
ಬೆಂಗಳೂರು ಆ. ೨೬-ನಾಗೇಂದ್ರ ರಾಜೀನಾಮೆ ಮಾಹಿತಿ ಇಲ್ಲ. ಸರ್ಕಾರ ಇದೆ ಸಿಎಂ ಇದ್ದಾರೆ. ಪಕ್ಷದ ಅಧ್ಯಕ್ಷರು ಇದ್ದಾರೆ
ಎಲ್ಲವನ್ನೂ ಅವರು ನೋಡಿಕೊಳ್ತಾರೆ, ಅವರು ಉತ್ತರ ಕೊಡ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಸಿದ ಅವರು ನಾನು ಉತ್ತರ ಕೊಡುವ ಸ್ಥಾನದಲ್ಲಿ ಇಲ್ಲ. ನಾಗೇಂದ್ರ ಬಗ್ಗೆ ನನ್ನ ಬಳಿಯೇನೂ ಚರ್ಚೆ ಆಗಿಲ್ಲ.
ಅವರೆಲ್ಲ ನಾಯಕರು ಎತ್ತರದ ಸ್ಟೇಜ್‌ನಲ್ಲಿ ಇದ್ದಾರೆ, ಅವರೇ ಉತ್ತರ ಕೊಡ್ತಾರೆ ಎಂದರು.
ನಾಗೇಂದ್ರ ರಾಜೀನಾಮೆ ಕೊಡ್ತಾರೋ ಇಲ್ಲವೋ ಗೊತ್ತೇ ಇಲ್ಲ. ಹೇಗೆ ಉತ್ತರ ನೀಡಲಿ? ನಮ್ಮ ಜೊತೆಯಂತೂ ಸಿಎಂ ಆಗ್ಲಿ ಯಾರಾಗ್ಲಿ ಚರ್ಚೆ ಮಾಡಿಲ್ಲ.
ಅಧ್ಯಕ್ಷರು ಸಿಎಂ ನಮಗಿಂತ ಮೇಲಿದ್ದಾರೆ ಅವರೇ ಉತ್ತರ ನೀಡ್ತಾರೆ ಎಂದರು. ಸತೀಶ್ ಜಾರಕಿಹೊಳಿ ಹೇಳಿಕೆ ರಾಜಕೀಯದಲ್ಲಿ ಆರೋಪ ಮಾಡುವುದು ಸ್ವಾಭಾವಿಕ ನಾವು ಕೂಡ ಶೇ. ೪೦ ಕಮಿಷನ್ ಆರೋಪ ಮಾಡಿಲಿಲ್ವಾ ರಾಜಕಾರಣದಲ್ಲಿ ಎಲ್ಲವನ್ನು ನಾವು ಎದುರಿಸಬೇಕು. ನಾಗೇಂದ್ರ ಬಗ್ಗೆ ನಮ್ಮ ಜೊತೆ ಏನು ಚರ್ಚೆ ಆಗಿಲ್ಲಾ. ನಮ್ಮ ಮಟ್ಟದಲ್ಲಿ ಈ ವಿಚಾರ ಇಲ್ಲಾ. ಸಿಎಂ , ಅಧ್ಯಕ್ಷರು ಇದರ ಬಗ್ಗೆ ಉತ್ತರ ಕೊಡುತ್ತಾರೆ.
ನಾಗೇಂದ್ರ ಈ ವಿಚಾರವಾಗಿ ನನ್ನ ಜೊತೆ ಚರ್ಚೆ ಮಾಡಿಲ್ಲಾ. ಸಚಿವ ಸ್ಥಾನ ಕೊಡುವಾಗ ನಮ್ಮ ಜೊತೆ ಚರ್ಚೆ ಆಗಿತ್ತು ಎಂದು ಹೇಳಿದರು. ಬಿಜೆಪಿ ಪಾದಯಾತ್ರೆ ಸಮುದಾಯದ ಮತಗಳ ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಆಗುವ ವಿಚಾರ ಲಾಭನೂ ಇಲ್ಲಾ, ನಷ್ಟಾನು ಆಗುವುದಿಲ್ಲಾ. ನಮ್ಮ ದುಡ್ಡು ಎಲ್ಲಿ ಹೋಗಿಲ್ಲಾ ಸರ್ಕಾರ ಆ ಹಣವನ್ನು ವಾಪಸ್ ಪಡೆದುಕೊಳ್ಳುತ್ತಿದೆ. ಸಮುದಾಯದವರು ಏನು ಆತಂಕ ಪಡುವ ಅಗತ್ಯ ಇಲ್ಲಾ ಎಂದರು.
ಸಮುದಾಯವಾರು ಡಿಸಿಎಂ ಬೇಡಿಕೆ ವಿಚಾರ. ವಿಚಾರದ ಬಗ್ಗೆ ಪ್ರತಿಕ್ರಿಸಿದ ಅವರು ನಾಲ್ಕೈದು ಡಿಸಿಎಂಗಳು ಆದರೆ ಯಾರು ಡಿಸಿಎಂ ಎಂಬುವುದು ಗೊತ್ತಾಗುತ್ತಿರಲಿಲ್ಲ. ಈ ಹಿಂದೆ ಒಬ್ರೆ ಇದ್ರು ಈಗಲೂ ಒಬ್ರೆ ಡಿಸಿಎಂ ಇದ್ದಾರೆ. ಸಿದ್ದರಾಮಯ್ಯ ಅವರ ಕಾಲಾವಧಿಲ್ಲಿ ಲೀಡರ್ ಆಗಲಿಕ್ಕೆ ಬಿಡ್ತೀರಿಲಿಲ್ಲಾ. ಅನೇಕ ಜನ ಕಾಲ ಎಳೆದರು. ಹಾಗೇ ನಮ್ಮನ್ನು ಯಾರು ತಡೆದರು ಆಗೋದು. ಯಡಿಯೂರಪ್ಪ ಅವರನ್ನು ಕಾಲೆಳೆದರು. ಅವರು ಲೀಡರ್ ಆದರೂ ಎಂದು ಮಾರ್ಮಿಕವಾಗಿ ಹೇಳಿದರು.

































