
ಬೀದರ:ಮೇ.18:ಪಹೆಲಗಾಮ್ ದಾಳಿಯ ಪ್ರತಿಕಾರವಾಗಿ ನಮ್ಮ ಸೈನಿಕರು ಪಾಕಿಸ್ಥಾನಕ್ಕೆ ಮುಟ್ಟಿನೋಡಿಕೊಳ್ಳುವಂತೆ ತಿರುಗೆಟು ನೀಡಿದೆ, ನಮ್ಮ ಸೈನಿಕರ ಶೌರ್ಯ, ಬುದ್ದಿವಂತಿಕೆಗೆ ಇಡಿ ವಿಶ್ವವೆ ಅಭಿನಂದಿಸುತ್ತಿದೆ ಆದರೆ ರಾಜ್ಯದ ಕಾಂಗ್ರೇಸ್ ಪಕ್ಷದ ಸಚಿವರು, ಶಾಸಕರು, ಆಪರೇಷನ್ ಸಿಂಧೂರ ಕುರಿತಾಗಿ ಮನಸ್ಸಿಗೆ ಬಂದಂತೆ ಹೇಳಿಕೆ ನೀಡಿ, ಅಪಪ್ರಚಾರ ಮಾಡುವುದು, ದೇಶದ ಸೈನಿಕರಿಗೆ ಅವಮಾನಿಸುತ್ತಿರುವುದು ಸರಿಯಲ್ಲಾ, ಇದು ಕಾಂಗ್ರೇಸ್ ಪಕ್ಷದ ಆತಂಕವಾದಿಗಳ ಪರವಾದ ಮನಸ್ಥಿತಿ ತೋರಿಸುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋಷ ವ್ಯಕ್ತಪಡಿಸಿದ್ದಾರೆ.
2014ಕ್ಕಿಂತ ಮುಂಚೆ ಅಧಿಕಾರದಲ್ಲಿದ್ದ ಕಾಂಗ್ರೇಸ್ ಪಕ್ಷಕ್ಕೆ ಪಾಕಿಸ್ಥಾನದ ಮೇಲೆ , ಆತಂಕವಾದಿಗಳ ಮೇಲೆ ಪ್ರತಿಕಾರ ತಿರಿಸಿಕೊಳ್ಳಲು ಆಗ್ತಿರಲಿಲ್ಲಾ, ನಮ್ಮ ಸೈನ್ಯದ ಕೈ ಕಟ್ಟಿ ಹಾಕಿದ್ದರು, ಇವರ ಅಧಿಕಾರದಲ್ಲಿ ಸಾವಿರಾರು ಸೈನಿಕರ, ಅಮಾಯಕರ ಜೀವಗಳು ಹೊಗಿವೆ, ಆದರೆ ಇವಾಗ ಪಾಕಿಸ್ಥಾನದ ಒಂದು ಗುಂಡಿಗೆ ನಮ್ಮಿಂದ ಹತ್ತು ಗುಂಡುಗಳು ಹಾರುತ್ತವೆ, ಇದು ಬದಲಾದ ಭಾರತವಾಗಿದೆ, ಇಡಿ ವಿಶ್ವಕ್ಕೆ ಭಾರತದ ಶಕ್ತಿಯ ಅರಿವಾಗಿದೆ ಆದರೆ ನಮ್ಮಲ್ಲಿಯ ಕಾಂಗ್ರೇಸ್ ಪಕ್ಷದವರಿಗೆ ಅರ್ಥವಾಗದಿರುವುದು ಬೇಸರದ ಸಂಗತಿಯಾಗಿದೆ ಎಂದಿದ್ದಾರೆ.
ಕಾಂಗ್ರೇಸ್ ಪಕ್ಷಕ್ಕೆ ಯಾವಾಗಲೂ ಪಾಕಿಸ್ಥಾನಿಯರ ಮೇಲೆ ಹೆಚ್ಚು ಪ್ರೀತಿ ಆದ್ದರಿಂದ ನಮ್ಮ ಸೈನ್ಯದ ಮೇಲೆ, ನಮ್ಮ ಸೈನಿಕರ ಶೌರ್ಯದ ಬಗ್ಗೆ ಅನುಮಾನ ಪಟ್ಟು, ಅವಮಾನಿಸುವ ಕೆಲಸ ಮಾಡುತ್ತಾರೆ, ಇಡಿ ಜಗತ್ತೆ ಆಪರೇಷನ್ ಸಿಂಧೂರ ಬಗ್ಗೆ ಕೊಂಡಾಡುತ್ತಿದೆ, ಆದರೆ ಇಲ್ಲಿಯ ಕಾಂಗ್ರೇಸ್‍ನವರಿಗೆ ಅದು ಏನು ಅಲ್ಲಾ ಎಂಬಂತೆ ಮಾತನಾಡುತ್ತಿದ್ದಾರೆ, ಪ್ರಧಾನಿಗಳಿಗೆ ಪ್ರಶ್ನಿಸುವ ಕೆಲಸ ಮಾಡುತ್ತಿದ್ದಾರೆ, ಕಾಂಗ್ರೇಸ್‍ನವರು ನಮ್ಮ ಪ್ರಧಾನಿಗೆ ಪ್ರಶ್ನಿಸುವ ಮುನ್ನ, ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಆತಂಕವಾದಿಗಳ ವಿರುದ್ದ ಕಾಂಗ್ರೇಸ್‍ನವರ ನಿಲುವು ಹೇಗಿತ್ತು, ಮಾಡಿದ ಸಾಧನೆ ಏನು ಎನ್ನುವುದು ಪ್ರಶ್ನಿಸಿಕೊಳ್ಳಲಿ ಎಂದಿದ್ದಾರೆ.
ಮಹಾತ್ಮಾ ಗಾಂದಿಜೀüಯವರು ಅಹಿಂಸೆ ಮಾರ್ಗ ಭೋದಿಸಿದ್ದಾರೆ ಹೊರತು ಆತಂಕವಾದಿ ಮತ್ತು ಸಮಾಜಘಾತುಕ ಶಕ್ತಿಗಳ ಕೃತ್ಯಕ್ಕೆ ವಿರೋಧಿಸಬೇಡಿ ಎಂದು ಹೆಳಿಲ್ಲ್ಲಾ, ಆದರೆ ನಮ್ಮ ಮೋದಿ ಸರ್ಕಾರ ಮತ್ತು ನಮ್ಮ ಸೈನ್ಯ ಆಪರೇಷನ್ ಸಿಂಧೂರ ಕೈಗೊಂಡಾಗ, ಕಾಂಗ್ರೇಸ್‍ನವರು ಮುಸ್ಲಿಂರ ಓಲೈಕೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರ ಫೋಟೊ, ಅವರ ಸಂದೇಶಗಳು ಹಾಕಿ, ದೇಶದ ಜನರಲ್ಲಿ ಗಾಂಧಿಜೀಯವರ ಬಗ್ಗೆ ತಪ್ಪು ಭಾವನೆ ಮೂಡುವಂತೆ ಮಾಡಿದ್ದರು. ಕಾಂಗ್ರೇಸ್‍ನವರಿಗೆ ಒಟ್ಟಿನಲ್ಲಿ ದೇಶ ಹಾಳಾದರೂ ಪರವಾಗಿಲ್ಲಾ, ತನ್ನ ರಾಜಕೀಯ ಬೆಳೆ ಮಾತ್ರ ಬೇಯಿಬೇಕು ಎನ್ನುವುದು ಇವರ ಮನಸ್ಥಿತಿಯಾಗಿದೆ ಎಂದಿದ್ದಾರೆ.
ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಪಕ್ಷದ ಸಚಿವರುಗಳನ್ನು, ಶಾಸಕರುಗಳನ್ನು ನಿಯಂತ್ರಿಸಬೇಕು, ದೇಶದ ವಿಷಯ ಬಂದಾಗ ಪಾಕಿಸ್ಥಾನದ ಮೇಲಿನ ಪ್ರೀತಿ ಕಡಿಮೆ ಮಾಡಿಕೊಳ್ಳುವಂತೆ ಸೂಚಿಸಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದಾರೆ.