ಶ್ರದ್ಧಾಭಕ್ತಿಯಿಂದ ಜರುಗಿದ ಯಜ್ಞೋಪವೀತ ಧಾರಣೆ

ಕಲಬುರಗಿ: ಅ.10:ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀಸೂರ್ಯನಾರಾಯಣ ದೇವಸ್ಥಾನದ ಶ್ರೀಯಾಜ್ಞವಲ್ಕ್ಯ ಭವನದಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಪೌರ್ಣಿಮೆಯ ದಿನದಂದು (ಶಕ 1947, ವಿಶ್ವಾವಸುನಾಮ ಸಂವತ್ಸರ, ದಿ. 09-08-2025, ಶನಿವಾರ) ಶುಕ್ಲಯಜುರ್ವೇದಿಯ ಬ್ರಾಹ್ಮಣರು ಸಾಮೂಹಿಕವಾಗಿ ನಿತ್ಯೋಪಾಕರ್ಮ ಮತ್ತು ಯಜ್ಞೋಪವೀತ ಧಾರಣೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ವೇದಮೂರ್ತಿ ಶ್ರೀ ಹರೀಶಾಚಾರ್ಯ ಮತ್ತು ಶ್ರೀರಾಮಾಚಾರ್ಯ ಅವರ ವೈದಿಕತ್ವದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಗಣಪತಿ ಪೂಜೆ, ಮೃತ್ತಿಕಾ ಸ್ನಾನ, ಗೋಮಾಯ ಸ್ನ??, ತೀರ್ಥ ಸ್ನಾನ, ಬ್ರಹ್ಮ ಯಜ್ಞ ಹಾಗೂ ಋಷಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ, ಉಪಾಕರ್ಮ ಹೋಮ, ಗ್ರಹಸ್ತ ಹೋಮ, ಬ್ರಹ್ಮಚರ್ಯ ಹವನ, ಪಂಚಗವ್ಯ ಹಾಗೂ ದಧಿ ಪ್ರಾಶನ, ಗಾಯತ್ರಿ ಮಂತ್ರದೊಂದಿಗೆ ತಿಲ ಹೋಮವನ್ನು ನೆರವೇರಿಸಲಾಯಿತು. ಮಹಾಮಂಗಳಾರತಿ ಮತ್ತು ಮಂತ್ರ ಪುಷ್ಪದೊಂದಿಗೆ ಕಾರ್ಯಕ್ರಮ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಲ್ಹಾರಾವ ಗಾರಂಪಳ್ಳಿ, ಹಿರಿಯರಾದ ಶ್ರೀ ಶಾಮಾಚಾರ್ಯ ಬೈಚಬಾಳ, ಅಶೋಕ್ ಮಳ್ಳಿ, ವೆಂಕಟೇಶ್ ಕುಲಕರ್ಣಿ, ಭೀಮರಾವ್ ಕುಲಕರ್ಣಿ, ಡಾ. ಉಡುಪಿಕೃಷ್ಣ ಜೋಶಿ, ಭೀಮಸೇನರಾವ್ ಸಿಂದಗೇರಿ, ಪ್ರಲ್ಹಾದ ದೇವರು, ಶ್ರೀಧರ್ ಮರಗುತ್ತಿ, ಹನುಮಂತರಾವ್ ತಂಗಡಗಿ, ಪ್ರಾಣೇಶ್ ಬೈಚಬಾಳ್, ವಾಸುದೇವರಾವ್ ಸಿಂಧಗೇರಿ, ಮಂಜುನಾಥ್ ಕುಲ್ಕರ್ಣಿ, ವಿನುತ ಜೋಶಿ, ಅಶ್ವತ್ಥ್ ಜೋಶಿ, ನರಸಿಂಹಾಚಾರ್ಯ ಜೋಶಿ, ಅವಧೂತ ಕುಲ್ಕರ್ಣಿ, ಶ್ರೀನಿವಾಸ್ ಕುಲ್ಕರ್ಣಿ, ಬಾಲಕೃಷ್ಣ ಸಾಲವಾಡಗಿ, ದತ್ತಾತ್ರೆಯ ಸಬ್ನವಿಸ್, ವಿಜಯಾಚಾರ್ಯ ಬೈಚಬಾಳ, ವೆಂಕಟೇಶ್ ಜಾಹಗೀರದಾರ ಸೇರಿದಂತೆ ಸಮುದಾಯದ ನೂರಾರು ಬಾಂಧವರು ಪಾಲ್ಗೊಂಡಿದ್ದರು.