ಗುರುಮಠಕಲ್: ಸೆ.23:ಕ್ಷಯರೋಗ ಮತ್ತು ಹೆಡ್ಸ್ ಕಾಯಿಲೆಯು ಬಂದವರು ಎಲ್ಲಾ ಆರೋಗ್ಯ ಸಮುದಾಯದಗಳಲ್ಲಿ ಪರಿಕ್ಷೆ ಮಾಡಿಸಿ ಕೊಳ್ಳಬಹುದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ. ಸಂಜೀವ ಕುಮಾರ ರಾಯಚೂರಕರ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಠಕಲ್ ನಲ್ಲಿ ರಾಷ್ಟ್ರೀಯ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ ಯಾದಗಿರಿ ಜಿಲ್ಲೆ, ಹದಿಹರೆಯದ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಟಿಬಿ ಮತ್ತು ಹೆಚ್ ಐ ವಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂತಹ ಕಾಯಿಲೆಗಳು ಅಸುರಕ್ಷಿತ ಲೈಂಗಿಕತೆಯಿಂದ ಮತ್ತು ರಕ್ತವನ್ನು ಪರಿಕ್ಷೆಮಾಡಿಸಿಕೊಳ್ಳಲಾರದೆ ಇರುವುದು, ತಾಯಿಯಿಂದ ಮಗುವಿಗು ಕೂಡ ಬರಬಹುದು, ಇನ್ನೂ ಅನೇಕತರದ ರೋಗಲಕ್ಷಣಗಳನ್ನು ಮತ್ತು ಸೂಕ್ತ ಪರಿಹಾರದ ನಿವಾರಣೆಗಳನ್ನು ವಿಧ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷವಹಿಸಿದ ಪ್ರಾಂಶುಪಾಲರು ಪೆÇ್ರೀ. ಜೆ, ವಿ, ಪುರುಷೋತ್ತಮ ಜೊಶಿ ಸಂಕ್ಷಿಪ್ತವಾಗಿ ಕಾಯಿಲೆ ಬಗ್ಗೆ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳಿದರು.ಈ ವೇಳೆ ತಾಲೂಕ ಸರಕಾರಿ ನೌಕರರ ಅಧ್ಯಕ್ಷರು ಸಂತೋಷ ಕುಮಾರ ನಿರೇಟಿ ಮಾತನಾಡಿ ವಿಧ್ಯಾರ್ಥಿಗಳ ಜೀವನ ಬಹಾಳ ಬೆಲೆಬಾಳುವಂತದ್ದು ಇಂತಹ ಜೀವನ ಮತ್ತೆ ಬರುವುದಿಲ್ಲ ಎಂದು ಹೇಳುತ್ತ ಕಾಯಿಲೆ ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸುವದರ ಜೋತೆಗೆ ಮುಂದಿನ ದಿನಗಳಲ್ಲಿ ವಿಧ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳು ಸಂಘದವತಿಯಿಂದ ಮಾಡುವುದಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.ಈ ಕಾರ್ಯಕ್ರಮದಲ್ಲಿ ತಾಲೂಕ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಮಹೇಶ್ ಕುಮಾರ್ ಸಜ್ಜನ್,ಐ ಪಿ ಎ ಸಿ ಸಂಚಾಲಕರು ಪೆÇೀ. ಇಮ್ರಾನ್ ಖಾಜಿ ಹಾಗೂ ಪೆÇೀ. ಬಾಬುದೊರೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಪ್ರಶಾಂತ್, ಹುಸೇನ್ ಕಾಡ್ಲೂರು, ಆರ್ ಕೆ ಎಸ್ ಕೆ ಸಮಾಲೋಚಕರು ರಾಕೇಶ್ ಹಾಗೂ ಕಾಲೇಜಿನ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಹಾಜರಿದ್ದರು.
























