ಅರಿವು ಮೂಡಿಸುವ ಕಾರ್ಯಕ್ಕೆ ಕಲೆಗಿಂತ ಶ್ರೇಷ್ಠ ಮಾಧ್ಯಮ ಮತ್ತೊಂದಿಲ್ಲ

ಧಾರವಾಡ, ಆ.13: ಇಂದಿನ ಸರ್ಕಾರ ಅನೇಕ ರೀತಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುμÁ್ಠನಗೊಳಿಸಿ, ಜನರ ಜೀವನಮಟ್ಟ, ಅರ್ಥಿಕ ಸ್ಥಿತಿ ಸುಧಾರಣೆಗೆ ನಿರಂತರ ಪ್ರಯತ್ನಿಸುತ್ತಿವೆ. ಇದರ ಪ್ರಯೋಜನ, ಯೋಜನೆಗಳ ಸೌಲಭ್ಯ ಸಮಾಜದ ಪ್ರತಿಯೊಬ್ಬರಿಗೂ ತಲುಪಬೇಕಾದರೆ ಅವುಗಳ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದು ಕೇಂದ್ರ ಸಂಸ್ಕøತಿ ಮಂತ್ರಾಲಯದ ತಜ್ಞರ ಸಮಿತಿ ಸದಸ್ಯ ಹಾಗೂ ಹಿರಿಯ ಕಲಾವಿದ ಡಾ.ಶಶಿಧರ ನರೇಂದ್ರ ಅವರು ಹೇಳಿದರು.


ಅವರು ಧಾರವಾಡದ ವಾರ್ತಾಭವನದಲ್ಲಿ ನಡೆದ ಬೀದಿ ನಾಟಕ ಮತ್ತು ಸಂಗೀತ ಕಲಾತಂಡಗಳ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.


ಉತ್ಸಾಹ, ಸಮಾಜದ ಬಗ್ಗೆ ನಿಮಗಿರುವ ಕಳಕಳಿ ಮತ್ತು ಕಲೆಯ ಮೇಲಿನ ನಿಮ್ಮ ಪ್ರೀತಿಯನ್ನು ನೋಡಿ ನಮಗೆ ಹೆಮ್ಮೆಯಾಗಿದೆ. ಅರಿವು ಮೂಡಿಸುವ ಕಾರ್ಯಕ್ಕೆ ಕಲೆಗಿಂತ ಶ್ರೇಷ್ಠವಾದ ಮಾಧ್ಯಮ ಮತ್ತೊಂದಿಲ್ಲ. ನಮ್ಮ ಧಾರವಾಡದ ನೆಲ, ಇದು ಕಲೆ-ಸಾಹಿತ್ಯ-ಸಂಗೀತವನ್ನು ಉಸಿರಾಡುವ ಪುಣ್ಯಭೂಮಿ. ಇದು ಕೇವಲ ಒಂದು ಕಲಾತಂಡಗಳ ಆಯ್ಕೆ ಪ್ರಕ್ರಿಯೆಯಲ್ಲ. ಇದೊಂದು ದೊಡ್ಡ ಸಾಮಾಜಿಕ ಜವಾಬ್ದಾರಿಯ ಹೊಣೆಗಾರಿಕೆ. ಸರ್ಕಾರದ ಯೋಜನೆಗಳು ಜನರಿಗಾಗಿ, ಜನರ ಒಳಿತಿಗಾಗಿ ರೂಪುಗೊಳ್ಳುತ್ತವೆ. ಆದರೆ, ಎμÉ್ಟೂೀ ಬಾರಿ ಈ ಯೋಜನೆಗಳ ಸಂಪೂರ್ಣ ಮಾಹಿತಿ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ತಲುಪುವುದಿಲ್ಲ ಎಂದು ಧಾರವಾಡ ಆಕಾಶವಾಣಿ ನಿವೃತ್ತ ಹಿರಿಯ ಉದ್ಘೋಷಕರು ಡಾ. ಶಶಿಧರ ನರೇಂದ್ರ ಅವರು ಹೇಳಿದರು.


ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ಪ್ರತಿಯೊಂದು ತಂಡವೂ ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿರಬೇಕು. ಕಲೆ ಕೇವಲ ಮನರಂಜನೆಯ ವಸ್ತುವಲ್ಲ. ಅದು ಸಮಾಜದ ಆತ್ಮಸಾಕ್ಷಿ. ಬೀದಿ ನಾಟಕ, ಜನಪದ ಸಂಗೀತ, ತತ್ವಪದಗಳು ಇವೆಲ್ಲವೂ ಜನರ ನಡುವಿನಿಂದಲೇ ಹುಟ್ಟಿಬಂದ ಕಲಾಪ್ರಕಾರಗಳು. ಇವುಗಳಿಗೆ ಯಾವುದೇ ವೇದಿಕೆ, ಟಿಕೆಟ್ ಅಥವಾ ಆಹ್ವಾನ ಪತ್ರಿಕೆಯ ಹಂಗಿಲ್ಲ. ಆದ್ದರಿಂದ ಜನರಿಗೆ ಬೀದಿ ನಾಟಕಗಳ ಮೂಲಕ ಸರ್ಕಾರದಿಂದ ಬಂದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವಲ್ಲಿ ಕಲಾತಂಡದ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.


ಧಾರವಾಡ ಜಿಲ್ಲೆಯ ಜನರಿಗೆ ಅವರ ಭಾμÉಯಲ್ಲಿ, ಅವರದ್ದೇ ಆದ ಮಾತುಗಾರಿಕೆಯನ್ನು ಬಳಿಸಿ ಮಾತನಾಡಿದಾಗ, ಆ ಪ್ರದರ್ಶನ ಹೆಚ್ಚು ಆತ್ಮೀಯವಾಗುತ್ತದೆ. ಉತ್ತರ ಕರ್ನಾಟಕದ ಸೊಗಡನ್ನು, ಇಲ್ಲಿನ ಜಾನಪದ ಹಾಡುಗಳನ್ನು, ಲಾವಣಿ, ಗೀಗೀ ಪದಗಳ ಶೈಲಿಯನ್ನು ನಿಮ್ಮ ಪ್ರದರ್ಶನದಲ್ಲಿ ಅಳವಡಿಸಿಕೊಂಡರೆ, ಜನರಿಗೆ ಅದು ಬೇಗನೆ ತಲುಪುತ್ತದೆ ಎಂದು ಅವರು ತಿಳಿಸಿದರು.


ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುರೇಶ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ, ಅವರ ಮನಸ್ಸಿನಂಗಳಕ್ಕೆ ತಲುಪಿಸಲು ಪ್ರಯತ್ನಿಸಬೇಕು. ನಾವು ಕೇವಲ ಸಂದೇಶವನ್ನು ಸಾರುವ ತಂಡಗಳನ್ನು ಹುಡುಕುತ್ತಿಲ್ಲ. ಆ ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ, ಕಲಾತ್ಮಕವಾಗಿ ಪ್ರಸ್ತುತಪಡಿಸುವ ತಂಡಗಳು ನಮಗೆ ಬೇಕು. ನಿಮ್ಮ ಅಭಿನಯ, ಸಂಗೀತ, ಸಂಭಾಷಣೆಗಳಲ್ಲಿ ಜನರಿಗೆ ಅರ್ಥವಾಗುವ ಭಾμÉಯಲ್ಲಿ ಇರಬೇಕು. ನೋಡುಗರನ್ನು ಹಿಡಿದಿಡುವ ಶಕ್ತಿ ನಿಮ್ಮ ಪ್ರದರ್ಶನದಲ್ಲಿರಬೇಕು ಎಂದು ತಿಳಿಸಿದರು.


ಗೃಹಲಕ್ಷ್ಮಿ ಇರಬಹುದು, ಯುವನಿಧಿ ಇರಬಹುದು, ಯಾವುದೇ ಯೋಜನೆಯನ್ನು ನೀವು ಆರಿಸಿಕೊಂಡರೂ, ಅದರ ಉದ್ದೇಶ, ಪ್ರಯೋಜನಗಳು ಮತ್ತು ಅದನ್ನು ಪ್ರದರ್ಶಿಸುವ ವಿಧಾನವನ್ನು ಅತ್ಯಂತ ಸರಳವಾಗಿ, ಸ್ಪಷ್ಟವಾಗಿ ಜನರಿಗೆ ಮುಟ್ಟಿಸಬೇಕು. ಗೊಂದಲಕ್ಕೆ ಅವಕಾಶವಿರಬಾರದು ಎಂದು ತಿಳಿಸಿದರು.


ಸರ್ಕಾರದ ಮತ್ತು ಜನರ ನಡುವಿನ ಸೇತುವೆಯಾಗಿ ನೀವು ಕೆಲಸ ಮಾಡಬೇಕಿದೆ. ನಿಮ್ಮ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ ಹಳ್ಳಿಗಳಲ್ಲಿ ಜನರಿಗೆ ಸರ್ಕಾರದ ಯೋಜನೆಗಳು ತಿಳಿಯಬೇಕಿದೆ ಎಂದು ಅವರು ಹೇಳಿದರು.


ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಆರೋಗ್ಯ ಇಲಾಖೆಯ ಆರ್.ಸಿ.ಎಚ್.ಓ ಡಾ.ಸುಜಾತಾ ಹಸವೀಮಠ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಯಶ್ರೀ ಹಿರೇಮಠ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಆಯ್ಕೆ ಸಮಿತಿಯ ಸದಸ್ಯರಾಗಿ ಉಪಸ್ಥಿತಿರಿದ್ದರು.


ಹಿರಿಯ ಜಾನಪದ ಕಲಾವಿದರಾದ ಡಾ. ರಾಮು ಮೂಲಗಿ, ಶಂಭಯ್ಯ ಹಿರೇಮಠ, ಪ್ರಭು ಕುಂದರಗಿ, ಮಲ್ಲಪ್ಪ ಹೊಂಗಲ ಸೇರಿದಂತೆ ವಿವಿಧ ಕಲಾವಿದರು ಹಾಗೂ ಸಂಗೀತ ಕಲಾ ತಂಡಗಳಾದ ಜೆ.ಕೆ.ಜೆ.ಜೆ. ಟ್ರಸ್ಟ್ ಜನಪದ ಸಂಗೀತ ಕಲಾ ತಂಡ, ಶ್ರೀಕೃಷ್ಣ ಗೀಗೀ ಮೇಳ ಹಾಗೂ ಜಾನಪದ ಕಲಾವಿದರ ಸಂಘ, ಶ್ರೀ ಪಾಂಡುರಂಗ ರುಕುಮಾಯಿ ಸಾಂಸ್ಕøತಿಕ ಸೇವಾ ಟ್ರಸ್ಟ್, ಸುಸ್ವರ ಸಂಗೀತ ಕಲಾ ಬಳಗ, ಶ್ರೀ ಸಿದ್ಧಾರೋಢ ಜನಪದ ಸಾಹಿತ್ಯ ಮತ್ತು ಕಲಾ ತಂಡಗಳು ಹಾಗೂ ಬೀದಿ ನಾಟಕದ ತಂಡಗಳಾದ ಸಮುದಾಯ ಧಾರವಾಡ, ಕಲ್ಪವೃಕ್ಷ ಟ್ರಸ್ಟ್ (ರಿ), ಅವ್ವ ಸಾಂಸ್ಕøತಿಕ ಹಾಗೂ ಗ್ರಾಮಾಭಿವೃದ್ಧಿ ಸಂಸ್ಥೆ (ರಿ), ಶ್ರೀ ಸ್ವಾಮಿ ವಿವೇಕಾನಂದ ಜಾನಪದ ಕಲಾ ತಂಡ, ಯುವಜನ ಹಾಗೂ ಸಾಂಸ್ಕøತಿಕ ಅಭಿವೃದ್ಧಿ ಕೇಂದ್ರ (ಸಿವೈಸಿಡಿ) ಹರ್ಲಾಪೂರ, ಆದರ್ಶ ಕಲಾ ತಂಡ ಸಂಕ್ಲಿಪೂರ, ತಂತ್ರ ಆರ್ಗನೈಜೇಷನ್ ತಂಡಗಳು ಪಾಲ್ಗೋಂಡಿದ್ದವು.