ರಂಗಭೂಮಿ ಮನುಷ್ಯ ಜೀವನದ ಅತ್ಯಂತ ಪರಿಣಾಮಕಾರಿ ಮತ್ತು ನೈಜ ಪ್ರದರ್ಶನ ಮಾಧ್ಯಮ: ಬಟ್ಟು ಸತ್ಯನಾರಾಯಣ

ಕಲಬುರಗಿ:ಅ.18:ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ, ಇಂಗ್ಲಿμï ವಿಭಾಗಕಲಬುರಗಿಯಲ್ಲಿ2 ಮತ್ತು 3 ನೇಡಿಸೆಂಬರ್2025ರಂದುನಾಟಕ ಮತ್ತುರಂಗಭೂಮಿಯಲ್ಲಿ ಪೌರಾಣಿಕತೆ, ಇತಿಹಾಸ ಮತ್ತು ಪರಂಪರೆ ಎಂಬವಿಷಯದ ಮೇಲೆ ಎರಡುದಿನಗಳಅಂತಾರಾಷ್ಟ್ರೀಯವಿಚಾರ ಸಂಕೀರ್ಣವನ್ನುಆಯೋಜಿಸುತ್ತಿದೆ.
ಸಮ್ಮೇಳನವು ಶೋಧ ಪತ್ರಿಕೆ ಪ್ರಸ್ತುತಿಗಳು, ಪ್ಯಾನೆಲ್ ಚರ್ಚೆಗಳು ಮತ್ತು ಸಮಕಾಲೀನ ನಾಟಕಕೃತಿಗಳ ಪ್ರಕರಣಗಳ ಅಧ್ಯಯನದ ಮೂಲಕ ಸಮೃದ್ಧ ಶೈಕ್ಷಣಿಕ ವಿನಿಮಯವನ್ನುಉತ್ತೇಜಿಸಲು ಉದ್ದೇಶಿಸಿದೆ.ನಾಟಕವು ಸ್ಮರಣೆ, ಗುರುತು, ಆಘಾತ, ಪ್ರತಿರೋಧ ಮತ್ತು ಸಾಂಸ್ಕøತಿಕ ತೇಜಸ್ಸುಗಳೊಂದಿಗೆ ಹೇಗೆ ಸಂವಹನ ಮಾಡುತ್ತದೆಎಂಬುದಕ್ಕೆ ವಿಶೇಷ ಗಮನ ನೀಡಲಾಗುವುದು. ಅನುವಿಭಾಗೀಯ ದೃಷ್ಟಿಕೋನಗಳು ಮತ್ತುಅಂತರ್-ಸಾಂಸ್ಕೃತಿಕ ಸಂವಾದಗಳ ಮೂಲಕ, ಸಮ್ಮೇಳನವು ಪೌರಾಣಿಕತೆ ಮತ್ತುಇತಿಹಾಸವು ಹೇಗೆ ರೂಪಕ ಮತ್ತು ನಾಟಕೀಯಕಥಾನಕದ ಮೂಲಕ ಕಾರ್ಯನಿರ್ವಹಿಸುತ್ತದೆಎಂಬುದನ್ನುಕೇಂದ್ರೀಕರಿಸುತ್ತದೆ. ಇದಲ್ಲದೆ, ನಾಟಕದ ಶಕ್ತಿಯುಹೇಗೆರಾಜಕೀಯ ವಿಮರ್ಶೆ ಮತ್ತು ಸಾಮಾಜಿಕ ವಿಮರ್ಶೆಯ ಸಾಧನವಾಗಿ ಮತ್ತು ವಿಶೇಷವಾಗಿ ನವೀನ ಮತ್ತುವಸಾಹತೋತ್ತರ ಸಂದರ್ಭಗಳಲ್ಲಿ ಕಾರ್ಯಗತವಾಗುತ್ತದೆಎಂಬುದನ್ನು ಪರಿಶೀಲಿಸಲಾಗುವುದು.
ಡೆವಿಡ್‍ಸ್ಚಾಲ್ಕ್ವಿಕ್.ಶೇಕ್ಸ್ಪಿಯರ್‍ಇನ್ಸ್ಟಿಟ್ಯೂಟ್(ಯುಕೆ) ನಿರ್ದೇಶಕ, ಸಾಹಿತ್ಯ ವಿಮರ್ಶಕ ಮತ್ತು ಶೇಕ್ಸ್ಪಿಯರ್‍ಅಧ್ಯಯಕ, ಪೆÇ್ರ.ಎಲಿಸಬೆತ್ತ ಮರಿನೋ,ರೋಮ್‍ಟೋರ್ ವರ್ಗಾಟಾ ವಿಶ್ವವಿದ್ಯಾಲಯ, ಪೆÇ್ರ.ಧನಂಜಯ್ ಸಿಂಗ್‍ಸದಸ್ಯ ಕಾರ್ಯದರ್ಶಿ, ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ, ನವದೆಹಲಿ, ಡಾ. ಖಾಗೇಂದ್ರಅಚಾರ್ಯ, ಕಠ್ಮಂಡುವಿಶ್ವವಿದ್ಯಾಲಯ, ನೇಪಾಳ, ಪೆÇ್ರ.ಅಮಿತ್‍ಕುಮಾರ್, ಇಂಗ್ಲಿμï ಮತ್ತು ವಿದೇಶಿ ಭಾμÉಗಳು ವಿಶ್ವವಿದ್ಯಾಲಯ, ಹೈದ್ರಾಬಾದ್, ಪೆÇ್ರ.ಸಂಧ್ಯಾತಿವಾರಿ, ಕಾಶ್ಮೀರ ಕೇಂದ್ರೀಯ ವಿಶ್ವವಿದ್ಯಾಲಯ, ಕಾಶ್ಮೀರ್ ಮತ್ತುಇತರವಿದ್ವಾಂಸರುಸಮ್ಮೇಳನದಲ್ಲಿ ತಮ್ಮ ವಿಷಯಗಳನ್ನು ಮಂಡಿಸಲಿದ್ದಾರೆ.
ಗೌರವಾನ್ವಿತ ಉಪಕುಲಪತಿ ಪೆÇ್ರ. ಬಟ್ಟು ಸತ್ಯನಾರಯಣಅವರುಇಂದುಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ “ಭಾರತೀಯರಂಗಭೂಮಿ ಬಹಳ ಶ್ರೀಮಂತವಾಗಿದೆ ಮತ್ತುನಾಟಕಪ್ರದರ್ಶನಗಳು ನಮ್ಮನ್ನುಜೀವಂತವಾಗಿರಿಸುತ್ತವೆ. ಇದು ಮಾನವಜೀವನದಅತ್ಯಂತ ವಾಸ್ತವಿಕ ಮತ್ತು ಪರಿಣಾಮಕಾರಿ ಪ್ರಾತಿನಿಧ್ಯವಾಗಿದೆ. ಮಾನವ ಸಮಾಜವುದೈವಿಕ ಪ್ರದರ್ಶನದರಂಗಭೂಮಿಯಾಗಿದೆ, ಕ್ರಿಯೆಗಳು ಮತ್ತು ನಡೆಯುವ ಸ್ಥಳ ನಾಟಕದ ಮುಖ್ಯವಾದ ವಿಷಯಗಳು.”ಎಂದರು.ಅವರುಇಂಗ್ಲೀಷ್ ವಿಭಾಗದಶೈಕ್ಷಣಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.ಕುಲಸಚಿವ ಪೆÇ್ರ.ಆರ್.ಆರ್.ಬಿರಾದರ, ಡೀನ್ ಪೆÇ್ರ.ವಿಕ್ರಮ್ ವಿಸಾಜಿ, ವಿಭಾಗದ ಮುಖ್ಯಸ್ಥ ಪೆÇ್ರ.ಬಸವರಾಜದೋಣೂರು, ಸಂಘಟನಾ ಕಾರ್ಯದರ್ಶಿಗಳಾದ ಡಾ.ರೇಣುಕಾಎಲ್.ನಾಯಕ್, ಮಹೇಂದ್ರ ಎಂ. ಇತರಅದ್ಯಾಪಕರು ಉಪಸ್ಥಿತರಿದ್ದರು.
ವಿಧ್ಯಾರ್ಥಿಗಳು, ಸಂಶೋಧನಾರ್ಥಿಗಳು, ಪ್ರಾಧ್ಯಾಪಕರುಮತ್ತುಸಾಹಿತ್ಯಾಸಕ್ತರು ಈ ಮಹತ್ವಪೂರ್ಣರಂಗಕಲೆ ಮತ್ತು ಪ್ರದರ್ಶನಅಧ್ಯಯನದಚರ್ಚೆಯಲ್ಲಿ ಭಾಗವಹಿಸಲು ಮತ್ತುಕೊಡುಗೆ ನೀಡಲುಆಹ್ವಾನಿತರಾಗಿದ್ದಾರೆ.ಇಂಗ್ಲೆಂಡ್ ಮತ್ತುರೋಮ್‍ನಇಬ್ಬರು ಪ್ರಸಿದ್ಧ ಅಂತಾರಾಷ್ಟ್ರೀಯ ಮಾನ್ಯತೆಯ ಸಾಹಿತ್ಯ ವಿಮರ್ಶಕರು ಈ ಸಮಾರಂಭದಲ್ಲಿಹಾಜರಿರಲಿದ್ದಾರೆ.
ಹೆಚ್ಚಿನ ಮಾಹಿತಿ, ನೋಂದಣಿ ಮತ್ತುಪ್ರಬಂಧಸಲ್ಲಿಕೆ ಮಾರ್ಗಸೂಚಿಗಳಿಗಾಗಿ ಶ್ರೀ ಮಹೇಂದ್ರಎಮ್ (9480146466) ಮತ್ತುಡಾ.ರೇಣುಕಾ ನಾಯಕರನ್ನು (9449673268) ಸಂಪರ್ಕಿಸಬಹುದು.