Home ಜಿಲ್ಲೆ ಹಿಂದೂ ಧರ್ಮೀಯ ಆಚರಣೆಗಳಲ್ಲಿ ಸನ್ಮಾರ್ಗವಿದೆ : ಸೀಮಾ

ಹಿಂದೂ ಧರ್ಮೀಯ ಆಚರಣೆಗಳಲ್ಲಿ ಸನ್ಮಾರ್ಗವಿದೆ : ಸೀಮಾ

ತಾಳಿಕೋಟೆ:ಮೇ.೨೭:ಆದಿ ಕಾಲದಿಂದಲೂ ಹಿಂದೂ ಧರ್ಮೀಯ ಪದ್ದತಿಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಹಬ್ಬ ಹರಿದಿನಗಳಲ್ಲಿ ಪುರಾಣ ಪ್ರವಚನಗಳಲ್ಲಿ ಅರ್ಥ ಗರ್ಬಿತವಾದಂತಹ ಸನ್ಮಾರ್ಗ ತೋರುವಂತ ಕಾರ್ಯ ನಡೆಯುತ್ತಾ ಸಾಗಿಬಂದಿದ್ದರೂ ಅಂತಹ ಆಚರಣೆಗಳಲ್ಲಿ ಅಧಿಕಮಾಸದಲ್ಲಿ ಪಡೆಯುವಂತಹ ಪೂಜಾ ಫಲವು ಸಹ ಒಂದಾಗಿದೆ ಎಂದು ಶ್ರೀ ಸೋಮವಂಶ ಆರ್ಯ ಕ್ಷತ್ರೀಯ ಸಮಾಜದ ಮಹಿಳಾ ಮಂಡಳದ ಹಿರಿಯರಾದ ಶ್ರೀಮತಿ ಸೀಮಾ ಚವ್ಹಾಣ ಅವರು ನುಡಿದರು.
ಮಂಗಳವಾರರAದು ಶ್ರೀ ನಿಮಿಷಾಂಬಾದೇವಿ ಮಂದಿರದಲ್ಲಿ ಸೋಮವಂಶ ಆರ್ಯಕ್ಷತ್ರೀಯ ಸಮಾಜ ಮಹಿಳಾ ಮಂಡಳದ ವತಿಯಿಂದ ಅಧಿಕಮಾಸದ ನಿಮಿತ್ಯ ಏರ್ಪಡಿಸಲಾದ ಕುಂಕುಮಾರ್ಚನೆ ಮಹಾಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡುತ್ತಿದ್ದ ಅವರು ಅಧಿಕ ಎಂದರೆ ಹೆಚ್ಚು ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಹೆಚ್ಚಿಗೆ ಆಗುವ ಕಾರ್ಯಗಳಿಗೆ ಅಧಿಕವೆನ್ನಲಾಗುತ್ತದೆ ಮೂರು ವರ್ಷಕ್ಕೊಮ್ಮೆ ಬರುವಂತಹ ಈ ಮಾಸದಲ್ಲಿ ಶ್ರೀ ದೇವಿಗೆ ಅರ್ಪಿಸಲಾಗುವಂತಹ ಕುಂಕುಮಾರ್ಚನೆಯು ಅತೀವ ಮಹತ್ವ ಪಡೆದುಕೊಂಡಿದೆ ಎಂದರು. ಇಂತಹ ಮಾಸದಲ್ಲಿ ದೇವಾದಿ ದೇವತೆಗಳ ಪೂಜೆ ನಡೆಯುವದು ಹೆಚ್ಚು ಆದರೆ ಲಗ್ನ ಮುಂಜವಿಗಳAತಹ ಶುಭಕಾರ್ಯಗಳನ್ನು ಮಾಡುವದಿಲ್ಲಾ ಈ ಕುರಿತು ಶ್ರೀಗಳು ತಿಳಿಸಿಕೊಡಲಿದ್ದಾರೆಂದರು.
ಇನ್ನೋರ್ವ ದಿವ್ಯ ಸಾನಿಧ್ಯ ವಹಿಸಿ ಮಹಾಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಅಧಿಕಮಾಸವೆಂದರೇನು ಎಂಬುದರ ಕುರಿತು ತಿಳಿಹೇಳಿದ ಶ್ರೀ ವೆಂಕಟೇಶ್ವರ ಸಂಸ್ಕೃತ ಪಾಠಶಾಲೆಯ ವೇ|| ಶ್ರೀ ವೆಂಕಟೇಶ ಆಚಾರ್ಯ ಗ್ರಾಮಪುರೋಹಿತ ಅವರು ಮಾತನಾಡಿ ಶಾಸ್ತç ಹೇಳಿದಂತೆ ಶಾಸ್ತç ಪ್ರಮಾಣವನ್ನು ಅರ್ಥೈಯಿಸಿಕೊಂಡು ನಡೆಯಬೇಕಾಗಿದೆ ಎಂದು ೧೨ ಮಾಸಗಳ ಕುರಿತು ವಿವರಿಸಿದ ಅವರು ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೇರುವದಕ್ಕೆ ಸಂಕ್ರಮಣ ಎಂದು ಕರೆಯಲಾಗುತ್ತದೆ ಸೂರ್ಯದೇವನು ಧನು ರಾಶಿ ಬಿಟ್ಟು ಮಕರ ರಾಶಿಗೆ ಹೋದಾಹ ಮಕರ ಸಂಕ್ರಮಣವೆನ್ನಲಾಗುತ್ತದೆ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಯಾವ ಒಳ್ಳೆಯ ಕಾರ್ಯಗಳನ್ನು ಮಾಡುವದಿಲ್ಲಾ ಈ ಅಧಿಕಮಾಸಕ್ಕೆ ಪುರುಷೋತ್ತಮ ಮಾಸವೆಂದು ಕರೆಯಲಾಗುತ್ತದೆ ಈ ಅಧಿಕ ಮಾಸದಲ್ಲಿ ಮಾಡುವಂತಹ ಪೂಜಾ ಫಲವನ್ನು ಭಗವಂತನೇ ಕೊಡುತ್ತಾನೆ ಶಾಸ್ತçಗಳಲ್ಲಿ ತಿಳಿಸಿದಂತೆ ವಿಷಯಗಳನ್ನು ಅರಿತುಕೊಂಡು ಪೂಜೆ ಪುನಸ್ಕಾರಗಳನ್ನು ಹಾಗೂ ದಾನಧರ್ಮ ಮಾಡಬೇಕೆಂದು ೧೮ ಪುರಾಣಗಳನ್ನು ರಚಿಸಿದ ವೇದವ್ಯಾಸರ ಕುರಿತು ತಿಳಿಹೇಳಿದ ಶ್ರೀಗಳು ನಿಂದನೆಯೆAಬುದು ಬೇಡ ಇಂತದ್ದರಿAದ ಶಿಕ್ಷೆಎಂಬುದು ಅನುಭವಿಸಬೇಕಾಗುತ್ತದೆ ಎಂಬುದು ಶಾಸ್ತçಗಳಲ್ಲಿ ಹೇಳಲಾಗಿದೆ ದೇವರ ಪೂಜೆ ಮಾಡಿದರೆ ಇದ್ದುದ್ದರಲ್ಲಿಯೇ ದಾನಧರ್ಮ ಮಾಡಿ ದೇವನ ಒಲುಮೆ ಪಡೆಯಬೇಕೆಂದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ನಿಮಿಷಾಂಬಾದೇವಿ ಅರ್ಚಕರಾದ ವೇ|| ಯಲಗೂರೇಶ ಆಚಾರ್ಯ ಅವರು ಶ್ರೀ ದೇವಿಗೆ ಮಹಾಭಿಷೇಕ ಬಿಲ್ವಾರ್ಚನೆ ಪುಷ್ಪಾರ್ಚನೆ ಮಹಾಮಂಗಳಾರತಿ ನಡೆಸಿಕೊಟ್ಟರು.
ಈ ಸಮಯದಲ್ಲಿ ಸೋಮವಂಶ ಆರ್ಯಕ್ಷತ್ರೀಯ ಸಮಾಜದ ಮಹಿಳಾ ಮಂಡಳದ ಗೀತಾಬಾಯಿ ಉಭಾಳೆ, ಸಂಗೀತಾ ಬುಸಾರೆ, ಜ್ಯೋತಿ ಚೌಧರಿ, ಸವಿತಾ ಮಿರಜಕರ, ಸುನಿತಾ ಪಿಂಪಳೆ, ದೀಪಾ ಉಬಾಳೆ, ಅಕ್ಕಮ್ಮ ಚವ್ಹಾಣ, ಪೀತಾಂಭರಿ ಪಿಂಪಳೆ, ಜ್ಯೋತಿ ಚವ್ಹಾಣ, ಸವಿತಾ ಚವ್ಹಾಣ, ಅಂಬಿಕಾ ಪೇಠಕರ, ಸುನಿತಾ ಮಿರಜಕರ, ಭಾರತಿ ಚವ್ಹಾಣ, ರೇಖಾಬಾಯಿ ಉಭಾಳೆ, ಜ್ಯೋತಿ ಉಭಾಳೆ, ಸಂಗೀತಾಬಾಯಿ ಉಭಾಳೆ ಮೊದಲಾದವರು ಪಾಲ್ಗೊಂಡಿದ್ದರು.