Home ಜಿಲ್ಲೆ ೨೫ ವರ್ಷಗಳ ವಕೀಲಿವೃತ್ತಿ ಪೂರ್ಣಗೊಳಿಸಿದ ಮೂವರು ವಕೀಲರಿಗೆ ಸನ್ಮಾನ

೨೫ ವರ್ಷಗಳ ವಕೀಲಿವೃತ್ತಿ ಪೂರ್ಣಗೊಳಿಸಿದ ಮೂವರು ವಕೀಲರಿಗೆ ಸನ್ಮಾನ

ಬೀದರ್, ಆ ೨೫: ಬೀದರ್ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಇಂದು ಮಧ್ಯಾಹ್ನ ೨ ಗಂಟೆಗೆ ೨೫ ವರ್ಷಗಳ ವಕೀಲಿವೃತ್ತಿ ಪೂರ್ಣಗೊಳಿಸಿದ ಹಿರಿಯ ವಕೀಲರಾದ ಬಸವರಾಜ್ ಭುಳ್ಳಾ ಕಂಗನಕೋಟ, ಅಶೋಕ್ ಕುಮಾರ್ ಮಾನೂರೆ ಹಾಗೂ ಸಂಜು ಕುಮಾರ್ ಸಜ್ಜನ್ ಅವರ ಬೆಳ್ಳಿ ಮಹೋತ್ಸವವನ್ನು ಆಚರಿಸಿ, ಸನ್ಮಾನಿಸಲಾಯಿತು.

ಜಿಲ್ಲಾ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ವಕೀಲರ ವೃತ್ತಿಪರ ಸೇವೆ ಮತ್ತು ಕಾನೂನು ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಮತ್ತು ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.

೨೫ ವರ್ಷಗಳ ಕಾಲ ವಕೀಲಿವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ಮೂವರು ವಕೀಲರನ್ನು ಅಭಿನಂದಿಸಿದ ಗಣ್ಯರು, ಅವರ ಮುಂದಿನ ವೃತ್ತಿಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.