Home ಜಿಲ್ಲೆ ಕಲಬುರಗಿ ಸಂವಿಧಾನವನ್ನೇ ನಾಶ ಮಾಡುವ ಮನಸುಳ್ಳವರು ಅಧಿಕಾರ ಅನುಭವಿಸುತ್ತಿದ್ದಾರೆ : ಡಿ.ಜಿ.ಸಾಗರ

ಸಂವಿಧಾನವನ್ನೇ ನಾಶ ಮಾಡುವ ಮನಸುಳ್ಳವರು ಅಧಿಕಾರ ಅನುಭವಿಸುತ್ತಿದ್ದಾರೆ : ಡಿ.ಜಿ.ಸಾಗರ

ಕಲಬುರಗಿ:ಜು.6: ಸಂವಿಧಾನವನ್ನೇ ನಾಶ ಮಾಡುವ ಸನಾತನಿ ಸಂಸ್ಕøತಿ ಪ್ರತಿಪಾಧನೆ ಮಾಡುವ ಪಟ್ಟಭದ್ರ ಮನಸುಳ್ಳವರು ಅಧಿಕಾರ ಕೇಂದ್ರದಲ್ಲಿ ಕುಳಿತ್ತಿದ್ದಾರೆ. ಎನ್ ಆರ್ ಸಿ, ಎಸ್ ಐ ಆರ್ ಅಂತಃ ಕೆಟ್ಟ ಆಲೋಚನಾ ಕಾನೂನುಗಳ ಮೂಲಕ ದಲಿತ ಮತ್ತು ಬಡ ಹಿಂದುಳಿದ ಸಮುದಾಯಗಳ ಹಕ್ಕುಗಳಿಗೆ ಸಂಚಕಾರ ರೂಪಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ ಜಿ ಸಾಗರ ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹರಿಹರ ಸಭಾಂಗಣದಲ್ಲಿ ಕೌದಿ ಪ್ರಕಾಶನ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಸಹಯೊಗದಲ್ಲಿ ಡಾ. ಪಿ. ನಂದಕುಮಾರ್ ರಚಿಸಿರುವ ಕಾಲದ ಕಟ್ಟಳೆ ಮೀರಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜನ ಸಮುದಾಯಗಳನ್ನು ಹೆಚ್ಚಾಗಿ ಜಾಗೃತ ಮಾಡಲು ಬರಹಗಳ ಮೂಲಕ ಮಾತ್ರ ಸಾದ್ಯ. ಕೃತಿಯ ಕುರಿತು ಮಾನಾಡುತ್ತ ಇಡೀ ಕೃತಿಯು ಹೋರಾಟದ ಕುದಿಯನ್ನು ಕಾಫಿಟ್ಟುಕೊಳ್ಳವುದರ ಮೂಲಕ ಜೀವಂತವಾಗಿದೆ ಎಂದರು.

ಮುಖ್ಯಥಿತಿಯಾಗಿ ಪಾಲ್ಗೊಂಡಿದ್ದ ಅಮೃತರಾವ್ ಹಿರೇಮನಿ ಮಾತನಾಡಿ, ಬದುಕನ್ನು ಪ್ರತಿನಿಧಿಸುವ ಬರಹಗಳು ಹೆಚ್ಚು ಬರಬೇಕು. ಅಲ್ಲದೆ ಪಿ ನಂದಕುಮಾರ ಅವರು ಇನ್ನು ಹೆಚ್ಚಿನ ಕೃಷಿಯನ್ನು ಸಾಹಿತ್ಯದಲ್ಲಿ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅದ್ಯಯನ ಸಂಸ್ಥೆಯ ನಿರ್ದೇಶಕ ಪೆÇ್ರ. ಎಚ್ ಟಿ ಪೆÇೀತೆ ಮಾತನಾಡಿ, ಕೆಲ ವ್ಯಕ್ತಿತ್ವದ ಒಡನಾಟದ ಮೂಲಕ ಕಲಿಯಬೇಕಾದ ಅನೇಕ ಸಂಗತಿಗಳಿವೆ. ಹೀಗಾಗಿ ದಲಿತ ಚಳವಳಿಯ ಪ್ರಜ್ಞೆಯಲ್ಲಿ ಕೆಲಸ ಮಾಡಿದ ಮಹನನೀಯರ ಓದು ಮುಖ್ಯ ಎಂದರು

ಸಿಂಡಿಕೆಟ್ ಸದಸ್ಯ ಎಸ್ ಪಿ ಸುಳ್ಳದ್, ಅಶೋಕ ಅಂಬಲಿಗಿ, ಎಚ್ ಶಂಕರ, ಬಿ ಸಿ ವಾಲಿ. ಅಂಬಣ್ಣ ಜಿವಣಗಿ, ದತ್ತಾತ್ರೇಯ ಇಕ್ಕಳಕಿ, ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಪೆÇ್ರ ವಿಕ್ರಮ್ ವಿಸಾಜಿ, ಡಾ ಕಿರಣ ಗಾನಜೂರು ಸಾಹಿತಿ ಡಾ ಸೂರ್ಯಕಾಂತ ಸುಜ್ಯಾತ, ಶ್ರೀಶೈಲ ನಾಗರಾಳ, ದಲಿತ ಮುಖಂಡ ಸುರೇಶ ಹಾದಿಮನಿ ಹಾಗೂ ಕಲಾ ನಿಕಾಯದ ಎಲ್ಲ ಅಥಿತಿ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ಎಂ. ಬಿ. ಕಟ್ಟಿ ಸ್ವಾಗತಿಸಿದರು. ಡಾ. ಕಿರಣ ವಲ್ಲೇಪುರಿ ನಿರೂಪಿಸಿದರು. ಸಿದ್ಧಾರ್ಥ ಚಿಮ್ಮಿಲ್ದಾಯಿ ಕ್ರಾಂತಿಗೀತೆ ಹಾಡಿದರು, ರಾಹುಲ ವಂದರ್ನಾಪಣೆ ಮಾಡಿದರು.