ಭಾರತ ದೇಶ ಇಸ್ರೇಲೀಕರಣ ಮಾಡುವ ಹುನ್ನಾರ ನಡೆದಿದೆ : ಪರಕಾಲ ಪ್ರಭಾಕರ್

ಬೀದರ್ : ಫೆ.೪:ಎಸ್ ಐ ಅರ್ ಜಾರಿಗೊಳಿಸುತ್ತಿರುವವರು ತುಂಬಾ ಸ್ಮಾರ್ಟ್ ಇದ್ದಾರೆ. ಇಂಡಿಯಾ ದೇಶಕ್ಕೆ ಇಸ್ರೇಲ್ ಮಾಡುತ್ತಿದ್ದಾರೆ. ಹಾಗಾಗಿ ತುಂಬಾ ಜಾಗರುಕರಾಗಬೇಕಿದೆ. ಭಾರತ ದೇಶ ಇಸ್ರೇಲೀಕರಣ ಆಗುತ್ತಿರುವುದು ಖಚಿತವಿದೆ. ಇದರ ವಿರುದ್ಧ ಯಾವುದೇ ಪಕ್ಷಗಳು ಧ್ವನಿ ಎತ್ತುವುದಿಲ್ಲ. ಇದರ ವಿರುದ್ಧ ಜನರು ಬೀದಿಗಿಳಿಯಬೇಕಾಗಿದೆ. ಆವಾಗ ಮಾತ್ರ ಇದನ್ನು ತಡೆಯಲು ಸಾಧ್ಯವಿದೆ ಎಂದು ಆರ್ಥಿಕ ತಜ್ಞ ಪರಕಾಲ್ ಪ್ರಭಾಕರ್ ಅವರು ಹೇಳಿದರು.

ನಗರದ ಡಾ. ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಮಂಗಳವಾರ ನಡೆದ ಎಸ್‌ಐಆರ್ ಕುರಿತು ಚಿಂತನ-ಮAಥನ ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಎಷ್ಟು ದಿನ ಇಂತಹ ಚರ್ಚೆ, ಕಾರ್ಯಕ್ರಮ ಮಾಡುತ್ತೇವೆಯೋ ಗೊತ್ತಿಲ್ಲ. ೧೫ನೇ ಆಗಸ್ಟ್ ದಂದು ಇನ್ನು ಎಷ್ಟು ವರ್ಷ ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜ ಹಾರಿಸುತ್ತೇವೋ ಗೊತ್ತಿಲ್ಲ. ಭವಿಷ್ಯ ಈ ವರ್ಷ ಹಾರಿಸಬಹುದು, ಆದರೆ ಮುಂದಿನ ವರ್ಷ ಹಾರಿಸಲಾಗುತ್ತದೆ ಎಂದು ನನಗೆ ಹೇಳುವುದಕ್ಕೆ ಆಗುವುದಿಲ್ಲ. ಧ್ವಜ ಹಾರಿಸಲಾಗುವುದು. ಆದರೆ ಅದು ತಿರಂಗಾ ಇರುತ್ತದೆಯೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತದಲ್ಲಿ ಎಸ್‌ಐಆರ್ ಎರಡನೇ ಹಂತದಲ್ಲಿ ೬.೫ ಕೋಟಿ ಜನರು ಮತದಾರರ ಪಟ್ಟಿಯಿಂದ ಅಳಿಸುವ ಪಟ್ಟಿಯಲ್ಲಿದ್ದಾರೆ. ಇದು ಸಣ್ಣ ಸಂಖ್ಯೆಯಲ್ಲ, ಜಗತ್ತಿನ ಶೇ. ೮೫ರಷ್ಟು ದೇಶಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಬದುಕುತ್ತಾರೆ. ಈ ಎ ಎಸ್ ಐ ಅರ್ ಮುಗಿಯುವವರೆಗೂ ೧೬.೫ ಕೋಟಿ ಜನರ ನಾಗರೀಕತೆಯನ್ನು ರದ್ದುಗೊಳಿಸಲಾಗುತ್ತಿದೆ. ನಾಗರೀಕತೆಯ ಹತ್ಯೆಯಾಗುತ್ತಿದೆ ಆದರೆ ರಕ್ತ ಹರಿಯುತ್ತಿಲ್ಲ ಎಂದು ತಿಳಿಸಿದರು.

ಖ್ಯಾತ ಅಂಕಣಕಾರ, ಚಿಂತಕ ಶಿವಸುಂದರ್ ಅವರು ಮಾತನಾಡಿ, ಕೆಲ ವರ್ಷಗಳ ಹಿಂದಿನಿAದ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿವೆ. ಆ ದಾಳಿ ಇವಾಗ ಕೊನೆ ಹಂತಕ್ಕೆ ಬಂದು ತಲುಪಿದೆ. ಆ ದಾಳಿಯ ಒಂದು ಪ್ರಮುಖ ಭಾಗವೇ ಈ ಎಸ್ ಐ ಅರ್ ಆಗಿದೆ ಎಂದು ಹೇಳಿದರು.

ಎಸ್ ಐ ಅರ್ ಎಂದರೆ ಮೋದಿ ಸರ್ಕಾರ ಭಾರತದ ೧೪೦ಕೋಟಿ ಜನರು ವಿದೇಶಿಗರಿದ್ದಾರೆ ಎಂದು ಅವರ ಮೇಲೆ ಹಾಕಿದ ಎಸ್‌ಐಆರ್ ಆಗಿದೆ. ವಿದೇಶಿ ನುಸುಳುಕೊರರನ್ನು ಚುನ್ ಚುನ್ ಕೆ ಭಗಾವುಂಗಾ ಎಂದು ಅಮಿತ್ ಷಾ ಅವರು ಮಾತನಾಡಿದರು. ಆದರೆ ಇವರು ವಿದೇಶಿ ನುಸುಳುಕೊರರನ್ನು ಹುಡುಕುತ್ತಿಲ್ಲ. ಬದಲಾಗಿ ಎಲ್ಲ ಭಾರತೀಯರು ನಾವು ಭಾರತೀಯರು ಎಂದು ಅವರನ್ನು ದಾಖಲೆಗಳ ಮೂಲಕ ತಿಳಿಸಬೇಕಾಗಿದೆ. ಅವರು ಕೇಳುವ ದಾಖಲೆ ನಮ್ಮ ಹತ್ತಿರ ಇರುವುದಿಲ್ಲ. ನಾವು ಕೊಡುವ ದಾಖಲೆ ಅವರು ಒಪ್ಪುವುದಿಲ್ಲ ಎಂದು ಕಿಡಿ ಕಾರಿದರು.

ನಾಗರೀಕ ಹಕ್ಕುಗಳ ಪ್ರತಿಪಾದಕಿ ತಾರಾ ರಾವ್ ಅವರು ಮಾತನಾಡಿ, ನಾವೆಲ್ಲರೂ ಇವಾಗ ಮಾತನಾಡಿ ಕುಗ್ಗಿದ್ದೇವೆ. ಮಾತಾಡುವುದರ ಜೊತೆಗೆ ನಾವು ಹೋರಾಟ ಮಾಡಬೇಕಾಗಿದೆ. ಎ ಎಸ್ ಐ ಅರ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ ಜಯ ಗಳಿಸಬೇಕಿದೆ ಎಂದರು.

೨೦೨೪ರ ಚುನಾವಣೆ ನಂತರ ಜನ ಮತದಾನ ನೀಡುವುದಿಲ್ಲ ಎಂದು ಅವರು ತುಂಬಾ ಹೆದರಿದ್ದಾರೆ. ಅದಕ್ಕಾಗಿಯೇ ಅವರು ಎಸ್ ಐ ಅರ್ ತರುತ್ತಿದ್ದಾರೆ. ನಮ್ಮಿಂದ ಮತದಾನದ ಹಕ್ಕು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಇವರು ಕಸಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವ ಕೆಲಸ ನಾವು ಮಾಡಬೇಕಿದೆ ಎಂದು ಹೇಳಿದರು.