
ಕೋಲಾರ,ಮೇ,೨೬- ಎಂ.ಚಿದಾನಂದಮೂರ್ತಿ ಅವರು ಕನ್ನಡ ಬರಹಗಾರರು ಸಂಶೋಧಕರ ಮತ್ತು ಇತಿಹಾಸ ತಜ್ಞರಾಗಿ ಶಾಸನಗಳನ್ನು ಅಧ್ಯಾಯನ ಮಾಡಿ ಜನಮುಖಿಯಾಗಿ ಬದುಕಿನ ನೆಲೆಗಳ ಕುರಿತು ಅನೇಕ ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದರು. ಚಿದಾನಂದ ಮೂರ್ತಿ ಅರಿಯದ ಸಾಹಿತ್ಯವಿಲ್ಲ. ಕನ್ನಡ ಪರ ಹೋರಾಟಗಳಿಗೆ ಶಕ್ತಿ ತುಂಬಿ ರಾಜ್ಯಾದಾದ್ಯಂತ ಸಂಘಟನೆ ಮಾಡಿ ಕರ್ನಾಟಕ ಹಂಪಿಯ ಸ್ಮಾರಕಗಳನ್ನು ಉಳಿಸಿ ಗೋಕಾಕ್ ಹಾಗೂ ಶಾಸ್ತ್ರಿಯ ಸ್ಥಾನಗಳಿಸಲು ಮಾಡಿದ ಹೋರಾಟಗಳು ಅವಿಸ್ಮರಣೀಯ ಎಂದು ಕನ್ನಡ ಪರ ಚಿಂತಕ ಕೆ.ರಾಜಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಓದುಗ ಕೇಳುಗ -ನಮ್ಮ ನಡೆ ಬಳಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಿರಿಗನ್ನಡ ಪುಸ್ತಕ ಮಳಿಗೆಯ ಸಂಯುಕ್ತಾಶ್ರಯದಲ್ಲಿ ೪೯ನೇ ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಚಿದಾನಂದಮೂರ್ತಿ ಅವರ ಕನ್ನಡ ಸಂಸ್ಕೃತಿಯ ಹಿರಿಮೆ-ಗೆರಿಮೆ ವಿಷಯವಾಗಿ ಉಪನ್ಯಾಸ ನುಡಿಗಳಾಡಿ ಚಿಮೂ ಅವರು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದ ಸ್ವಾಭಿಮಾನಿಯಾಗಿದ್ದರು.
ಅವರನ್ನು ಯಾವೂದೇ ರೀತಿ ಲಾಭ,ನಷ್ಟಗಳ ಮೂಲಕ ಅಳೆಯಲು ಸಾಧ್ಯವಿಲ್ಲ ಇರುವುದನ್ನು ಇದ್ದಂತೆ ಮಂಡಿಸುವಂತ ನಿಷ್ಟೊರವಾದಿಗಳಾಗಿದ್ದರು ಅವರಿ ಸರ್ಕಾರವು ವಿ.ವಿ. ಕುಲಪತಿ, ವಿಧಾನ ಪರಿಷತ್ ಸದಸ್ಯರಾಗಿ ಸೇರಿದಂತೆ ಅನೇಕ ಸ್ಥಾನ ಮಾನಗಳ ಅವಕಾಶಗಳು ಹುಡುಕಿ ಕೊಂಡು ಬಂದರೂ ನಿರಾಕರಿಸಿದ್ದರು,.ಅರು ತಮ್ಮ ವಿದ್ವತ್ತಿಗೆ ದೊರೆತ ಪ್ರಶಸ್ತಿಗಳನ್ನು ಮಾತ್ರ ಸ್ವೀಕರಿಸಿದಂತ ಪ್ರಮಾಣಿಕರಾಗಿದ್ದರು ಎಂದರು.
ಮೂರ್ತಿ ದೈಹಿಕವಾಗಿ ಚಿಕ್ಕವರಾಗಿದ್ದರೂ ಅವರ ಕೀರ್ತಿ ಬೃಹದಕಾರವಾಗಿ ರಾಜ್ಯದಾದ್ಯಂತ ಪಸರಿಸಿತ್ತು.. ಅವರು ರಚಿಸಿದಂತ ಕೃತಿಗಳಾದ ಸಂಶೋಧನೆ, ಪೂರ್ಣ ಸೂರ್ಯ ಗ್ರಹಣ, ಶೂನ್ಯ ಸಂಪಾದನೆ, ಕವಿರಾಜಮಾರ್ಗ, ಪಾಂಡಿತ್ಯ ರಸ, ಕನ್ನಡ ಶಾಸನಗಳ ಸಾಂಸ್ಕೃತಿಕ ನೆಲೆಗಳನ್ನು ಒಳಗೊಂಡಿತ್ತು. ಕನ್ನಡ ಸಂಸ್ಕೃತಿ ಕೃತಿಯು ಕರ್ನಾಟಕ ಸಂಸ್ಕೃತಿಯಾಗಿ ಪರಿವರ್ತಿಸಿ ಪಠ್ಯಗಳಲ್ಲಿ ಹಾಗೂ ಕನ್ನಡದ ಜಾಣ ಪರೀಕ್ಷೆಗಳಲ್ಲಿ ಅಳವಡಿಸುವ ಮೂಲಕ ಪ್ರಚಲಿತವಾದವು. ಎಂದು ಹೇಳಿದರು.
ಕನ್ನಡ ಸಂಸೃತಿಯ ಜತೆಗೆ ಅನೇಕ ಉಪಸಂಸ್ಕೃತಿಗಳು ವೈವಿದ್ಯಮಾನವಾಗಿ ಕಾಪಾಡಿ ಕೊಂಡು ಅಹಿಂದ ವರ್ಗಗಳನ್ನು ಒಳಗೊಂಡಂತೆ ಸಂಸ್ಕೃತಿಯನ್ನು ದಾಖಲಿಸಲಾಗಿದೆ. ಸಂಸ್ಕೃತಿ,ಆಚಾರ,ವಿಚಾರ ಸಾಹಿತ್ಯ, ಜನಪದ, ಸಂಗೀತಾ, ವಾಸ್ತು ಸೇರಿದಂತೆ ಸಮಗ್ರ ಜೀವನವೇ ಸಂಸ್ಕೃತಿಯಲ್ಲಿ ಅಳವಡಿಸುವ ಮೂಲಕ ಅರ್ಥ ಪೂರ್ಣವಾದ ಕೃತಿಯಾಗಿದೆ. ಕನ್ನಡ ಸಂಸ್ಕೃತಿಯನ್ನು ಕನ್ನಡಿಯಲ್ಲಿ ಹಿಡಿದಿಡುವ ಪ್ರಯತ್ನವಾಗಿದೆ. ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆಯಾಗಿದ್ದು. ಇದನ್ನು ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ ಈಗಾಗಲೇ ೩೨ನೇ ಪ್ರಕಾಶನ ಮುದ್ರಣ ಹೊರಹೊಮ್ಮಿರುವ ಪ್ರಚಾಲಿತ ಕೃತಿಯಾಗಿ ಕರ್ನಾಟಕಕ್ಕೆ ದಾಖಲಾರ್ಹ ಕೀರ್ತಿ ತಂದಿದೆ ಎಂದರು.
ಚಿಮು ಅವರ ಕಾವ್ಯನಾಮವಾಗಿತ್ತು. ಅವರು ತಮ್ಮ ಕೃತಿಗಳಲ್ಲಿ ಕನ್ನಡದ ಅರಿವಿನ ಪರಿಕೆಯನ್ನು ವಿಸ್ತರಿಸುವ ಕೆಲಸ ಮಾಡಿದ್ದಾರೆ. ಕನ್ನqದ ಜನತೆಯನ್ನು ಪ್ರೇರೇಪಿಸುವಂಥ ಕನ್ನಡ ಸಂಸ್ಕೃತಿ ಪುಸ್ತಕವಾಗಿತ್ತು. ತಮ್ಮ ವೆಚ್ಚದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡದ ಅಭಿರುಜಿಯನ್ನು ಜನತೆಯಲ್ಲಿ ಹೆಚ್ಚಿಸಿ ಕನ್ನಡದ ಕಡೆ ಗಮನ ಸೆಳೆಯುತ್ತಿದ್ದರು. ನಮ್ಮ ದೇಹದ ಧಮನಿಗಳಲ್ಲಿ ಕನ್ನಡದ ಅಭಿಮಾನವನ್ನು ನಿರ್ದಿಷ್ಟವಾಗಿ ಹರಿಸುತ್ತಿದ್ದರು, ಮಾನವನಾಗುವ ಜತೆಗೆ ಕನ್ನಡಿಗನಾಗು ಎಂಬ ಸಂದೇಶಗಳನ್ನು ಸಾರುವ ಮೂಲಕ ಕನ್ನಡದ ಸಾಹಿತ್ಯದ ಬದುಕಿಗೆ ಲವಲವಿಕೆಗಳನ್ನು ತುಂಬಿ ಹರಿಯುವಂತೆ ಮಾಡುತ್ತಿದ್ದು ಬದುಕು ದೊಡ್ಡದು ಎಂಬುವುದನ್ನು ಕೃತಿಯ ಮೊಲಕ ಅರಿವು ಮೂಡಿಸುತ್ತಿದ್ದರು ಎಂದು ತಿಳಿಸಿದರು,
ಈ ನೆಲದ ವೈಶಿಷ್ಠತೆ ಸಾಧಕರ ಬಗ್ಗೆ ಗೌರವ ತಂದು ಕೊಡುತ್ತಾ ಬದುಕಿನ ಪರಧಿಯೊಳಗೆ ಬರುವಂತ ಅಂಶಗಳನ್ನು ಸಾಹಿತ್ಯದಲ್ಲಿ ಅಡಕ ಮಾಡುತ್ತಿದ್ದರು. ಭಾಷೆಗೂ ಸಂಸ್ಕೃತಿಗೂ ಅವಿನಾಭಾಜ್ಯವಾದ ಸಂಬಂಧವಿದ್ದು ಸಾಹಿತ್ಯ ಸಂಸ್ಕೃತಿಗಳಲ್ಲಿ ಆಯಾಯಾ ನೆಲದ ನುಡಿಕಟ್ಟುಗಳಲ್ಲಿ ನೆಲೆಸಿವೆ. ಹಲವಾರ ದೇಶಗಳನ್ನು ಸುತ್ತಿ ಸಂಶೋದನೆಯನ್ನು ವಿಶ್ವ ಮಟ್ಟದ ಐತಿಹಾಸಿಕ ಭಾಷಾ ವಿಜ್ಞಾನದ ಸಮ್ಮೇಳನದಲ್ಲಿ ಪ್ರಬಂಧವನ್ನು ಮಂಡಿಸಿದ್ದಾರೆ. ಕನ್ನಡದ ಶಕ್ತಿ ಕೇಂದ್ರವನ್ನು ಸ್ಥಾಪಿಸಿ ಕೆಲಸ ನಿರ್ವಹಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶನ ಮಾಡಿಸಿದ್ದಾರೆ ಎಂದು ಹೇಳಿದರು,
ಮಾತೆಂಬುವುದು ಜ್ಯೋತಿರ್ಲಿಂಗ ಸ್ವರವೆಂಬುವುದು ಪರತತ್ವ ತಾಳೋಷ್ಟ ಸಂಪುಟೆಂಬುವುದು ಎಂಬ ಅಲ್ಲಮ ಪ್ರಭುವಿನ ವಚನವನ್ನು ವಾಚಿಸಿದ ಅವರು ಕರ್ನಾಟಕದಲ್ಲಿ ಸುಮಾರು ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ರಾಜರ ಆಳ್ವಿಕೆ ನಡೆಸಿದರು ಅದರಲ್ಲಿ ೬೪ ವರ್ಷಗಳ ಸುದೀರ್ಘ ಕಾಲ ಆಳ್ವಿಕೆ ನಡೆಸಿದ ನೃಪತುಂಗ ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡನ್ನು ಭೌಗೋಳಿಕವಾಗಿ ವಿಸ್ತರಿಸಿದ್ದ ಗುರುತುಗಳು ಮುಂದೆ ಅದನ್ನು ನರ್ಮದಾವರೆಗೆ ಹರ್ಷವರ್ಧನ ಪಸರಿಸಿದನ್ನು , ನೃಪತುಂಗ ಬರಗಾಲ ವ್ಯಾಪಿಸಿದಾಗ ಕೊಲ್ಲಪುರ ದೇವಿಗೆ ಕೈ ಬೆರಳು ಸಮರ್ಪಿಸುವ ಮೂಲಕ ಪ್ರಜೆಗಳ ವಾತ್ಸಲ್ಯವನ್ನು ಹೊಂದಿದ್ದ ಇತಿಹಾಸವನ್ನು ನೆನಪಿಸಿದ ಅವರು ಚಿಮು ಅವರ ಕೃತಿಗಳಲ್ಲಿ ನವರಸಗಳ ಪಾಂಡಿತ್ಯವನ್ನು ಹೊಂದಿದ್ದವು ಎಂದರು.
ಕನ್ನಡ ನಾಡಿನ ಸಂಪನ್ನಮೂಲಗಳ ಗುಣಮಟ್ಟದ ಅರಿವು ಇರಲಿಲ್ಲ ನಮ್ಮನ್ನು ಆಳಿದಂತ ರಾಜರಲ್ಲಿ ಪ್ರಜಾ ವಾತ್ಸಲ್ಯವು ಅಪಾರವಾಗಿತ್ತು, ಪ್ರಭುತ್ವದ ಸಂದೇಶಗಳಿಗೆ ಅಪಾರವಾದ ಮನ್ನಣೆ ನೀಡುತ್ತಿದ್ದರು. ಬೇರೆ, ಬೇರೆ ನೆಲೆಗಟ್ಟಿನಲ್ಲೂ ಕನ್ನಡದ ಸಂಸ್ಕೃತಿಗಳು ಬೇರೂರಿದೆ.ನಾಡು ನುಡಿ ಬಗ್ಗೆ ಕೃತಿಗಳಲ್ಲಿ ಅಪಾರವಾದ ಅಭಿಮಾನ ತುಂಬಿ ತುಳುಕಾಡುತ್ತಿರುವುದನ್ನು ಕಾಣಬಹುದಾಗಿದೆ. ಸಂಗೀತಾದ ಜೂತೆಗೆ ಹಿಂದುಸ್ತಾನಿ ಸಂಗೀತಾ, ಜಾನಪದವನ್ನು ಕಾಣಬಹುದಿತ್ತು.ಜಾನಪದಗಳಲ್ಲಿ ೧೭೧ ಕಲಾ ಪ್ರಕಾರಗಳನ್ನು ಇರುವುದು ಅದೀಗ ೨೦೦ಕ್ಕೂ ಹೆಚ್ಚು ವಿಸ್ತರಿಸಿದ್ದು ಅನೇಕ ವೈಶಿಷ್ಟತೆಗಳನ್ನು ಒಳಗೊಂಡಿರುವ ಸ್ವಾರಸ್ಯ ಸಂಗತಿಗಳನ್ನು ಚಿಮು ಕೃತಿಗಳಲ್ಲಿ ಕಂಡು ಬರುವುದು ಎಂದು ವಿವರಿಸಿದರು,
ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯೆನ್ನುವುದು ಸಂವಿಧಾನ, ಅಂಬೇಡ್ಕರ್‌ಗೆ ಬಗೆದ ದ್ರೋಹವಾಗಲಿದೆ. ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಯಾವೂದೇ ಪರಿಚ್ಛೆದಗಳಲ್ಲಿ ಉಲ್ಲೇಖಿಸಿಲ್ಲ. ಭಾರತದ ಪ್ರಮುಖವಾದ ೨೨ ಭಾಷೆಗಳಲ್ಲಿ ಹಿಂದಿಯೂ ಒಂದು ಭಾಷೆಯಾಗಿದೆ ಅಷ್ಟೆ ಹೊರತಾಗಿ ರಾಷ್ಟ್ರ ಭಾಷೆಯಲ್ಲ ಎಂದು ಉತ್ತರ ಭಾರತದವರಿಗೆ ಅರಿವು ಮೂಡಿಸಿ ಪ್ರಭುತ್ವಕ್ಕೆ ಕಿವಿ ಹಿಂಡುವ ಮೂಲಕ ಅನೇಕ ವಿಚಾರಗಳ ಅರಿವು ಮೂಡಿಸುವುದ ಅಗತ್ಯವಿದೆ ಎಂದು ಪ್ರತಿಪಾದಿಸಿದರು,
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿದಾನಂದಮೂರ್ತಿಯವರ ಪುತ್ರ ವಿನಾಯ್ ಅವರಿಗೆ ಪುಸ್ತಕವನ್ನು ಕೊಡುಗೆಯಾಗಿ ನೀಡಲಾಯಿತು, ಚಿಮು ಮೊಮ್ಮಗ ಅಮೋಘ ಸಹ ಪಾಲ್ಗುಂಡು ಛಾಯ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಪಕ ಡಾ.ಎಸ್.ತ್ಯಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿಮೂ ಎಷ್ಟೆ ಮೇರು ಪರ್ವತವಾಗಿದ್ದರೂ ಅವರು ವಿದ್ಯಾರ್ಥಿಗಳ ಮುಂದೆ ಮಗುವಾಗಿರುತ್ತಿದ್ದರು. ನಾಡು ನುಡಿಯ ನೈಜ ಹೋರಾಟಗಾರರಾಗಿ ಯಾವೂದೆ ಪ್ರಚಾರವಿಲ್ಲದೆ ಕರ್ನಾಟಕದಲ್ಲಿ ಆಡಳಿತ ಭಾಷೆಯಾನ್ನಾಗಿ ಮಾಡುವಲ್ಲಿ ಯಶಸ್ವಿಯಾದರು, ಕನ್ನಡ ಸಂಸ್ಕೃತಿಯನ್ನು ಭಾಷೆ ವಿಜ್ಞಾನಗಳಲ್ಲಿ ಚಿಮೂ ಅವರನ್ನು ಮಾತನಾಡಲು ಸಾಧ್ಯವೇ ಇಲ್ಲ. ಅದರೆ ಚಿಮು ಅವರಿಗೆ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೌರವಗಳು ಸಿಗದೆ ಹೋದದ್ದು ವಿಷಾಧನೀಯ ಸಂಗತಿಯಾಗಿದೆ ಎಂದರು,
ಕನ್ನಡ ಎಂಬುವುದ ಒಂದು ಭಾಷೆ ಮಾತ್ರವಲ್ಲ ಕನ್ನಡಂಗಳ್ ಎಂದರೆ ಭಾಷೆ, ಜೀವನ, ಸಂಸ್ಕೃತಿ ಆಚಾರ,ವಿಚಾರಗಳು ಒಳಗೊಂಡಂತೆ ಅಪಾರವಾದ ಅರ್ಥದಿಂದ ಕೊಡಿರುವುದು ಕನ್ನಡ ಸಂಸ್ಕೃತಿಯಾಗಿದೆ. ಕನ್ನಡ ಭಾಷೆಯ ಸೌಂದರ್ಯ ವೈವಿದ್ಯಮತೆಯಿಂದ ಕೊಡಿರುವ ಸಾಹಿತಿಗಳ ವಿಭಿನ್ನ ಶೈಲಿಗಳ ಕನ್ನಡ ಭಾಷೆಯಾಗಿದೆ ಎಂದು ಉದಾಹರಿಸಿದರು.
ಅದಿಮ ಎನ್.ಗೋವಿಂದಪ್ಪ ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಣೆ ಮಾಡಿದರು.