ಎಂಇಎ ಸ್ಪಷ್ಪನೆ
ನವದೆಹಲಿ,ಅ.೧೧- ಭಾರತ ಭೇಟಿಯಲ್ಲಿರುವ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿ ವೇಳೆ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟ ವಿಷಯದಲ್ಲಿ ತಮ್ಮ ಪಾತ್ರ ಏನೂ ಇಲ್ಲ, ಇದರ ಬಗ್ಗೆ ತಮಗೆ ತಿಳಿದಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟೀಕರಣ ನೀಡಿದೆ.
ಅಮೀರ್ ಖಾನ್ ಮುತ್ತಕಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡುವೆ ಅಫ್ಘಾನ್ ರಾಯಭಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಮಹಿಳಾ ಪತ್ರಕರ್ತರನ್ನು ಆಹ್ವಾನಿಸಲಾಗಿಲ್ಲ ಎನ್ನುವ ಟೀಕೆಯ ಹಿನ್ನೆಲೆಯಲ್ಲಿ ಭಾರತ ಸ್ಪಷ್ಠೀಕರಣ ನೀಡಿದೆ
೨೦೨೧ ರಲ್ಲಿ ತಾಲಿಬಾನ್ ಗುಂಪು ಅಫ್ಘಾನಿಸ್ತಾನ ಸರ್ಕಾರವನ್ನು ವಶಪಡಿಸಿಕೊಂಡ ನಂತರ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಮೊದಲ ಭೇಟಿ ನೀಡಿದ್ದಾರೆ, ತಾಲಿಬಾನ್ ಸರ್ಕಾಋದ ಸಚಿವರೊಬ್ಬರ ಮೊದಲ ಭೇಟಿಯಾಗಿದೆ. ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಜೊತೆ ನಡೆದ ಪತ್ರಿಕಾಗೋಷ್ಠಿಗೆ ಭಾರತೀಯ ಮಹಿಳಾ ಪತ್ರಕರ್ತರನ್ನು ಆಹ್ವಾನಿಸದ ಕ್ರಮಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು
ಭಾರತ ಮತ್ತು ತಾಲಿಬಾನ್ ವಿದೇಶಾಂಗ ಸಚಿವರ ನಡುವೆ ನಡೆದ ಮಾತುಕತೆ ವೇಳೆ ವ್ಯಾಪಾರ, ಮಾನವೀಯ ನೆರವು ಮತ್ತು ಭದ್ರತಾ ಸಹಕಾರ ಸೇರಿದಂತೆ ಪ್ರಮುಖ ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ,
ಪತ್ರಿಕಾಗೋಷ್ಠಿಯಲ್ಲಿ ಪುರುಷ ಪುರುಷ ವರದಿಗಾರರು ಹಾಜರಿದ್ದರು, ಇದು ತಾಲಿಬಾನ್ ಸರ್ಕಾರದ ಲಿಂಗ ತಾರತಮ್ಯ ಮತ್ತು ಪಕ್ಷಪಾತ ಉತ್ತೇಜಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಸ್ಪಷ್ಠೀಕರಣ ನೀಡಿದೆ
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರನ್ನು ಸೇರಿಸಿಕೊಳ್ಳಲು ಭಾರತದ ಸ್ಪಷ್ಟ ಸಲಹೆಗಳ ಹೊರತಾಗಿಯೂ, ತಾಲಿಬಾನ್ ನಿಯೋಗ ಮಹಿಳಾ ಪತ್ರಕರ್ತರನ್ನು ಪತ್ರಿಕಾಗೋಷ್ಠಿಗೆ ಆಹ್ವಾನಿಸಲು ನಿರಾಕರಿಸಿತ್ತು ಎಂದು ಮೂಲಗಳು ಹೇಳಿವೆ
ಅಫ್ಘಾನ್ ಮಹಿಳೆಯರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವರದಿಗಾರರು ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ “ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಪದ್ಧತಿಗಳು, ಕಾನೂನುಗಳು ಮತ್ತು ತತ್ವಗಳಿವೆ” ಅದನ್ನು ತಾಲಿಬಾನ್ ಸರ್ಕಾರ ಪಾಲಿಸುತ್ತಿದೆ ಎಂದಿದ್ದಾರೆ


























