ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ:ಸಹನಾ

ಸಂಜೆವಾಣಿ ಪ್ರತಿನಿಧಿಯಿಂದ)


ಚಿತ್ರದುರ್ಗ,ಆ.೧೪:ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು.ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದು ಹತ್ಯೆಗೀಡಾದ ರೇಣುಕಾಸ್ವಾಮಿ ಪತ್ನಿ ಸಹನಾ ಹೇಳಿದರು.


ನಟ ದರ್ಶನ್ ಸೇರಿದಂತೆ ೭ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬೆನ್ನಲ್ಲೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಆದೇಶವನ್ನು ಅವರು ಸ್ವಾಗತಿಸಿದ್ದಾರೆ.


ರೇಣುಕಾಸ್ವಾಮಿ ಚಿಕ್ಕಪ್ಪ ಷಡಾಕ್ಷರಿ ಮಾತನಾಡಿ ಸರ್ಕಾರ ಮುಂದೆ ಹೋಗದಿದ್ದರೆ ತಪ್ಪಾಗುತ್ತಿತ್ತು, ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ ಎಂದರು.


ದರ್ಶನ್ ಸೇರಿದಂತೆ ೭ ಮಂದಿ ಆರೋಪಿಗಳಿಗೆ ಜಾಮೀನು ರದ್ದುಪಡಿಸಿರುವ ಕ್ರಮ ಸ್ವಾಗತಾರ್ಹ.ತಮ್ಮ ಪುತ್ರನ ಸಾವಿಗೆ ನ್ಯಾಯ ಸಿಕ್ಕಿದೆ. ಕಾನೂನಿನ ಬಗ್ಗೆ ನಂಬಿಕೆ ಇದೆ ಎಂದು ರೇಣುಕಾಸ್ವಾಮಿ ತಾಯಿ ರತ್ನಮಲಾ ಪ್ರತಿಕ್ರಿಯಿಸಿದ್ದಾರೆ.


ಮನೆ ದೇವರಿಗೆ ಇಂದು ಅಭಿಷೇಕ ಸಲ್ಲಿಸಲು ಹೊರಟಿದ್ದೆವು. ಇಂದು ತೀರ್ಪು ಬರುವ ಬಗ್ಗೆ ಮಾಹಿತಿ ಇರಲಿಲ್ಲ. ಒಳ್ಳೆಯ ತೀರ್ಪು ಬಂದಿದೆ.ಮಗನ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ಹೇಳಿದ್ದಾರೆ.


ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ನಮಗೆ ನ್ಯಾಯ ಸಿಕ್ಕಿದೆ. ಕಾನೂನನ್ನು ಗೌರವಿಸುತ್ತೇವೆ. ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿಯಾಗಿದೆ. ರೇಣುಕಾಸ್ವಾಮಿ ಪತ್ನಿ ಸಹನಾ ಚಿಕ್ಕ ಹೆಣ್ಣು ಮಗಳು, ಆಕೆಗೆ ವಿಶೇಷ ಪ್ರಕರಣದಡಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.