ಇಂದಿನ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆಯ ಮನೋಭಾವದ ಅವಶ್ಯಕತೆಯಿದೆ

ಕಲಬುರಗಿ:ನ.28:ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮನೋಭಾವವನ್ನು ಬೆಳೆಸಿಕೊಂಡು ಅಧ್ಯಯನ ಮಾಡಿ ಉನ್ನತ ಸರಕಾರಿ ಹುದ್ದೆಗಳನ್ನು ಪಡೆಯಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಆದರ್ಶ ನಗರ ಕಲಬುರಗಿಯ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜಿಲ್ಲಾ ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪಾಂಡು ಎಲ್. ರಾಠೋಡ್ ಮಾತನಾಡಿದರು. ವಿದ್ಯಾರ್ಥಿಗಳು ಸತತ ಪ್ರಯತ್ನ ಇಚ್ಛಾಶಕ್ತಿಯಿಂದ ಅಧ್ಯಯನದಲ್ಲಿ ತೊಡಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಠಿಣ ತಯಾರಿ ಮಾಡಿಕೊಂಡು ಸಾಧನೆ ಮಾಡಬೇಕು. ಎನ್ ಎಸ್ ಎಸ್ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತದೆ ಪರೋಪಕಾರ ಹಾಗೂ ನಿಸ್ವಾರ್ಥ ಮನೋಭಾವ ಬೆಳೆಸುತ್ತದೆ. ವಿದ್ಯಾರ್ಥಿಗಳ ಸವಾರ್ಂಗಿಣ ವ್ಯಕ್ತಿತ್ವ ವಿಕಸನ ಮಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಪ್ರಾಂಶುಪಾಲರಾದ ರಾಜು ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಶಿಸ್ತು ಸಯಂಮ ಮತ್ತು ತಾಳ್ಮೆ ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳು ಶಿಬಿರದ ಕಲಿತಿರುವ ಅನುಭವವನ್ನು ಮುಂದೆ ಕಾಲೇಜಿನ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಂಡು ಕಾಲೇಜಿನ ಉನ್ನತಿಗೆ ಶ್ರಮಿಸಬೇಕು ವಾರ್ಷಿಕ ಶಿಬಿರದ ಯಶಸ್ವಿಗೆ ಸಹಕರಿಸಿದ ಎಲ್ರ ಸೇವೆಯನ್ನು ಸ್ಮರಿಸಿದರು. ಮುಖ್ಯ ಗುರುಗಳಾದ ಶ್ರೀಧರ ಪಸ್ತಾಪುರ ಮಾತನಾಡಿ ಗಾಂಧೀಜಿಯವರ ಚಿಂತನೆಯಾದ ಸರ್ವೋದಯದ ಪ್ರತಿಫಲವಾಗಿ ಎನ್ ಎಸ್ ಎಸ್ ದೇಶದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ ವಿದ್ಯಾರ್ಥಿಗಳನ್ನ ರಾಷ್ಟ್ರದ ಸೇವೆಗೆ ಸನ್ನದಗೊಳಿಸುವುದೇ ಎನ್ ಎಸ್ ಎಸ್ ಆಗಿದೆ. ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ವಾರ್ಷಿಕ ಶಿಬಿರದ ನಿಮಿತ್ತ ಸಸಿಗಳನ್ನು ನೇಡಲಾಯಿತು.
ಉಪನ್ಯಾಸಕರಾದ ಜಗದೇವಿ ಶಿಬಿರದ ವರದಿ ವಾಚಿಸಿದರು. ಕಾರ್ಯಕ್ರಮ ಅಧಿಕಾರಿ ವಿಠಲ್ ಭಾವಿಮನಿ,ಉಪನ್ಯಾಸಕರುಗಳಾದ ಸವಿತಾ ಸಿಎಂ
ಬನಶಂಕರಿ, , ಸೈಯದ್ ಅಬ್ದುಲ್ ಖಾದರ್, ಭಾರತಿ ಪಾಂಡ್ವೆ,ಗೋಪಾಲ ಮುಂತಾದವರು ಉಪಸ್ಥಿತರಿದ್ದರು.