ಹೀನ ಕೃತ್ಯ ಎಸಗುವವರಿಗೆ ಗಲ್ಲು ಶಿಕ್ಷೆಯಾಗಲಿ:ಕಟ್ಟಿಮನಿ

ತಾಳಿಕೋಟೆ:ಅ.೩೦: ದೇಶಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿದಾನಕ್ಕೆ ಬದ್ದರಾಗದೇ ನಮ್ಮ ಹೀನ ಮನಸ್ಥಿತಿಯೊಂದಿಗೆ ಹೇಯ ಕೃತ್ಯವೆಸಗುವಂತವರಿಗೆ ಗಲ್ಲು ಶಿಕ್ಷೆ ವಿದಿಸುವಂತಹ ಕಾರ್ಯವಾಗಬೇಕು ಇದರಿಂದ ದಲಿತರು, ಹಿಂದೂಳಿದ ವರ್ಗದವರು, ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ತಡೆಯಲು ಸಾದ್ಯವಾಗಲಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಸಿದ್ದಪ್ಪ ಕಟ್ಟಿಮನಿ ಅವರು ಹೇಳಿದರು.
ಬುಧವಾರರಂದು ವಿವಿದ ದಲಿತ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆ ಇಡೇರಿಕೆಗಾಗಿ ತಾಳಿಕೋಟೆ ಸಂಪೂರ್ಣ ಬಂದ್ ಕರೆ ಹಿನ್ನೇಲೆ ನಡೆದ ಬೃಹತ್ ಪ್ರತಿಭಟನಾ ಮೇರವಣಿಗೆ ನಂತರ ನಡೆದ ಸಭೆಯ ನೇತೃತ್ವ ವಹಿಸಿ ಮಾತನಾಡುತ್ತಿದ್ದ ಅವರು ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನ್ಯಾಯವಾದಿ ರಾಕೇಶ ಕಿಶೋರ ಎಂಬಾತನು ಶೂ ಎಸೆದು ದೇಶದ ಕಾನೂನಿಗೆ ಅಗೌರವ ತೋರುವಂತಹ ಕಾರ್ಯವನ್ನು ಮಾಡಿದ್ದಾನೆ ನ್ಯಾಯಾಧೀಶರು ಎಂದರೆ ಈ ದೇಶದ ನ್ಯಾಯವನ್ನು ಎತ್ತಿ ಹಿಡಿಯುವಂತಹ ಕಾರ್ಯ ಮಾಡುತ್ತಾರೆ ಅಂತವರ ಮೆಲೆ ಶೂ ಎಸೆದು ತನ್ನ ಮನೋವಾದಿತನವನ್ನು ಪ್ರದರ್ಶಿಸಿದ್ದಾನೆ ಈ ವಿಷಯ ನಡೆದ ೯ ಗಂಟೆಯ ನಂತರ ಪ್ರದಾನಿಗೆ ಮುಟ್ಟಿದಾಗ ವಿಷಾದ ವ್ಯಕ್ತಪಡಿಸುತ್ತಾರೆ ಗೃಹ ಸಚಿವರು, ಕಾನೂನು ಮಂತ್ರಿಗೆ ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳುವದು ಇಂತಹ ಮನಸ್ಥಿತಿಯ ಸರ್ಕಾರದ ವಿರೂದ್ದ ಎಲ್ಲರನ್ನು ರೊಚ್ಚಿಗೆಬ್ಬಿಸುವಂತೆ ಮಾಡಿದೆ ಈ ದೇಶದ ಪವಿತ್ರ ಸಂವಿದಾನಕ್ಕೆ ಅಪಮಾನ ವೆಸಗಿದ ನ್ಯಾಯವಾದಿಗೆ ಗಲ್ಲು ಶಿಕ್ಷೆಯ ಮೂಲಕ ಸಂವಿದಾನದ ತಾಕತ್ತನ್ನು ತೋರಿಸಬೆಕಾಗಿದೆ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ಅಪ್ರಾಪ್ತ ಬಾಲಕಿಯ ಮೆಲೆ ಸಾಮೂಹಿಕ ನಾಲ್ಕೆöÊದು ಜನ ಕಿಚಕರು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ ಅಂತವರಿಗೆ ಗಲ್ಲು ಶಿಕ್ಷೆ ವಿದಿಸಬೇಕೆಂದು ಒತ್ತಾಯಿಸಿದ ಅವರು ರಾಕ್ಷಸ ಮನಸ್ಥಿತಿ ಹೊಂದಿದವರಿಗೆ ಕಠಿಣ ಶಿಕ್ಷಯೇ ಪಾಠವೆಂಬAತಾಗಬೇಕು ಎಂದ ಅವರು ರಾಜ್ಯ ಸರ್ಕಾರದ ಪಂಚಾಯತ್ ರಾಜ್ಯ ಸಚಿವ ಪ್ರೀಯಾಂಕಾ ಖರ್ಗೆ ಅವರು ಆರ್‌ಎಸ್‌ಎಸ್ ಬ್ಯಾನ ವಿಚಾರ ಪ್ರಸ್ಥಾಪಿಸಿದ್ದಾಗಿನಿಂದ ಬೆದರಿಕೆ ಕರೆಗಳು ಬಂದೇ ಬರುತ್ತಿವೆ ಇಂತಹ ಬೆದರಿಕೆ ಕರೆಗಳಿಗೆ ಯಾರೂ ಅಂಜುವದಿಲ್ಲಾ ಅವರ ಹಿಂದೆ ಸಂವಿದಾನವಿದೆ ಅವರನ್ನು ರಕ್ಷಣೆ ಮಾಡುತ್ತದೆ ಅವರಿಗೆ ಕೊಲೆ ಬೆದರಿಕೆ ಬರುತ್ತಿರುವದು ೯ ನೇ ಭಾರಿಯಾಗಿದೆ ಒಬ್ಬ ರಾಜ್ಯ ಸರ್ಕಾರದ ಸಚಿವರಿಗೆ ಹೀಗಾದರೆ ಸಾಮಾನ್ಯರ ಸ್ಥಿತಿ ಎಲ್ಲಿಗೆ ಬರಬಹುದು ಎಂಬುದು ವಿಚಾರ ಮಾಡಬೆಕಾಗಿದೆ ನಮ್ಮೆಲ್ಲರ ಒಗ್ಗಟ್ಟಿನಲ್ಲಿ ಭಲವಿದೆ ಈ ಭಲದಿಂದ ಸಂವಿದಾನವನ್ನು ಉಳಿಸಿಕೊಂಡು ಹೋಗಬೆಕಾಗಿದೆ ಎಂದರು.
ಇನ್ನೋರ್ವ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಂದ್ರಶೇಖರ ಶಿಂಗೆ ಅವರು ಮಾತನಾಡಿ ಈ ದೇಶದಲ್ಲಿ ಮನೋವಾದಿಗಳು ಅರಾಜಕತೆ ಸೃಷ್ಠಿಸಿ ಸಂವಿದಾನಕ್ಕೆ ಪೆಟ್ಟು ನೀಡಲು ತಂತ್ರವನ್ನು ರೂಪಿಸುತ್ತಾ ಸಾಗಿದ್ದಾರೆ ಇಂತವರು ಸಾವಿರ ವರ್ಷಗಳು ಬಡದಾಡಿದರೂ ವ್ಯರ್ಥವಾಗಲಿದೆ ಹಿಂದೂಳಿದ, ದಲಿತರು, ಅಲ್ಪ ಸಂಖ್ಯಾತರು ಸಂವಿದಾನದ ಜೊತೆಗೆ ನಡೆಯುತ್ತಿದ್ದಾರೆ ಈ ದೇಶದಲ್ಲಿ ಎಂದೂಕೂಡಾ ಅರಾಜಕತೆ ಸೃಷ್ಠಿಯಾಗಲು ಬಿಡುವದಿಲ್ಲಾ ನಾವು ಅಂಬೇಡ್ಕರ್ ವಾದಿಗಳಾಗಿದ್ದೇವೆ ಎಂದ ಅವರು ಸಚಿವ ಪ್ರೀಯಾಂಕಾ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಆರ್‌ಎಸ್‌ಎಸ್ ಬ್ಯಾನ್ ವಿಚಾರದಲ್ಲಿ ಅವರಿಗೆ ಎಷ್ಟೇ ಬೆದರಿಕೆಗಳು ಬಂದರೂ ಅವರ ಜೊತೆಗೆ ದಲಿತ ಸಂಘಟನೆಗಳಿವೆ, ಹಿಂದೂಳಿದ ವರ್ಗದವರು, ಅಲ್ಪ ಸಂಖ್ಯಾತರು ಇದ್ದಾರೆಂದರು. ಮುದ್ದೇಬಿಹಾಳದ ಬನೋಶಿ ಗ್ರಾಮದ ದಲಿತ ಅಪ್ರಾಪ್ತ ಬಾಲಕೀಯ ಮೇಲೆ ಅತ್ಯಾಚಾರ ವೆಸಗಿ ಹೀನ ಕೃತ್ಯವನ್ನು ವೆಸಗಲಾಗಿದೆ ಈ ಕೃತ್ಯ ವೆಸಗಿದವರಿಗೆ ಬಂದಿಸಲಾಗಿದೆ ಆದರು ಅವರಿಗೆ ಗಲ್ಲು ಶಿಕ್ಷೆ ವಿದಿಸಿ ಅತ್ಯಾಚಾರಿಗಳಿಗೆ ಏಚ್ಚರಿಕೆ ಸಂದೇಶ ರವಾನಿಸಬೆಕಾಗಿದೆ ಎಂದರು.
ಇನ್ನೋರ್ವ ಡಿಎಸ್‌ಎಸ್ ಬೆಳಗಾವಿ ವಿಭಾಗೀಯ ಸಂಚಾಲಕ ದೇವೆಂದ್ರ ಹಾದಿಮನಿ ಅವರು ಮಾತನಾಡಿ ಸ್ವಾತಂತ್ರö್ಯ ಸಿಕ್ಕು ೭೮ ವರ್ಷಗಳು ಕಳೆದು ಹೋದರೂ ಕೂಡಾ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ಎಂಬುದು ನಿಂತಿಲ್ಲಾ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ಅಪ್ರಾಪ್ತ ಬಾಲಕೀಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿ ಕೊಲೆ ಮಾಡಿರುವದೇ ಸಾಕ್ಷೀಯಾಗಿದೆ ಈ ಕೃತ್ಯ ವೆಸಗಿದ ಆರೋಪಿಗಳಿಗೆ ಬಂದಿಸಿದರೆ ಸಾಲದು ಅವರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿದಿಸಿ ಅತ್ಯಾಚಾರಿಗಳಿಗೆ ಕಠಿಣ ಸಿಕ್ಷೆಯ ಎಚ್ಚರಿಕೆ ಸಂದೇಶ ನೀಡಬೇಕಾಗಿದೆ ಭಾರತ ದೇಶದ ಪವಿತ್ರ ಸಂವಿದಾನದಡಿಯಲ್ಲಿ ಕಾನೂನನ್ನು ಎತ್ತಿ ಹಿಡಿಯುವ ನ್ಯಾಯಾಧೀಶರ ಮೇಲೆ ರಾಕೇಶ ಕಿಶೋರ ಎಂಬ ವಕೀಲ ಶೂ ಎಸೆದು ಸಂವಿದಾನಕ್ಕೆ ಅಪಮಾನವೆಸಗುವಂತಹ ಕೆಲಸ ಮಾಡಿದ್ದಾನೆ ಭಾರತ ಸರ್ಕಾರ ಇಂತಹ ಮನೋವಾದಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಅದರಂತೆ ಸಚಿವ ಪ್ರೀಯಾಂಕಾ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದವರಿಗೆ ಬಂದಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದರು.
ದಲಿತ ಯುವ ಮುಖಂಡ ಜೈಭೀಮ ಮುತ್ತಗಿ ಅವರು ಮಾತನಾಡಿ ಈ ಭಾರತ ದೇಶದ ಒಳಿತಿಗಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಪಟ್ಟಣ ಶ್ರಮ ನೋಡಿದರೆ ಈ ದೇಶದ ಎಂದೂ ಉದ್ದಾರವಾಗಬೇಕಿತ್ತು ಆದರೆ ಇಂತಹ ಮನೋವಾದಿಗಳ ಕಪಿಮುಷ್ಠಿಯಿಂದ ದೇಶದಲ್ಲಿ ಹೀನ ಕೃತ್ಯಗಳು ತಾಂಡವವಾಡುತ್ತಾ ನಡೆದಿವೆ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ದಲಿತ ಅಪ್ರಾಪ್ತ ಬಾಲಕೀಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿ ಕೊಲೆ ಮಾಡಲಾಗಿದೆ ಈ ವಿಷಯಕ್ಕೆ ಸಂಬAದಿಸಿ ಆರೋಪಿತರನ್ನು ಪೊಲೀಸ್‌ರು ಬಂಧಿಸಿದ್ದಾರೆ ಆದರೆ ಶಾಸಕ ಅಪ್ಪಾಜಿ ನಾಡಗೌಡ ಅವರು ಅವರ ಕುಟುಂಭಕ್ಕೆ ಪರಿಹಾರ ಚೆಕ್ ನೀಡಿ ಪೊಟೋ ಕ್ಲಿಕಿಸಿಕೊಂಡು ತಮ್ಮ ವೆಬ್ ಪೇಜ್‌ನಲ್ಲಿ ಅಸಹಜವಾಗಿ ಸಾವನಪ್ಪಿದ ಬಾಲಕೀಯ ಕುಟುಂಭಕ್ಕೆ ಪರಿಹಾರ ನೀಡಲಾಯಿತೆಂದು ಹಾಕಿಕೊಂಡಿದ್ದಾರೆ ಇದು ಅತ್ಯಂತ ಖಂಡನೀಯವಾದAತಹದ್ದಾಗಿದೆ ಹಿಂದೂಳಿದ, ದಲಿತರು, ಅಲ್ಪ ಸಂಖ್ಯಾತರ ಜೊತೆಗೆ ಶಾಸಕ ನಾಡಗೌಡರು ಇರುತ್ತಾರೆಂದು ಮತ ಹಾಕಿ ಬೆಂಬಲಿಸಿದ್ದೇವೆ ಆದರೆ ಮನೋವಾದಿಗಳ ಜೊತೆಗೆ ಕೈ ಜೋಡಿಸಿರುವದು ಶಾಸಕ ನಾಡಗೌಡರಿಗೆ ಶೋಭೆ ತರುವಂತಹದ್ದಲ್ಲಾವೆAದ ಅವರಿಗೆ ಈ ವಿಷಯ ಪ್ರಶ್ನೀಸುವಂತಹ ಕಾರ್ಯ ನಡೆಯಬೇಕೆಂದ ಅವರು ಈ ಹೀನ ಕೃತ್ಯದಲ್ಲಿ ಭಾಗಿಯಾದವರಿಗೆ ನ್ಯಾಯಾಧೀಶರ ಮೆಲೆ ಶೂ ಎಸೆದ ವಕೀಲನಿಗೆ ಗಲ್ಲು ಸಿಕ್ಷೆ ವಿದಿಸಬೆಕೆಂದರು.
ಇನ್ನೋರ್ವ ದಲಿತ ಯುವ ಮುಖಂಡ ಸಿದ್ದು ಬಾರಿಗಿಡದ ಅವರು ಮಾತನಾಡಿದರು.
ಬೃಹತ್ ಪ್ರತಿಭಟನಾ ಮೇರವಣಿಗೆಯು ಅಂಬೇಡ್ಕರ್ ಭವನದಿಂದ ಪ್ರಾರಂಭಗೊAಡು ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕತ್ರಿ ಭಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾಪ್ರತಾಪಸಿಂಹ್ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆಗುಂಡಾ ಹಾಯ್ದು ಬಸವೇಶ್ವರ ಸರ್ಕಲ್‌ಗೆ ಆಗಮಿಸಿ ಘಂಟೆಕಾಲ ದರಣಿ ನಡೆಸಲಾಯಿತು. ತಾಳಿಕೋಟೆ ಸಂಪೂರ್ಣ ಬಂದ್ ಕರೆ ಹಿನ್ನೇಲೆ ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳು ಸ್ವಯಂ ಕೃತವಾಗಿ ಬಂದ್ ಆಗಿದ್ದವಲ್ಲದೇ ಬಸ್‌ಗಳ ಓಡಾಟವು ಪಟ್ಟಣದಿಂದ ಆಚೆ ಸಂಚರಿಸಲು ವ್ಯವಸ್ಥೆ ಮಾಡಿದ್ದರೂ ಕೂಡಾ ವಾಹನ ಸಂಚಾರ ವಿಲ್ಲದೇ ಪಟ್ಟಣದ ಎಲ್ಲ ರಸ್ತೆಗಳು ಮತ್ತು ಬಸ್ ನಿಲ್ದಾಣವು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮನವಿ ಪತ್ರವನ್ನು ತಹಶಿಲ್ದಾರ ಶ್ರೀಮತಿ ವಿನಯಾ ಹೂಗಾರ ಅವರಿಗೆ ಸಲ್ಲಿಸಿದರು.
ಈ ಪ್ರತಿಭಟನಾ ಮೇರವಣಿಗೆಯ ನೇತೃತ್ವವನ್ನು ವಿವಿದ ದಲಿತ ಪರ ಸಂಘಟನೆಗಳ ಒಕ್ಕೂಟದ ಗೌರವಾದ್ಯಕ್ಷ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಅದ್ಯಕ್ಷರಾದ ಮುತ್ತಪ್ಪಣ್ಣ ಚಮಲಾಪೂರ, ಡಿಎಸ್‌ಎಸ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ, ಕಾಶಿನಾಥ ಕಾರಗನೂರ, ಮಾಸುಮಸಾಬ ಕೇಂಭಾವಿ, ರಾಮಣ್ಣ ಕಟ್ಟಿಮನಿ, ಬಸ್ಸು ಕಟ್ಟಿಮನಿ(ಮಾದರ), ಶಫಿಕ್ ಇನಾಮದಾರ, ಶಂಕರ ಪಡಸಾಲಿ, ಶ್ರೀಮತಿ ಅಂಜುಳಾದೇವಿ, ಶಿವಶಂಕರ ಕಟ್ಟಿಮನಿ, ಮೈನು ಬೇಪಾರಿ, ನಿಸಾರ ಬೇಪಾರಿ, ಸಾಯಬಣ್ಣ ಗುಂಡಕನಾಳ, ನಿಂಗಣ್ಣ ಮಾಯವಂಶಿ, ಕಾಶಿನಾಥ ತುಂಬಗಿ, ಅಬುಬಕರ ಲಾಹೋರಿ, ನಭಿ ಲಾಹೋರಿ, ಮಶಾಕಸಾಬ ನಗಾರ್ಚಿ, ಮಹಾಂತೇಶ ಕಟ್ಟಿಮನಿ, ಶಿವು ಕೂಚಬಾಳ, ರೇವಣಪ್ಪ ದಲ್ಲಾಳಿ, ರಮೇಶ ಹೊನ್ನಳ್ಳಿ, ಗೋಪಾಲ ಕಟ್ಟಿಮನಿ, ಬಸವರಾಜ ತಳವಾರ, ಮೊದಲಾದವರು ವಹಿಸಿದ್ದರು. ಪಟ್ಟಣದಲ್ಲಿ ಯಾವುದೇ ತರಹದ ಅಹಿತಕರ ಘಟನೆ ಜರುಗದಂತೆ ಡಿಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಆಯ್ ಮಹ್ಮದಪಸೀಯುದ್ದೀನ, ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್, ಅಪರಾದ ವಿಭಾಗದ ಪಿಎಸ್‌ಐ ಎಸ್.ಎಂ.ಪಡಶೇಟ್ಟಿ ಅವರು ತಮ್ಮ ಸಿಬ್ಬಂದಿಗಳೊAದಿಗೆ ಯೋಗ್ಯ ಬಂದೋಬಸ್ತ ಕೈಕೊಂಡಿದ್ದರು.