
ಜೇವರ್ಗಿ:ನ.೬: ಮೇಲ್ವರ್ಗದವರನ್ನು ಬಿಟ್ಟು ಇತರರಲ್ಲಿ ಉತ್ಸಾಹ ಮೂಡಿಸುವಂತಹ ಯಾವುದೇ ಅಂಶ ಹಿಂದೂ ಧರ್ಮದಲ್ಲಿ ಇಲ್ಲ. ಹಾಗಾಗಿ ಹೊಸ ಚಲನಶೀಲತೆಯ ಧರ್ಮಕ್ಕೆ ಸೇರುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದ್ದರು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕ ಡಾ. ಅಶೋಕ ದೊಡ್ಡಮನಿ ಹೇಳಿದರು.
ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಹುಣ್ಣಿಮೆಯ ನಿಮಿತ್ಯ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
೧೯೩೫ ಅಕ್ಟೋಬರ್ ೧೩ ರಂದು ನಾಸಿಕ್‌ನಲ್ಲಿ ನಡೆದ ಶೋಷಿತ ವರ್ಗಗಳ ಸಭೆಯಲ್ಲಿ, ಅಂಬೇಡ್ಕರ್ ಅವರ ಸಲಹೆಯಂತೆ, ಹಿಂದೂ ಧರ್ಮವನ್ನು ತೊರೆದು ತಮಗೆ ಇತರ ಸದಸ್ಯರ ಜತೆಗೆ ಸಮಾನ ಸ್ಥಾನ ನೀಡುವ ಯಾವುದೇ ಧರ್ಮವನ್ನು ಅಪ್ಪಿಕೊಳ್ಳುವಂತೆ ಕೋರುವ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು.
ತಮಗೆ ದೊಡ್ಡ ಸಂಖ್ಯೆಯ ನಿಷ್ಠ ಅನುಯಾಯಿಗಳಿದ್ದ ನಾಗಪುರ ನಗರವನ್ನು ಮತಾಂತರ ಸಮಾರಂಭಕ್ಕೆ ಅವರು ಆಯ್ಕೆ ಮಾಡಿಕೊಂಡರು. ೧೯೫೬ ಅಕ್ಟೋಬರ್ ೧೪ರಂದು ಸಮಾರಂಭದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿ ಕೊಳ್ಳಲು ಸಾವಿರಾರು ಜನರು ನಾಗಪುರದ ಅಂಬೇಡ್ಕರ್ ಪರಿಶಿಷ್ಟ ಜಾತಿ ಒಕ್ಕೂಟದ ಕಚೇರಿಯ ಮುಂದೆ ಸಾಲು ನಿಂತಿದ್ದರು. ೧೨ ನೇ ತಾರೀಕಿನಂದು ನಾಗಪುರದತ್ತ ಬರುತ್ತಿದ್ದ ಎಲ್ಲ ರೈಲು, ಬಸ್ ಮತ್ತು ಇತರ ವಾಹನಗಳು ಅಂಬೇಡ್ಕರ್ ಅವರ ಅನುಯಾಯಿಗಳಿಂದ ತುಂಬಿ ಹೋಗಿದ್ದವು ಎಂದರು.
ನಿಗದಿಯAತೆ ಅಕ್ಟೋಬರ್ ೧೪ ರಂದು ಮತಾಂತರ ನಡೆಯಿತು. ಸಾವಿರಾರು ಜನರು ಬೆಳಗ್ಗಿನಿಂದಲೇ ನಿಲ್ಲದ ಅಲೆಗಳಂತೆ ಈ ಸ್ಥಳಕ್ಕೆ ಧಾವಿಸುತ್ತಿದ್ದರು. ಬೃಹತ್ ಹಿಮ ಕುಸಿತದಂತೆ ದೊಡ್ಡ ದೊಡ್ಡ ಜನ ಸಮೂಹಗಳು ರಸ್ತೆಗೆ ಬಂದದ್ದರಿAದ ರಸ್ತೆ ಸಂಚಾರ ತಾಸುಗಟ್ಟಲೇ ಸ್ಥಗಿತವಾಗಿತ್ತು.
ಜಗತ್ತಿನ ಯಾವುದೇ ಭಾಗದಲ್ಲಿ ನಡೆದಿರದಂತಹ ಸಮಾರಂಭ ನಗರದ ಹೊರವಲಯದ ಹತ್ತು ಲಕ್ಷ ಚದರ ಅಡಿ ವಿಸ್ತಾರವಾದ ಮೈದಾನದಲ್ಲಿ ನಡೆಯಿತು. ಇಲ್ಲಿ ಜನ ಸಾಗರವೇ ನೆರೆದಿತ್ತು. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ ಮೂರು ಲಕ್ಷಕ್ಕೂ ಹೆಚ್ಚು ಅಂಬೇಡ್ಕರ್ ಅನುಯಾಯಿಗಳು ಅಂದು ಬೌದ್ಧ ಧರ್ಮ ಸೇರಿದರು ಎಂದರು.
ಮೊದಲಿಗೆ ಅಂಬೇಡ್ಕರ್ ಮತ್ತು ಅವರ ಹೆಂಡತಿ ಸವಿತಾಬಾಯಿ ಮತಾಂತರಗೊAಡರು. ಬರ್ಮಾದಿಂದ ಬಂದಿದ್ದ ೮೩ ವರ್ಷದ ಬೌದ್ಧ ಭಿಕ್ಷು ಚಂದ್ರಮೋನಿ, ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಅವರ ಹೆಂಡತಿಯನ್ನು ಹೊಸ ಧರ್ಮಕ್ಕೆ ಬರಮಾಡಿಕೊಂಡರು. ಭಿಕ್ಷು ಹೇಳಿದಂತೆ ಇವರಿಬ್ಬರೂ ಪ್ರತಿಜ್ಞೆ ಸ್ವೀಕರಿಸಿದರು. ನಂತರ ಅಲ್ಲಿ ಸೇರಿದ್ದ ಅನುಯಾಯಿಗಳಿಗೆ ಅಂಬೇಡ್ಕರ್ ಅವರು ಮರಾಠಿಯಲ್ಲಿ ಸಾಮೂಹಿಕವಾಗಿ ಪ್ರತಿಜ್ಞೆ ಬೋಧಿಸಿದರು.
ಮತಾಂತರ ವಿಧಿಗಾಗಿ ಹೆಂಡತಿಯ ಜತೆ ವೇದಿಕೆ ಏರಿದಾಗ ‘ಕಿವಿಗಡಚಿಕ್ಕುವ ಚಪ್ಪಾಳೆ ಮೂಲಕ ಅವರಿಗೆ ಶುಭ ಹಾರೈಸಲಾಯಿತು ಎಂದು ಹೇಳುವ ಮೂಲಕ ಮತಾಂತರ ಪ್ರಕ್ರಿಯ ಕಣ್ಣಿಗೆ ಕಟ್ಟುವಂತೆ ಡಾ. ಅಶೋಕ ದೊಡಮನಿ ವಿವರಿಸಿದರು.
ಸರ್ವತೋಮುಖ ಬೆಳವಣಿಗೆಗೆ ಧರ್ಮದ ನಂಬಿಕೆ ಅತ್ಯಂತ ಅಗತ್ಯ. ಆದರೆ ಹಿಂದೂ ಧರ್ಮದ ಸಿದ್ಧಾಂತಗಳು ಶೋಷಿತರಿಗೆ ವಿಮೋಚನೆಗೆ ಇರುವ ಅತ್ಯಂತ ದೊಡ್ಡ ತೊಡಕಾಗಿವೆ ಎಂದು ಅಂಬೇಡ್ಕರ್ ವಾದವಾಗಿತ್ತು ಎಂದರು.ಇದೆ ಸಮಯ ದ ಲ್ಲಿ ಕನ್ನಡ ರಾ ಜೋ ತ್ಸ ವ ಪುರಸ್ಕತ ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾ ಯಿ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ ಅಧ್ಯಕ್ಷ ಮತ್ತು ಸಂಜೆ ವಾಣಿ ವರದಿ ಗಾ ರ ಮರೆಪ್ಪ ಬೇಗಾರ್ ಅವರಿಗೆ ಸನ್ಮಾನ ಸತ್ಕಾರ ಮಾಡಲಾ ಯಿತ್ತು
ಕಾರ್ಯಕ್ರಮದಲ್ಲಿಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಹರನಾಳ, ಭೀಮರಾಯ ನಗನೂರ, ತಾಲೂಕು ಬೌದ್ಧ ಸಮಾಜದ ಅಧ್ಯಕ್ಷ ಮಲ್ಲಣ್ಣ ಕೊಡಚಿ, ಶ್ರೀಮಂತ ಧನಕರ್, ಸಿದ್ರಾಮ ಕಟ್ಟಿ, ಮಲ್ಲಿಕಾರ್ಜುನ ಕೆಲ್ಲೂರ, ರಾಜಶೇಖರ್ ಶಿಲ್ಪಿ, ರವಿ ಕುಳಗೇರಿ, ಅಶೋಕ ದೊಡ್ಡಮನಿ, ಶ್ರೀಹರಿ ಕರಕಳ್ಳಿ, ಸಿದ್ದು ಕೇರೂರ್, ಯಶವಂತ ಬಡಿಗೇರ್, ಮಲ್ಲಮ್ಮ ಕೊಬ್ಬಿನ್, ಜಗದೇವಿ ಜಟ್ನಾಕರ್, ವಿಶ್ವರಾಧ್ಯ ಮಾಯೆ ಗವ್ಹಾರ್, ರಾಯಪ್ಪ ಬಾರಿಗಿಡ ಸಂತೋಷ ಮಳ್ಳಿ ಸಿದ್ದುರಾಮ ಕಟ್ಟಿ ಸಿದ್ದು ಶರ್ಮ, ದೇವೀದ್ರ ವರ್ಮಾ , ಗುಂಡಪ್ಪ ಜಡಗಿ, ಮಾಪಣ್ಣ ಕಟ್ಟಿ, ಮಿಲಿಂದ ಸಾಗರ, ಭಾಗಣ್ಣ ಕೊಳಕೂರ, ದೇವೀದ್ರ ಬಡಿಗೇರ್, ಸುನಿಲ್ ಬಡಿಗೇರ್, ರವಿ ಸರಕಾರ ಸುರೇಶ ಡುಗನಕರ ಗುರಲಿಂಗಪ್ಪ ಗುಡುರ ವಿಜಯಕುಮಾರ ಧರೆನ್ ಮರೆಪ್ಪ ಜನಿವಾರ ಅಯ್ಯಪ್ಪ ಜಮಖಂಡಿ ಭೀಮರಾಯ ಬಳಬಟ್ಟಿ ಭಾಗಣ್ಣ ಸಿದ್ನಾಳ್ ಇ ತರರು ಇದ್ದರು.























