
ಕಲಬುರಗಿ,ಮೇ.23-ಫರತಾಬಾದ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಟ್ರ್ಯಾಕ್ಟರ್ ಕಳ್ಳತನÀ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿತರನ್ನು ಬಂಧಿಸಿ ಬಂಧಿತರಿಂದ 11,50,000/- ರೂಪಾಯಿ ಮೌಲ್ಯದ 3 ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಫಜಲಪುರ ತಾಲ್ಲೂಕಿನ ಹಸರಗುಂಡಗಿ ಗ್ರಾಮದ ರಿಯಾಜ್ ಪಟೇಲ್ ತಂದೆ ರಸೀದ್ ಪಟೇಲ್ ಗುಡನಾಲ (25), ಫರಹತಾಬಾದ ಗ್ರಾಮದ ರಾಜಶೇಖರ ತಂದೆ ನಾಗಪ್ಪ ಮಂದರವಾಡ (20) ಮತ್ತು ಬಂದರವಾಡ ಗ್ರಾಮದ ನಾಗರಾಜ ತಂದೆ ಚಂದ್ರಕಾಂತ ಬಾಲಮಾರ್ (25) ಎಂಬುವವರನ್ನು ಬಂಧಿಸಿ 11.50 ಲಕ್ಷ ರೂ.ಮೌಲ್ಯದ 3 ಟ್ರ್ಯಾಕ್ಟರ್‍ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಟ್ರ್ಯಾಕ್ಟರ್ ಕಳ್ಳತನ ಪ್ರಕರಣಗಳ ಪತ್ತೆಗೆ ಕಮೀಷನರ್, ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್ ಅವರ ಮಾರ್ಗದರ್ಶನದಲ್ಲಿ, ಸಬ್-ಅರ್ಬನ್ ಉಪ ವಿಭಾಗದ ಎಸಿಪಿ ಡಿ.ಜಿ.ರಾಜಣ್ಣ ಅವರ ನೇತೃತ್ವದಲ್ಲಿ ಫರಹತಾಬಾದ ಪೊಲೀಸ್ ಠಾಣೆ ಪಿಐ ಮಲ್ಲಿಕಾರ್ಜುನ ಸಿ.ಇಕ್ಕಳಕಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಮೂವರು ಟ್ರಾಕ್ಟರ್ ಕಳ್ಳರನ್ನು ಬಂಧಿಸಿ 11.50 ಲಕ್ಷ ರೂ.ಮೌಲ್ಯದ 3 ಟ್ರ್ಯಾಕ್ಟರ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟ್ರ್ಯಾಕ್ಟರ್ ಕಳ್ಳರ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರು ಶ್ಲಾಘಿಸಿದ್ದಾರೆ.