
ಬೀದರ:ಮಾ.6:ಮನ್ನಾಏಖೇಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ
ಜನರ ಅನುಕೂಲಕ್ಕಾಗಿ ?4.5 ಕೋಟಿ ವೆಚ್ಚದಲ್ಲಿ 50 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ
ನಿಮ್ಮೆಲ್ಲರ ಅಪಾರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ಇಂದು ನಾನು ನಿಮ್ಮ ಸೇವೆ ಮಾಡುವ ಅಮೂಲ್ಯ ಅವಕಾಶ ಪಡೆದಿದ್ದೇನೆ. ಜನಸೇವೆ ಎನ್ನುವುದು ನನಗೆ ಕೇವಲ ಒಂದು ಹುದ್ದೆಯಲ್ಲ; ಅದು ಒಂದು ಪವಿತ್ರ ಜವಾಬ್ದಾರಿ ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವುದು, ನಿಮ್ಮ ಕನಸುಗಳಿಗೆ ನೆರವಾಗುವುದು ಮತ್ತು ಕ್ಷೇತ್ರವನ್ನು ಅಭಿವೃದ್ಧಿಯ ಶಿಖರಕ್ಕೇರಿಸುವುದು ನನ್ನ ಪ್ರಧಾನ ಗುರಿಯಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿರುವ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನು ಜನರ ಅನುಕೂಲಕ್ಕಾಗಿ ?4.5 ಕೋಟಿ ವೆಚ್ಚದಲ್ಲಿ 50 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಇಂದು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಯೋಜನೆಯಿಂದ ಪ್ರದೇಶದ ಜನತೆಗೆ ಉತ್ತಮ ಆರೋಗ್ಯ ಸೇವೆಗಳು ಲಭ್ಯವಾಗಲಿದ್ದು, ತುರ್ತು ಚಿಕಿತ್ಸೆ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳು ಇನ್ನಷ್ಟು ಸುಲಭವಾಗಿ ದೊರೆಯಲಿವೆ. ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಪ್ರತಿಯೊಬ್ಬ ನಾಗರಿಕನ ಜೀವನಮಟ್ಟವನ್ನು ಸುಧಾರಿಸುವ ದೃಢ ಸಂಕಲ್ಪದೊಂದಿಗೆ ನಾನು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರೋಗ್ಯ, ಉತ್ತಮ ಬೀದಿ-ರಸ್ತೆಗಳು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆಯ ಸುಧಾರಣೆ ಹಾಗೂ ವಿದ್ಯುತ್ ಸೌಲಭ್ಯಗಳ ವಿಸ್ತರಣೆ ಮೂಲಕ ಗ್ರಾಮೀಣ ಭಾಗಗಳಲ್ಲಿ ಸಮತೋಲನಾಭಿವೃದ್ಧಿಗೆ ಒತ್ತು ನೀಡಲಾಗಿದೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲವರ್ಧನೆ ನಮ್ಮ ಪ್ರಮುಖ ಗುರಿಗಳಾಗಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ, ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳ ಒದಗಿಕೆ ಹಾಗೂ ಗುಣಮಟ್ಟದ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಆಸ್ಪತ್ರೆಗಳ ಸೌಲಭ್ಯಗಳನ್ನು ವಿಸ್ತರಿಸಿ, ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಸಮರ್ಪಕ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸರ್ಕಾರದ ಪ್ರತಿಯೊಂದು ಜನಪರ ಯೋಜನೆ ಕೂಡ ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪಾರದರ್ಶಕ ವ್ಯವಸ್ಥೆ ರೂಪಿಸಲಾಗಿದೆ. ಯಾವುದೇ ಜಾತಿ, ಧರ್ಮ, ವರ್ಗ ಅಥವಾ ರಾಜಕೀಯ ಭೇದಭಾವವಿಲ್ಲದೆ ಎಲ್ಲರಿಗೂ ನ್ಯಾಯ ಸಿಗುವಂತೆ ಕಾರ್ಯನಿರ್ವಹಿಸುವುದು ನನ್ನ ಬದ್ಧತೆ. ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.
ನಿಮ್ಮ ವಿಶ್ವಾಸವನ್ನು ಕಾಪಾಡಿಕೊಳ್ಳಲು ನಾನು ಸದಾ ಸಜ್ಜನಾಗಿದ್ದೇನೆ.
ನಾವು ಎಲ್ಲರೂ ಒಂದಾಗಿ ಕೆಲಸ ಮಾಡಿದರೆ, ಬೀದರ್ ದಕ್ಷಿಣ ಕ್ಷೇತ್ರವನ್ನು ಅಭಿವೃದ್ಧಿ, ಶಿಕ್ಷಣ, ಕೃಷಿ, ಕೈಗಾರಿಕೆ ಹಾಗೂ ಸಾಮಾಜಿಕ ಸಮೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ರೂಪಿಸಬಹುದು. ಜನರಿಗಾಗಿ ಹಗಲು-ರಾತ್ರಿ ಶ್ರಮಿಸುವುದು ನನ್ನ ಸಂಕಲ್ಪ. ನಿಮ್ಮ ಆಶೀರ್ವಾದ ಮತ್ತು ಸಹಕಾರ ಸದಾ ನನ್ನೊಂದಿಗೆ ಇರಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರುನಾಥ ರಾಜಗೀರ, ಸೂರ್ಯಕಾಂತ ಚಿಲ್ಲಾಬಟ್ಟೆ, ಬಕ್ಕಪ ಬಸರೆಡ್ಡಿ, ಸಂತೋಷ ಹಳ್ಳಿಖೇಡ, ರಾಜಕುಮಾರ ಪಾಂಚಾಳ, ಮೋಹನ ಕೆಳಕೇರಿ, ನಾಗಶೆಟ್ಟಿ ಚಟನಳ್ಳಿ, ಚಂದ್ರಕಾಂತ ಚಿಲ್ಲಾಬಟ್ಟೆ, ಜರೆಪ್ಪ ಹಂದಿಕೇರಿ, ಜಗನಾಥ ಪಂಡಿತ, ಬಸವರಾಜ ಚಟನಳ್ಳಿ, ವೀರಶೆಟ್ಟಿ ಬಸಲಾಪುರ, ಲಾಲಪ್ಪ ಪೆÇೀಲಕಪಳ್ಳಿ, ಸಂಗ್ರಾಮ ಬಿರಾದರ್. ತಾಜೋದಿನ್, ಶಣ್ಮುಕಪ್ಪ,ಅಶೋಕ ರೆಡ್ಡಿ, ಆಬೇದ ಅಲಿ,ಶೈಯದ್ ಅಬ್ದುಲ್,ರತನ ಸಾಗರ್, ಗಣಪತಿ ಬಂಬುಳಗಿ, ಪ್ರವೀಣ ತರಿ, ಬಸವರಾಜ ಸಜ್ಜನಶೆಟ್ಟಿ, ಕಾಶಿನಾಥ ಬಂಬುಳಗಿ, ಬಸವರಾಜ ನಿಂಗದಳ್ಳಿ, ನೀಲೇಶ, ಪ್ರಶಾಂತ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.




















