
ಬೆಂಗಳೂರು,ಫೆ.೨- ಗೃಹಲಕ್ಷ್ಮಿ ಯೋಜನೆಗೆ ಈಗಲೂ ಫಲಾನುಭವಿಗಳು ಹೆಸರು ನೊಂದಾಯಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೇಲ್ಮನೆಯಲ್ಲಿ ಇಂದು ತಿಳಿಸಿದರು.
ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡುವ ವೇಳೆ ಮಧ್ಯಪ್ರವೇಶಿಸಿದ ಸಚಿವರು ಆದಾಯ ತೆರಿಗೆ ಪಾವತಿ ಹಾಗೂ ಜಿಎಸ್ ಟಿ ಪಾವತಿ ಹೊರತುಪಡಿಸುವ ಮಹಿಳೆಯರು ಹೊರತುಪಡಿಸಿ ಇತರೆ ಮಹಿಳೆಯರು ಈಗಲೂ ತಮ್ಮ ಹೆಸರನ್ನು ಗೃಹಲಕ್ಷ್ಮಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ರಾಜ್ಯದಲ್ಲಿ ೧ಕೋಟಿ ೫೨ ಲಕ್ಷ ಮಹಿಳೆಯರು
ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದ ಅವರು ಆದಾಯ ತೆರಿಗೆ ಪಾವತಿ ಹಾಗೂ ಜಿಎಸ್ ಟಿ ಪಾವತಿಯ ವಿವರಗಳನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.



























