
ಜೇವರ್ಗಿ :ಡಿ.27: ಜೇವರ್ಗಿ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಸಾಹಿತಿ ಪೆÇಲೀಸ ಇಲಾಖೆಯ ಸಿಬ್ಬಂದಿಯವರಾದ ಈಶ್ವರ್, ಎ. ನಾಟಿಕರ್ ರವರ ಸ್ವ-ರಚಿತ ಕಾದಂಬರಿ ಇಂತಿ ನಿನ್ನ ಪ್ರೀತಿಯ ಮಾನಸ ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ಜರುಗಿತು.
ಈ ಕಾರ್ಯಕ್ರಮದಲ್ಲಿ ಜೇವರ್ಗಿ ಪೆÇಲೀಸ್ ಠಾಣೆಯ ಸಿಪಿಐ ರಾಜಸಾಹೇಬ್ ನದಾಫ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಪರಂಪರೆಗೆ ಬಹಳ ಹಿಂದಿನ ಕಾಲದ ಇತಿಹಾಸವಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಕನ್ನಡ ನಾಡು ನುಡಿಗೋಸ್ಕರ ಹಲವಾರು ಶರಣರು ಸಂತರು ಸೂಫಿಗಳು ಶಿವಶರಣೆಯರು ಲೇಖಕರು ಸಾಹಿತಿಗಳು ತಮ್ಮದೇ ಆದ ಸಾಹಿತ್ಯ ಲೋಕಕ್ಕೆ ಹಲವಾರು ಪುಸ್ತಕಗಳನ್ನ ವಚನಗಳನ್ನು ಹಾಡುಗಳನ್ನು ರಚಿಸುವ ಮೂಲಕ ಕೊಡುಗೆ ನೀಡಿದ್ದಾರೆ. ಇದಲ್ಲದೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ ಇವತ್ತು ಕನ್ನಡ ಭಾಷೆಯಲ್ಲಿ ನಮ್ಮ ಇಲಾಖೆಯ ಸಿಬ್ಬಂದಿ ಈಶ್ವರ್, ಎ. ನಾಟಿಕರ್ ರವರು ಕಿರಿಯ ವಯಸ್ಸಿನಲ್ಲಿಯೇ ಸಾಹಿತ್ಯಕಾರರಾಗಿ ಒಳ್ಳೆಯ ವಿಚಾರಗಳನ್ನು ಹೊಂದಿ ಪುಸ್ತಕಗಳನ್ನು ಬಿಡುಗಡೆಗೊಳಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇಂದು ಬಿಡುಗಡೆಗೊಳ್ಳುತ್ತಿರುವ ಇಂತಿ ನಿನ್ನ ಪ್ರೀತಿಯ ಮಾನಸ ಎಂಬ ಪುಸ್ತಕವೂ ಬಹಳ ಅರ್ಥ ಪೂರ್ಣವಾಗಿದೆ ಇದನ್ನು ಇಂದಿನ ಯುವಜನರು ಓದಬೇಕು ಎಂದು ಪೆÇಲೀಸ್ ಜಿಲ್ಲಾ ಹೆಚ್ಚುವರಿ ವರಿಷ್ಠ ಅಧಿಕಾರಿ ಮೇಘಾ ಣ್ಣ ನವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಹಾಲಕ್ಷ್ಮೀ ಮಹಿಳಾ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಧರ್ಮಣ್ಣ .ಕೆ. ಬಡಿಗೇರ್ ಮಾತನಾಡಿ ಅತ್ಯಂತ
ಕಿರಿಯ ವಯಸ್ಸಿನಲ್ಲಿ ಈಶ್ವರ್ ರವರು ತಮ್ಮ ವೃತ್ತಿ ಜೀವನದ ಪೆÇಲೀಸ್ ಇಲಾಖೆಯೊಂದಿಗೆ ಇದರ ಜೊತೆಗೆ ಸಾಹಿತ್ಯದಲ್ಲಿಯೂ ಕೂಡ ತುಂಬಾ ಆಸಕ್ತಿಯನ್ನು ಹೊಂದಿ ಒಳ್ಳೆಯ ಕಾದಂಬರಿ ಕವಿತೆ ಕವನಗಳನ್ನು ಬರೆಯುತ್ತಾ ಯುವ ಬರಹಗಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುತ್ತಿದ್ದಾರೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿಗಳಾದ ರಮೇಶ್ ಲಂಡನ್ ಎನ್ವರ್, ತಾಲೂಕ ದಂಡಾಧಿಕಾರಿಗಳಾದ ಮಲ್ಲಣ್ಣ ಯಲಗೋಡ, ಶ್ರೀಮತಿ ಕಲಾವತಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಹರನಾಳ, ದಲಿತ ಹಿರಿಯ ಮುಖಂಡರಾದ ಭೀಮರಾಯ ನಾಗನೂರ್, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಸ್ ಕೆ ಬಿರಾದರ್, ಕನ್ನಡ ಸಾಹಿತ್ಯ ಅಕಾಡೆಮಿಯ ಬೆಂಗಳೂರಿನ ಲಲಿತ ಕಲಾ ಅಕಾಡೆಮಿಯ ಬೆಂಗಳೂರಿನ ಸಾಹಿತಿಗಳಾದ ಅವರು. ಸಿದ್ದರಾಮ ಹೊನ್ನಕಲ್. ಡಾ.ಬಸವರಾಜ ಕಲೆಗಾರ್ ಯಾದಗಿರಿ ಜಿಲ್ಲಾ ಸಾಹಿತಿಗಳಾದ ಡಾ. ಗಾಳೆಪ್ಪ ಪೂಜಾರಿ, ಕಲಬುರ್ಗಿ ಗ್ರಾಮೀಣ ಉಪ ವಿಭಾಗ ಲೋಕೇಶ್ವರಪ್ಪ ಎನ್. ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಸುರೇಶ ತಡಿಬಿಡಿ, ಸರ್ಕಾರಿ ಮಹಿಳಾ ಪದವಿಪೂರ್ವ ಇತಿಹಾಸ ಉಪನ್ಯಾಸಕರ ಡಾ. ಗೋವಿಂದರಾಜ ಆಲ್ದಾಳ, ವರದಿಗಾರ ಮರೆಪ್ಪ ಬೇಗಾರ್ ಲಾಲಪ್ಪ ಎಮ ಯಶ್ವ ವಂತ ಮಂದೇವಾಲ ರವಿಚಂದ್ರ ಗುತ್ತೇದಾರ್, ಶ್ರೀ ಹರಿ ಕರಿಕಿಹಳ್ಳಿ, ರವಿ ಕುಳಗೇರಿ ಪ್ರಕಾಶ ಮಾರಡಗಿ ಜೇವರ್ಗಿ ಪೆÇಲೀಸ್ ಠಾಣೆಯ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು
ಈ ಕಾರ್ಯಕ್ರಮದ ನಿರೂಪಣೆಯನ್ನು ಯುವ ಲೇಖಕರಾದ ಸಿದ್ದಣ್ಣ ಪೂಜಾರಿ, ಜೇವರ್ಗಿ ಪೆÇಲೀಸ್ ಠಾಣೆಯ ಪೈಗಂಬರ್ ಸ್ವಾಗತಿಸಿದರು. ಬಸವರಾಜ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆ ವಂದಿಸಿದರು.

























