ಜಮಖಂಡಿ: ಅ.೨೦:ಕನ್ನಡ ಶಬ್ದ ಬಳಸುವದರಿಂದ ಕನ್ನಡ ಶಬ್ದ ಸ್ಪಷ್ಟವಾದ ಸಂಭAಧ ಉಳಿಯುತ್ತದೆ ಅದಕ್ಕಾಗಿ ಶಬ್ದ ಉಳಿಕೆಗಾಗಿ ಅಭಿಯಾನವನ್ನೇ ಮಾಡುತ್ತಿದ್ದೇವೆ. ಸಭೆ ಸಮಾರಂಭದಲ್ಲಿ ಕನ್ನಡ ಶಬ್ದದ ಉಳಿಕೆಗೆ ಅಭಿಯಾನವನ್ನೇ ಮಾಡಬೇಕಿದೆ. ಅನೇಕ ಆಂಗ್ಲ ಶಬ್ದಗಳು ಜೀವನ ಹಾಸು ಹೊಕ್ಕಾಗಿವೆ ಅದನ್ನು ಅಳಿಸಿ ನೈಜ ಕನ್ನಡವನ್ನು ಎತ್ತಿ ಹಿಡಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ನಗರದ ರಮಾನಿವಾಸ ಪ್ರವಾಸಿ ಮಂದಿರದಲ್ಲಿ ಕಸಾಪ ತಾಲೂಕಾ ಘಟಕ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾವಿಂದು ಶಾಲೆಗಳ ಉಳಿವಿನ ಭ್ರಮೆಯಿಂದ ಹೊರಬರಬೇಕಿದೆ. ಇಂದು ಕನ್ನಡ ಉಳಿಯಬೇಕಿದೆ ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳು ಮುಚ್ಚಬಾರದು. ದ್ವಿಭಾಷಾ ಸೂತ್ರದಿಂದ ಕನ್ನಡ ಉಳಿಸುವ ಕೆಲಸ ಪರಿಷತ್ ಮಾಡುತ್ತದೆ ಎಂದರು.
ಭಾವನಾತ್ಮಕವಾಗಿ ಕರ್ನಾಟಕ ಒಂದಾಗಬೇಕೆನ್ನುವ ಬೀಜ ಬಿತ್ತಿದ್ದು ಈ ಪರಿಷತ್ ಬೆಳೆಯಲು ಹೋಬಳಿ ಗ್ರಾಮ ಮಟ್ಟದಲ್ಲಿ ಘಟಕ ಪ್ರಾರಂಭಿಸಬೇಕಾಗಿದೆ. ಅದಕ್ಕಾಗಿ ಪರಿಷತ್ತು ವಾರ್ಷಿಕ ಸಭೆಯನ್ನು ಕೇಂದ್ರಸ್ಥಾನದಲ್ಲಿ ಮಾಡದೇ ಜಿಲ್ಲೆ ತಾಲೂಕು ವಲಯದಲ್ಲಿ ಮಾಡಲು ಪ್ರಾರಂಭಿಸಿದ್ದೇವೆ. ಈ ವಾರ್ಷಿಕ ಸಭೆಯನ್ನು ಅವಳಿ ಜಿಲ್ಲೆಯಲ್ಲಿ ಮಾಡುವ ಉದ್ದೇಶದಿಂದ ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸತ್ಯಕಾಮರ ಸುಮ್ಮನೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು.ಬಳ್ಳಾರಿ ಜೆಲ್ಲೆಯ ಸಂಡೂರಿನಲ್ಲಿ ನಡೆಯಬೇಕಿದ್ದ ಸಭೆಯನ್ನು ವಸುಂಧರಾ ಭೂಪತಿಯವರು ದೂರ ನೀಡಿದ ಹಿನ್ನೆಲೆಯಲ್ಲಿ ವ್ಯತ್ಯಯವಾಗಿದೆ. ದುರುದ್ದೇಶದಿಂದ ಸುಳ್ಳು ಹೇಳುವ ತಪ್ಪುದಾರಿ ಹಿಡಿಸಿದ್ದಾರೆ.ಜಾಣಗೆರೆ ವೆಂಕಟರಮಣ, ಸೇರಿ ನಾಲ್ಕಾರು ಜನರು ಇದನ್ನು ತಪ್ಪು ದಾರಿ ಹಿಡಿಸಿದ್ದಾರೆ. ವಾರ್ಷಿಕ ಸಭೆ ಮಾಡಲು ಯಾವುದೇ ಸೌಕರ್ಯದ ಕಡ್ಡಾಯವಿಲ್ಲ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು.ಯಾವುದೋ ವ್ಯಕ್ತಿಗಳ ಪ್ರಭಾವದಿಂದ ರದ್ದಾಗಿದೆ ಈ ವಿಷಯ ನ್ಯಾಯಾಲಯದ ಕಟ್ಟೆ ಏರಿದೆ ಕಾನೂನಾತ್ಮಕ ಹೋರಾಟಕ್ಕೆ ಕೇಂದ್ರ ಸಮೀತಿ ಸರ್ವಾನುಮತ ನಿರ್ಣಯವಾಗಿದೆ. ಅದಕ್ಕಾಗಿ ಕಸಾಪದ ಘನತೆ ಗೌರವಕ್ಕೆ ಧಕ್ಕೆ ತರುವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೆರಿ ೧ ಕೋಟಿ ಹಣವನ್ನು ನ್ಯಾಯಾಲಯದಿಂದ ಪರಿಹಾರ ಕೇಳಿದ್ದೇವೆ. ಅಧಿಕಾರವಿಲ್ಲದೇ ಯಾವುದೇ ಕೆಲಸ ಮಾಡಬಾರದು ಎಂದು ಸರ್ವರುಗೂ ತಿಳಿದು ಅಗತ್ಯ ಕಂಡು ಬಂದಾಗ ಈ ನಿರ್ಣಯ ಮಾಡಿದ್ದೇವೆ ಎಂದರು.
ಮAಡ್ಯದಲ್ಲಾದ ಸಮ್ಮೇಳನದ ಲೆಕ್ಕವನ್ನು ಸರಿಯಾದ ಕ್ರಮದಲ್ಲಿ ಸರಿಯಾದ ಪಧ್ದತಿಯಲ್ಲಿ ಕೇಳಬೇಕಾಗುತ್ತದೆ, ಲೆಕ್ಕ ಪತ್ರವನ್ನು ಕೇಳುವ ಹಕ್ಕು ಎಲ್ಲರಿಗೂ ಇದೆ.ಆದರೆ ಕೇಳುವ ವಿಧಾನ ಸರಿಯಾಗಿರಬೇಕು. ಪರಿಷತ್ ಯಾವುದೇ ಹಣವನ್ನು ನೇರವಾಗಿ ಮಾಡುವದಿಲ್ಲ ಸರ್ಕಾರದ ಅನುದಾನದ ಸಹಾಯ ದಿಂದ ಕಾರ್ಯಕ್ರಮ ಮಾಡುತ್ತೆವೆ ಅನುದಾನ ಆಯಾ ಪ್ರದೇಶದ ಜಿಲ್ಲಾ ಆಡಳಿತಕ್ಕೆ ಜಮಾ ಆಗುತ್ತದೆ. ಆಹ್ವಾನ ಪತ್ರಿಕೆಗಳ ಪ್ರಕಟನೆ, ಪುಸ್ತಕ ಪ್ರಕಟಣೆ ಮುಂತಾದವುಗಳು ಸರಕಾರಿ ಎಜೆನ್ಸಿಗಳ ಮೂಲಕ ಹಣ ಖರ್ಚು ಮಾಡಲಾಗುವದು. ಸಂಸ್ಥೆಯಲ್ಲಿ ವಿರೋಧವಿರಲಿ ವೈರತ್ವ ಬೇಡಾ. ಇದೊಂದು ವೈರತ್ವದ ಕಾರ್ಯವಾಗಿದೆ ಎಂದು ನೇರವಾಗಿ ಆರೋಪಿಸಿದರು.
ಇಂದು ೪ ಲಕ್ಷ ಜನ ಅಜೀವ ಸದಸ್ಯರಿದ್ದಾರೆ ನಾನು ಅಧಿಕಾರಕಗಕೆ ಬಂದಾ ೨ ಲಕ್ಷ ಸದಸ್ಯರಿದ್ದರು. ಅದಕ್ಕಾಗಿ ಸದಸ್ಯತ್ವ ಅಭಿಯಾನ ಮಾಡಬೇಕಿದೆ. ಇನ್ನೂ ೧.೫ ವರ್ಷ ಅವಧಿಯಿದೆ ಅಷ್ಟರಲ್ಲಿ ರಾಜ್ಯದ ಎಲ್ಲ ಭಾಗಕ್ಕೆ ಭೇಟಿ ನೀಡುವದಾಗಿ ತಿಳಿಸಿದರು.
ರಾಜ್ಯ ಗೌರವ ಕಾರ್ಯದರ್ಶಿ ಪಟೇಲ ಪಾಂಡು. ಕೇಂದ್ರ ಪರಿಷತ್ ಸದಸ್ಯ ಗುರುನಾಥ ತಳವಾರ. ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ವಿಜಯಪುರ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ, ರುದ್ರಗೌಡ ಪಾಟೀಲ, ಪ್ರೋ ಎಸ್.ಬಿ.ಮಟೋಳಿ, ತಾಲೂಕಾ ಅಧ್ಯಕ್ಷ ಸಂತೋಷ ತಳಕೇರಿ ಅಬೂಬಕರ ಕುಡಚಿ ಇದ್ದರು.

























