್ಧೂರಿಯಾಗಿ ಜರುಗಿತು.
ಕರ್ನಾಟಕದ ೧೮ ಜಿಲ್ಲೆಗಳಿಂದ ಸಮಿತಿಯ ಮಹಿಳಾ ಕಾರ್ಯಕರ್ತರು ಈ ಮಹತ್ವದ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ವಿಜಯಪುರ ಜಿಲ್ಲೆಯೊಂದರಿAದಲೇ ನೂರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಸಮ್ಮೇಳನದಲ್ಲಿ ತಾಳಿಕೋಟೆಯ ಮೂವರು ಮಹಿಳೆಯರಾದ ಶ್ರೀಮತಿ ಶೋಭಾ ಪ್ರಕಾಶ್ ಕಟ್ಟಿಮನಿ, ಶ್ರೀಮತಿ ಶೋಭಾ ರಾಮಚಂದ್ರ ಸುಬೇದಾರ ಹಾಗೂ ಶ್ರೀಮತಿ ವಿದ್ಯಾವತಿ ಚಿದಂಬರ ಕರಮ ರ ಕರ್ ಅವರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಮ್ಮೇಳನದ ಅಂಗವಾಗಿ ಅಕ್ಟೋಬರ್ ೨ರಂದು ಧಾರವಾಡದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಮಹಿಳೆಯರು ಶಿಸ್ತು, ಸಂಘಟನಾ ಮನೋಭಾವ ಹಾಗೂ ದೇಶಭಕ್ತಿಯ ಸಂದೇಶದೊAದಿಗೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ರಾಷ್ಟç ಸೇವಾ ಸಮಿತಿಯು ಕಳೆದ ೯೦ ವರ್ಷಗಳಿಂದ ಸಮಾಜದಲ್ಲಿ ರಾಷ್ಟçಭಕ್ತಿ, ಸಂಸ್ಕಾರ, ಸಂಘಟನೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಸಮ್ಮೇಳನವು ಮಹಿಳೆಯರಲ್ಲಿ ಸಂಘಟನಾ ಶಕ್ತಿ ಮತ್ತು ರಾಷ್ಟçಸೇವೆಯ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
ಈ ಕುರಿತು ಸಮ್ಮೇಳನದಲ್ಲಿ ಭಾಗವಹಿಸಿದ್ದ ಶ್ರೀಮತಿ ಶೋಭಾ ಚಿದಂಬರ ಕರಮಕರ ಅವರು ಮಾಹಿತಿ ಹಂಚಿಕೊAಡಿದ್ದಾರೆ.
























