Home ಜಿಲ್ಲೆ ಕಲಬುರಗಿ ಯಶಸ್ಸಿನ ಹಾದಿಗೆ ಕಷ್ಟಗಳು ನೂರಾರುಸವಾಲು ಎದುರಿಸಲು ಜ್ಞಾನ ಅವಶ್ಯಕ, ಕಲಿತಿದ್ದು ವ್ಯರ್ಥವಾಗುವುದಿಲ್ಲ:ಥಾವರ ಚಂದ್ ಗೆಹ್ಲೋಟ್

ಯಶಸ್ಸಿನ ಹಾದಿಗೆ ಕಷ್ಟಗಳು ನೂರಾರುಸವಾಲು ಎದುರಿಸಲು ಜ್ಞಾನ ಅವಶ್ಯಕ, ಕಲಿತಿದ್ದು ವ್ಯರ್ಥವಾಗುವುದಿಲ್ಲ:ಥಾವರ ಚಂದ್ ಗೆಹ್ಲೋಟ್

ಕಲಬುರಗಿ,ಫೆ.25:ಜೀವನದಲ್ಲಿ ಯಶಸ್ಸಿನ ಹಾದಿ ಯಾವಾಗಲೂ ಸುಲಭವಲ್ಲ. ಸವಾಲುಗಳು ಎದುರಾಗುತ್ತವೆ, ಸಂದರ್ಭಗಳು ಬದಲಾಗುತ್ತವೆ, ಆದರೆ ನಿಮ್ಮಲ್ಲಿ ಆತ್ಮವಿಶ್ವಾಸ, ನೈತಿಕ ಮೌಲ್ಯಗಳು ಮತ್ತು ಕಠಿಣ ಪರಿಶ್ರಮದ ಮನೋಭಾವವಿದ್ದರೆ, ನೀವು ಪ್ರತಿಯೊಂದು ಅಡೆತಡೆಯನ್ನೂ ನಿವಾರಿಸಿ ಜೀವನದಲ್ಲಿ ಗೆಲ್ಲಬಹುದು ಎಂದು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿದ ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ನೀವು ಪಡೆಯುವ ಶಿಕ್ಷಣವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಸಾಧಿಸಲು ಸಹಾಯ ಮಾಡುವುದಲ್ಲದೆ, ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ ಎಂಬುದು ನನ್ನ ದೃಢವಿಶ್ವಾಸ. ಜೀವನದ ಯಶಸ್ಸಿನಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಕಲಿತ ಶಿಕ್ಷಣ ವ್ಯರ್ಥವಾಗುವುದಿಲ್ಲ ಎಂದರು.
ದೇಶವು ತನ್ನ ನಾವೀನ್ಯತೆ, ಉದ್ಯಮಶೀಲತೆ, ಸಂಶೋಧನೆ ಮತ್ತು ಸಾಮಾಜಿಕ ಸೇವೆಯ ಮೂಲಕ ದೇಶದ ಅಭಿವೃದ್ಧಿಗೆ ಯುವ ಸಮೂಹ ಕೊಡುಗೆ ನೀಡಬೇಕೆಂದು ನಿರೀಕ್ಷಿಸುತ್ತದೆ. ಸಮಾಜದ ದುರ್ಬಲ ವರ್ಗಗಳ ಬಗ್ಗೆ ಸಂವೇದನಾಶೀಲರಾಗಿರಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತರಾಗಿರಿ ಮತ್ತು ನಿಮ್ಮ ಜ್ಞಾನವನ್ನು ಮಾನವೀಯತೆಯ ಸೇವೆಯಲ್ಲಿ ಬಳಸುವ ಮೂಲಕ ರಾಜದಯ ಮತ್ತು ರಾಷ್ಟ್ರದ ಕೀರ್ತಿ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಕ್ಷಣದ ಉದ್ದೇಶ ಕೇವಲ ಜ್ಞಾನ ಸಂಪಾದನೆಯಲ್ಲ, ಬದಲಾಗಿ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯಾಗಿದೆ. ಶಿಕ್ಷಣವು ನಮ್ಮಲ್ಲಿ ವಿವೇಕ, ಸೂಕ್ಷ್ಮತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ತುಂಬುತ್ತದೆ. ಇಂದಿನ ಯುಗದಲ್ಲಿ, ಕೌಶಲ್ಯ, ನಾವೀನ್ಯತೆ ಮತ್ತು ತಂತ್ರಜ್ಞಾನದ ತಿಳುವಳಿಕೆಯೊಂದಿಗೆ ಜ್ಞಾನವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿರುವುದು ಸಂತೋಷದ ವಿಷಯ ಎಂದರು.
ಈ ದೇಶ ನಿಮಗೆ ಬಹಳಷ್ಟು ನೀಡಿದೆ, ಈಗ ದೇಶಕ್ಕಾಗಿ ಏನಾದರೂ ಮಾಡುವುದು ನಿಮ್ಮ ಕರ್ತವ್ಯ. ನೀವು ಗಳಿಸಿದ ಜ್ಞಾನದಿಂದ ನೀವು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮೂಲವಾಗುತ್ತೀರಿ ಮತ್ತು “ಸ್ವಾವಲಂಬಿ ಭಾರತ” ನಿರ್ಮಾಣದಲ್ಲಿ ಕೈಜೋಡಿಸುತ್ತೀರಿ ಎಂಬ ಆಶಾಭಾವನೆ ನನ್ನದಾಗಿದೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಒತ್ತು: ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯಗಳ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸುಧಾರಣೆಗೆ ನಮ್ಮ ಸರ್ಕಾರ ಕಟಿಬದ್ದವಾಗಿದ್ದು, ಕೆ.ಕೆ.ಅರ್.ಡಿ.ಬಿ. ಅನುದಾನದಿಂದ ಗ್ರಾಮೀಣ ಭಾಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲಾಗುತ್ತಿದೆ ಎಂದರು.
ಬುನಾದಿ ಭದ್ರವಾದರೆ ಮಾತ್ರ ಮುಂದೆ ಬೆಳೆಯಲು ಸಾಧ್ಯ. ಹೀಗಾಗಿ ನರ್ಸರಿಯಿಂದ ಪಿ.ಯು.ಸಿ ವರೆಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಕನ್ನಡ-ಆಂಗ್ಲ ಬೋಧನೆಯ ಪಬ್ಲಿಕ್ ಶಾಲೆ ಪ್ರಾರಂಭಿಸಲಾಗುತ್ತಿದೆ. ಅಂಗನವಾಡಿ ಶಿಕ್ಷಣದಲ್ಕೂ ಗಮನಾರ್ಹ ಬದಲಾವಣೆ ತರುತ್ತಿದ್ದೇವೆ ಎಂದ ಅವರು, ಮಾತೃ ಭಾμÉ ಜೊತೆಗೆ ಜಾಗತಿಕವಾಗಿ ಉದ್ಯೋಗ ಪಡೆಯಲು, ಉತ್ತಮ ಸಂವಹನಕ್ಕೆ ಇಂಗ್ಲೀμï ಕಲಿಯುವುದು ಅವಶ್ಯಕ ಎಂದು ಪ್ರತಿಪಾದಿಸಿದರು.
ಪಥ ಇರುವ ಕಡೆ ಹೋಗದೆ ಪಥ ಇಲ್ಲದೆ ಕಡೆ ಹೊಸ ಹಾದಿ ನಿರ್ಮಿಸಿ: ಇದಕ್ಕೂ ಮುನ್ನ ಪುಣೆಯ ಉನ್ನತ ರಕ್ಷಣಾ ತಂತ್ರಜ್ಞಾನ ಸಂಸ್ಥೆ (ಡೀಮ್ಡ್ ವಿಶ್ವವಿದ್ಯಾಲಯ)ಯ ವಿಶ್ರಾಂತ ಕುಲಪತಿ ಪೆÇ್ರ. ಎಲ್.ಎಂ. ಪಟ್ನಾಯಕ್ ಅವರು ಘಟಿಕೋತ್ಸವ ಭಾಷಣ ಉದ್ದೇಶಿ ಮಾತನಾಡಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಸಮ ಸಮಾಜದ ಪರಿವರ್ತನೆ ಸಾಧ್ಯ. ಎ.ಐ. ತಂತ್ರಜ್ಞಾನ ಎಲ್ಲೆಡೆ ವ್ಯಾಪಿಸುತ್ತಿದೆ. ಇದನ್ನು ಸಮರ್ಥವಾಗಿ ಬಳಕೆ ಮಾಡಬೇಕಿದ್ದು, ಹೀಗಾಗಿ ಪಥ ಇರುವ ಕಡೆ ಹೋಗದೆ ಪಥ ಇಲ್ಲದೆ ಕಡೆ ಹೋಗಿ ಹೊಸ ಹಾದಿ ನಿರ್ಮಿಸಬೇಕು ಎಂದರು.

ಇಂದು ಜಗತ್ತು ಸಂಘರ್ಷ, ಅಸಹಿಷ್ಣುತೆ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ನಿಮ್ಮಂತಹ ಯುವಜನರ ಅಪಾರ ಶಕ್ತಿಯಿಂದ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸಂಶೋಧನೆ, ಬೋಧನೆ ಮತ್ತು ಕೌಶಲ್ಯಾಭಿವೃದ್ಧಿಯ ಗುಣಮಟ್ಟವನ್ನು ಹೆಚ್ಚಿಸಿ ಭಾರತವನ್ನು ಜ್ಞಾನ ಮಹಾಶಕ್ತಿಯನ್ನಾಗಿ ರೂಪಿಸುವ ಹೊಣೆಗಾರಿಕೆಯನ್ನು ನಿಮ್ಮ ಮೇಲಿದೆ. ಗುಲಬರ್ಗಾ ವಿ.ವಿ. ಘನತೆಯನ್ನು ವಿಶ್ವದೊಳಗೆ ಹರಡುವ ಜ್ಯೋತಿಗಳಾಗಿ ಮತ್ತು ಬ್ರ್ಯಾಂಡ್ ರಾಯಭಾರಿಗಳಾಗಿ ವಿದ್ಯಾರ್ಥಿಗಳು ಹೊರಹೊಮ್ಮಬೇಕಿದೆ ಎಂದರು.

ಇಂದಿಲ್ಲಿ ಸ್ವತಂತ್ರ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದೀರಿ. ನಿಮ್ಮ ಜೀವನವೇ ನಿಮಗೆ ಮೊದಲು ಪರೀಕ್ಷೆ ಮಾಡಿ ಪಾಠ ಕಲಿಸುತ್ತದೆ. ಯಶಸ್ಸು-ವಿಫಲತೆಗಳನ್ನು ಸಮಚಿತ್ತದಿಂದ ಸ್ವೀಕರಿಸಿ. ವಿಫಲತೆ ಮನಸ್ಸಿಗೆ ತಾಕದಿರಲಿ; ಯಶಸ್ಸು ತಲೆಗೆ ಏರದಿರಲಿ. ಇತರರೊಂದಿಗೆ ಹೋಲಿಕೆ ಮಾಡದೆ, ನಿಮ್ಮ ಹಿಂದಿನ ಸಾಧನೆಯನ್ನು ಮೀರಿಸುವುದೇ ನಿಮ್ಮ ಗುರಿಯಾಗಲಿ. ನಿರಂತರ ಪರಿಶ್ರಮ ಯಶಸ್ಸು ತಂದು ಕೊಡಲಿದೆ ಎಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಾಗತೀಕರಣದ ಯುಗದಲ್ಲಿ ಕೌಶಲ್ಯಾಭಿವೃದ್ಧಿ ಅತ್ಯಂತ ಅಗತ್ಯ. ನವೀನತೆ, ಸ್ಟಾರ್ಟ್ ಅಪ್, ಉದ್ಯಮಶೀಲತೆ, ಬಂಡವಾಳ ಹೂಡಿಕೆ, ಬೌದ್ಧಿಕ ಸ್ವತ್ತು ದಿನನಿತ್ಯದ ಬದುಕಿನ ಭಾಗವಾಗಿದೆ. ಇಂದು ಭಾರತವು ವಿಶ್ವದ ಯುವ ರಾಷ್ಟ್ರಗಳಲ್ಲಿ ಒಂದಾಗಿದೆ. 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.54 ಮತ್ತು 15-59 ವರ್ಷದೊಳಗಿನವರ ಜನಸಂಖ್ಯೆ ಶೇ.62ರಷ್ಟಿದೆ. ಈ ಶಕ್ತಿಯನ್ನು ಸಬಲೀಕರಿಸುವ ಸಾಧನವೇ ಕೌಶಲ್ಯಾಭಿವೃದ್ಧಿಯಾಗಿದೆ. ಜ್ಞಾನವನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸುವ ಪರಿಸರವನ್ನು ನಿರ್ಮಿಸನಬೇಕಿದೆ ಎಂದರು.

ಇತ್ತೀಚಿನ ಅಪರೂಪದ ಹವಾಮಾನ ಘಟನೆಗಳು ಭವಿಷ್ಯದ ಭಯಾನಕ ಚಿತ್ರವನ್ನು ಎಳೆದು ತೋರಿಸುತ್ತಿವೆ. ಹವಾಮಾನ ಬದಲಾವಣೆಯ ಅನೇಕ ಪರಿಣಾಮಗಳು ಆರ್ಥಿಕ ವೃದ್ಧಿಯನ್ನೇ ಅಡ್ಡಿಪಡಿಸಬಹುದು. ಇಂದಿನ ಕೋಟ್ಯಂತರ ಜನರಿಗಿಂತಲೂ ಭವಿಷ್ಯದಲ್ಲಿ ಹುಟ್ಟಲಿರುವ ಲಕ್ಷಾಂತರ ಕೋಟಿ ಜನರ ಮೇಲಿನ ನಮ್ಮ ನೈತಿಕ ಹೊಣೆಗಾರಿಕೆ ಇನ್ನಷ್ಟು ದೊಡ್ಡದಿದೆ ಎಂಬುದನ್ನು ಮರೆಯದಿರಿ ಎಂದರು.

ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ: ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸಾಧನೆಗೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಸಾಮಾಜಿಕ ಸೇವೆ ಪರಿಗಣಿಸಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್ ಸೇರಿದಂತೆ ಗಣ್ಯರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಸಾಧಕರ ಜೀವನ ಪರಿಚಯ ಸಹ ತಿಳಿಸಲಾಯಿತು.
77 ವಿದ್ಯಾರ್ಥಿಗಳಿಗೆ 172 ಚಿನ್ನದ ಪದಕ: ವಿವಿಧ ಸ್ನಾತಕ ಪದವಿ ಕೋರ್ಸುಗಳಿಗೆ 24 ಹಾಗೂ ವಿವಿಧ ಸ್ನಾತಕೋತ್ತರ ಕೋರ್ಸುಗಳಿಗೆ 148 ಸೇರಿ ಒಟ್ಟಾರೆ 172 ಚಿನ್ನದ ಪದಕಗಳನ್ನು 58 ಮಹಿಳಾ ವಿದ್ಯಾರ್ಥಿಗಳು ಹಾಗೂ 19 ಪುರುಷ ವಿದ್ಯಾರ್ಥಿಗಳು ಸೇರಿದಂತೆ 77 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇನ್ನುಳಿದಂತೆ 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ಮಹಿಳಾ ವಿದ್ಯಾರ್ಥಿಗಳು ಮತ್ತು 5 ಪುರುಷ ವಿದ್ಯಾರ್ಥಿಗಳು ಸೇರಿ 19 ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು.
19,133 ಅಭ್ಯರ್ಥಿಗಳಿಗೆ ಪದವಿ ಪ್ರದಾನ: ಪದವಿ ಕೋರ್ಸಿನಲ್ಲಿ 15,504, ಸ್ನಾತಕೋತ್ತರ ಕೋರ್ಸ್‍ನಲ್ಲಿ 3,462, ಪಿ.ಜಿ. ಡಿಪೆÇ್ಲಮಾ ಕೋರ್ಸಿನಲ್ಲಿ 44 ಹಾಗೂ ಪಿ.ಎಚ್.ಡಿ. ಪದವಿ 123 ಸೇರಿದಂತೆ ಒಟ್ಟಾರೆ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ 19,133 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 10,463 ಪುರುಷ ಹಾಗೂ 8,670 ಮಹಿಳಾ ವಿದ್ಯಾರ್ಥಿಗಳು ಸೇರಿದ್ದಾರೆ.
ಚಿನ್ನದ ಪದಕ ಅಪ್ಪಿಕೊಂಡವರು: ಗುಲಬರ್ಗಾ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಕು. ಚನ್ನಮ್ಮ ಇವರು ಅತಿ ಹೆಚ್ಚು 11 ಚಿನ್ನದ ಪದಕ ಪಡೆದು ನಗೆ ಬೀರಿದ್ದಾರೆ.

ಪ್ರಾಣಿಶಾಸ್ತ್ರ ವಿಭಾಗದ ಕು. ರಾಹುಲ್ ಇವರು 9, ಎಂಬಿಎ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಕು. ಸುರೇಖಾ 8, ರಾಜ್ಯಶಾಸ್ತ್ರ ವಿಷಯದಲ್ಲಿ ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು. ಶಮೀಮ ರಫತ್ 6, ಸಮಾಜ ಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಕು. ದೀಪಾ 6, ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಸುಬೀಯಾ ನೂರೈನ್ 5, ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕು. ಪ್ರಿಯಾಂಕಾ ರಾಠೋಡ್ 5, ಜೀವ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಕು. ಶಶಿಕುಮಾರ್ 5 ಹಾಗೂ ಕಲಬುರಗಿ ನಗರದ ಗುರುಕುಲ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ಪ್ರೀತಿ ಜಿ. ಖೇಮ್ಕರ್ ಅವರು ಬಿ.ಕಾಂ. ಕೋರ್ಸಿನಲ್ಲಿ 5 ಚಿನ್ನದ ಪದಕ ಪಡೆದ ಪ್ರಮುಖ ವಿದ್ಯಾರ್ಥಿಗಳಾಗಿದ್ದಾರೆ.

ಗುಲಬರ್ಗಾ ವಿ.ವಿ. ಕುಲಪತಿ ಪೆÇ್ರ. ಶಶಿಕಾಂತ್ ಎಸ್. ಉಡಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗುಲಬರ್ಗಾ ವಿ.ವಿ. ಕಳೆದ 4 ದಶಕದಿಂದ ಪ್ರದೇಶದ ಉನ್ನತ ಶಿಕ್ಷಣ ವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ಪಿ.ಎಚ್.ಡಿ. ಪದವಿಯ ಮೌಲ್ಯ ಕಾಪಾಡಲು ಪಡೆಯಲು ಕಳೆದ ಒಂದು ದಶಕದಿಂದ ಪ್ರವೇಶ ಪರೀಕ್ಷೆ ನಡೆಸಿ ಅರ್ಹರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರಸರಾಂಗದ ಮೂಲಕ ಪುಸ್ತಕ ಪ್ರಕಟಿಸಲಾಗುತ್ತಿದೆ. ಅಧ್ಯಯನ ಪೀಠಗಳು ಸಕ್ರಿಯವಾಗಿದ್ದು, ಇಲ್ಲಿನ ಡಿಜಿಟಲ್ ಗ್ರಂಥಾಲಯ ಏಷಿಯಾದಲ್ಲಿ ಪ್ರಮುಖ ಗ್ರಂಥಾಲಯದಲ್ಲಿ ಒಂದಾಗಿದೆ ಎಂದು ವಿ.ವಿ. ಕುರಿತು ಮಾತನಾಡಿದರು.

ಕುಲಸಚಿವ ಪೆÇ್ರ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ ಸೇರಿದಂತೆ ವಿದ್ಯಾ ವಿಷಯಕ್, ಸಿಂಡಿಕೇಟ್ ಸಮಿತಿ ಸದಸ್ಯರು, ವಿ.ವಿ. ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು ಪಾಲಕರು ಭಾಗವಹಿಸಿದ್ದರು.